ಪಾಟ್ನಾ: ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕೀಯಕ್ಕೆ ಸುಶೀಲ್ ಕುಮಾರ್ ಮೋದಿಯವರ ಎಂಟ್ರಿ ಪಕ್ಕಾ ಆಗಿದೆ. ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಎನ್ಡಿಎ ಮೈತ್ರಿಕೂಟ ಸುಶೀಲ್ ಕುಮಾರ್ ಮೋದಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ. ಡಿಸೆಂಬರ್ 14ರಂದು ನಡೆಯಲಿರುವ ಚುನಾವಣೆ ನಡೆಯಲಿದೆ.
ಡಿಸಿಎಂ ಪಟ್ಟ ತ್ಯಾಗ ಮಾಡಿದ್ದಕ್ಕ ಸಿಕ್ಕ ಉಡುಗೊರೆ
243 ಸಂಖ್ಯಾಬಲದ ರಾಜ್ಯಸಭೆಯಲ್ಲಿ ಸುಶೀಲ್ ಮೋದಿ ಆಯ್ಕೆಯಾಗಲು 123 ಮತಗಳನ್ನು ಪಡೆಯಬೇಕಿದೆ. ಎನ್ಡಿಎ ಮೈತ್ರಿಕೂಟದ ಬಲ 125 ಇರುವ ಕಾರಣ, ಸುಶೀಲ್ ಮೋದಿ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗುತ್ತಿದೆ. ಬಿಹಾರ ಉಪ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ ಸುಶೀಲ್ ಮೋದಿಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಸ್ಥಾನದ ಉಡುಗೊರೆ ನೀಡಿದೆ.
ಎಲ್ಜೆಪಿ ಕೈತಪ್ಪಿದ ರಾಜ್ಯಸಭೆ
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ರಾಮ್ ವಿಲಾಸ್ ಪಾಸ್ವಾನ್ರ ಎಲ್ಜೆಪಿ ನಡುವಿನ ಒಪ್ಪಂದದ ಪ್ರಕಾರ ಆರು ಲೋಕಸಭಾ ಸ್ಥಾನ ಮತ್ತು ಒಂದು ರಾಜ್ಯಸಭಾ ಸ್ಥಾನ ಎಲ್ಜೆಪಿಗೆ ದಕ್ಕಿತ್ತು. ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅಧಿಕಾರಾವಧಿ 2024ರವರೆಗಿತ್ತು. ಅವರ ಮರಣದ ನಂತರ ತೆರವಾದ ಸ್ಥಾನಕ್ಕೆ ರಾಮ್ ವಿಲಾಸ್ ಪಾಸ್ವಾನ್ ಪತ್ನಿ ರೀನಾ ಪಾಸ್ವಾನ್ ಹೆಸರು ಕೇಳಿಬಂದಿತ್ತು. ಆದರೆ ಈಗ, ಎಲ್ಜೆಪಿ ಪಾಲಿನ ಒಂದು ರಾಜ್ಯಸಭಾ ಸ್ಥಾನವೂ ಬಿಜೆಪಿ ಪಾಲಾಗಿದೆ.
Published On - 2:27 pm, Sat, 28 November 20