ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಮೃತಪಟ್ಟಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಟಿಎಂಸಿ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಸಿಲಗುರಿಯಲ್ಲಿ ಬಿಜೆಪಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಅದನ್ನು ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯನ್ನು ಮುಂದುವರಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ವೇಳೆ ಉಲೇನ್ ರಾಯ್ ಎಂಬುವವರು ಮೃತಪಟ್ಟಿದ್ದಾರೆ.
ದ್ವಂದ್ವ ಹೇಳಿಕೆ: ಪೊಲೀಸರು ಉಲೇನ್ ರಾಯ್ಗೆ ಮನಬಂದಂತೆ ಥಳಿಸಿದ್ದಾರೆ. ಈ ಕಾರಣಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆದರೆ, ನಾವು ರಾಯ್ ಮೇಲೆ ಕೈ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ, ಯಾರ ಹೇಳಿಕೆ ಸರಿ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಬಿಜೆಪಿಯದ್ದೇ ಸಮಸ್ಯೆ: ಇಂದು ಸೃಷ್ಟಿಯಾದ ಸಮಸ್ಯೆ ಬಿಜೆಪಿಯೇ ಮಾಡಿದೆ ಎಂದು ಟಿಎಂಸಿ ನಾಯಕ ಗೌತಮ್ ದೇಬ್ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರೋಕೆ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.
Murder of democracy#ShameonyouMamta!#SaveBengal #SaveBengalFromMamtaBanerjee
Shame on TMC and Mamta ??
Murder of democracy#TejaswiSurya #bengal #WestBengal pic.twitter.com/WZuEVMCvcq— Sagar Lahoti (@BJPSagarLahoti) December 7, 2020
ಸಿಟ್ಟಾದ ತೇಜಸ್ವಿ ಸೂರ್ಯ: ಮಮತಾ ಪೊಲೀಸರು ಎಸೆದ ನಾಡ ಬಾಂಬ್ಗೆ ಉಲೇನ್ ರಾಯ್ ಮೃತಪಟ್ಟಿದ್ದಾರೆ. ಇದೊಂದು ಕೊಲೆ. ನಾವು ತುಂಬಾನೇ ಸಿಟ್ಟಾಗಿದ್ದೇವೆ. ನಾವು ಇದನ್ನು ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
I am informed by our local karyakartas that Sri Ulen Roy, a senior BJP karyakarta, has succumbed to splinter injuries caused by the country bombs that Mamata’s police threw.
This is murder. Nothing less.
We are very angry. We will never forgive you Mamata Di.
Om Shanti! pic.twitter.com/7xgZcKus4n
— Tejasvi Surya (@Tejasvi_Surya) December 7, 2020
Published On - 7:21 pm, Mon, 7 December 20