ವಿಪಕ್ಷಗಳ ಟೀಕೆಗೆ ತಲೆ ಕೆಡಿಸದೆ ಮುಂದೆ ಸಾಗುವ ಪ್ರಧಾನಿ, ಮೋದಿ ಸರ್ಕಾರದ ಸಾಧನೆಯನ್ನು ತೋರಿಸುವ ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ

|

Updated on: Mar 14, 2023 | 9:29 PM

'ಸ್ವಚ್ಛ ಭಾರತ್ ಮಿಷನ್', 'ಪ್ರಧಾನ ಮಂತ್ರಿ ಮುದ್ರಾ ಯೋಜನೆ', 'ಉಜ್ವಲ ಯೋಜನೆ', 'ಜನ್ ಧನ್ ಯೋಜನೆ', 'ಜೀವನ ಜ್ಯೋತಿ ಬಿಮಾ ಯೋಜನೆ', 'ಪಿಎಂ ಆವಾಸ್ ಯೋಜನೆ' ಮತ್ತು 'ಫಸಲ್ ಬಿಮಾ ಯೋಜನಾ’ ವನ್ನು ಇಲ್ಲಿ ಹೈಲೈಟ್ ಮಾಡಲಾಗಿದೆ

ವಿಪಕ್ಷಗಳ ಟೀಕೆಗೆ ತಲೆ ಕೆಡಿಸದೆ ಮುಂದೆ ಸಾಗುವ ಪ್ರಧಾನಿ, ಮೋದಿ ಸರ್ಕಾರದ ಸಾಧನೆಯನ್ನು ತೋರಿಸುವ ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ
ನರೇಂದ್ರ ಮೋದಿ
Follow us on

ಬಿಜೆಪಿ (BJP) ಮಂಗಳವಾರ 2007 ರಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪ್ರಯಾಣವನ್ನು ಚಿತ್ರಿಸುವ ಅನಿಮೇಟೆಡ್ ವಿಡಿಯೊವನ್ನು ಹಂಚಿಕೊಂಡಿದ್ದು ಅದರಲ್ಲಿ ಮೋದಿ (Modi) ಸರ್ಕಾರದ ಎಲ್ಲಾ ಪ್ರಮುಖ ಸಾಧನೆಗಳು ಮತ್ತು ವಿರೋಧ ಪಕ್ಷಗಳ ವಿಫಲ ದಾಳಿಗಳನ್ನು ತೋರಿಸಲಾಗಿದೆ. ಇದರಲ್ಲಿ ವಿಪಕ್ಷಗಳು ಮೋದಿಯನ್ನು ಮೌತ್ ಕಾ ಸೌದಾಗರ್ ಎಂದು ಟೀಕಿಸಿರುವುದು, ಚಾಯ್ ವಾಲಾ ಎಂದು ಲೇವಡಿ ಮಾಡಿರುವುದನ್ನು ತೋರಿಸಲಾಗಿದೆ.

ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಗುರಿಯನ್ನು ಹೊಂದಿರುವ ಮೋದಿ ಅಲ್ಲಿವರೆಗೆ ಹೇಗೆ ತಲುಪಿದರು ಎಂದು ವಿವರಿಸುವ ಅವರು ನಾಲ್ಕು ನಿಮಿಷಗಳ ಅವಧಿಯ ವಿಡಿಯೊ ಇದಾಗಿದೆ. ಅವರು ಪ್ರಧಾನಿ ಕುರ್ಚಿಯತ್ತ ಸಾಗುವ ಮೆಟ್ಟಿಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ, ಅವರನ್ನು ಸೋನಿಯಾ ಗಾಂಧಿ ಅವರು ‘ಮೌತ್ ಕಾ ಸೌದಾಗರ್’ ಎಂದು ಉಲ್ಲೇಖಿಸುತ್ತಾರೆ. ಎಲ್ಲಾ ದಾಳಿಗಳನ್ನು ವಿರೋಧಿಸಿ, ಮೋದಿ ಅವರು ತಮ್ಮ ನಡಿಗೆಯನ್ನು ಮುಂದುವರಿಸುವುದನ್ನು ಕಾಣಬಹುದು. ‘ಚಾಯ್‌ವಾಲಾ’ ಎಂದು ಕರೆದು ಅಮೆರಿಕ ವೀಸಾ ನಿಷೇಧಕ್ಕಾಗಿ ಲೇವಡಿ ಮಾಡಲಾಗುತ್ತಿದೆ. 2014 ರಲ್ಲಿ ಪ್ರಧಾನಿಯಾದ ನಂತರ, ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಮೋದಿಗೆ ‘ಯುಎಸ್‌ಗೆ ಆಹ್ವಾನ’ ನೀಡುವುದನ್ನು ಇದರಲ್ಲಿ ಚಿತ್ರಿಸಲಾಗಿದೆ.


‘ಸ್ವಚ್ಛ ಭಾರತ್ ಮಿಷನ್’, ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’, ‘ಉಜ್ವಲ ಯೋಜನೆ’, ‘ಜನ್ ಧನ್ ಯೋಜನೆ’, ‘ಜೀವನ ಜ್ಯೋತಿ ಬಿಮಾ ಯೋಜನೆ’, ‘ಪಿಎಂ ಆವಾಸ್ ಯೋಜನೆ’ ಮತ್ತು ‘ಫಸಲ್ ಬಿಮಾ ಯೋಜನಾ’ ವನ್ನು ಇಲ್ಲಿ ಹೈಲೈಟ್ ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ರಫೇಲ್ ಆರೋಪ ಮಾಡಿದ್ದು ಕೂಡಾ ಇದರಲ್ಲಿದೆ. ತನ್ನ ಎರಡನೇ ಅವಧಿಯ ಅಧಿಕಾರದ ಅವಧಿಯಲ್ಲಿ, ಯುಎಸ್ ನಿರ್ಮಿತ ಫೈಜರ್ ಮತ್ತು ಮಾಡರ್ನಾ ಲಸಿಕೆಗಳ ಮೇಲೆ ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮೋದಿ ‘ಭಾರತೀಯ ಲಸಿಕೆ’ ಅನ್ನು ಆಯ್ಕೆ ಮಾಡುತ್ತಾರೆ.

ಇದನ್ನೂ ಓದಿ:ಅಶಿಸ್ತಿನ ವರ್ತನೆಗಾಗಿ 15 ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿದ ಉತ್ತರಾಖಂಡ ವಿಧಾನಸಭಾ ಸ್ಪೀಕರ್

ಕೊನೆಗೆ, ‘ಗೌತಮ್ ದಾಸ್’, ‘ಮೋದಿ ತೇರಿ ಖಬರ್ ಕೂದೇಗಿ’ ಮತ್ತು ‘ನೀಚ್’ ಸೇರಿದಂತೆ ಇತರ ದೂಷಣೆಗಳಿಂದ ಪ್ರಭಾವಿತವಾಗದೆ, ಅವರು ‘5 ಟ್ರಿಲಿಯನ್ ಡಾಲರ್ ಆರ್ಥಿಕತೆ’ ಗುರಿಯತ್ತ ಸಾಗುತ್ತಿರುವುದನ್ನು ತೋರಿಸಿ ವಿಡಿಯೊ ಮುಕ್ತಾಯಗೊಳ್ಳುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:27 pm, Tue, 14 March 23