ಬಿಹಾರ: ಆನ್‌ಲೈನ್ ವಿಡಿಯೋ ಗೇಮ್ಸ್ ಮತ್ತು ಕ್ರಿಕೆಟ್ ಆಟಕ್ಕೆ ಅಡಿಕ್ಟ್ ಆಗಿದ್ದ ಬಾಲಕನೊಬ್ಬ ಖತರ್ನಾಕ್ ಐಡಿಯಾ ಮಾಡಿ ಪತರಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.
ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್ ಐಡಿಯಾ ಹೊಳೆದಿದೆ.
ಅಷ್ಟೇ.. ಫ್ರೆಂಡ್ ಮೀಟ್ ಮಾಡಿ ಬರ್ತಿನಿ ಅಂತಾ ಹೊರಗೆ ಹೋದವನೇ ತಾಯಿಗೆ ತನ್ನನ್ನ ಯಾರೋ ಕಿಡ್ನಾಪ್ ಮಾಡಿದ ಹಾಗೆ ಮೆಸೇಜ್ ಕಳಿಸಿದ್ದಾನೆ. ಅದರಲ್ಲಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೆಸೇಜ್ ನೋಡಿ ಕಂಗಾಲಾದ ವಿಧವೆ ತಾಯಿ, ತಕ್ಷಣ ಪಾತ್ರಾನಗರ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾಳೆ.
ತನಿಖೆ ಆರಂಭಿಸಿದ ಪೊಲೀಸರು ಬಾಲಕನನ್ನು ಪೂರ್ನಿಯಾದ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ವಿಚಾರಣೆ ಮಾಡಿದ ಪೊಲೀಸರಿಗೆ ಬಾಲಕ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ. ತಾಯಿ 3.5 ಲಕ್ಷ ರೂ ಲೋನ್ ಪಡೆದಿದ್ದು ಗೊತ್ತಾಯಿತು. ನನಗೆ ದೆಹಲಿ ಅಥವಾ ಮುಂಬೈನಲ್ಲಿ ಕ್ರಿಕೆಟ್ ಅಕಾಡೆಮಿ ಸೇರಲು ಹಣ ಬೇಕಾಗಿತ್ತು. ಹಾಗೇನೇ ವಿಡಿಯೋ ಗೇಮ್ಸ್ ಆಡಲು ಸ್ಮಾರ್ಟ್ ಫೋನ್ ಬೇಕಾಗಿತ್ತು. ಹೀಗಾಗಿ ಈ ಡ್ರಾಮಾ ಮಾಡಿದೆ ಎಂದಿದ್ದಾನೆ.
ಹುಡುಗ ಬುದ್ದಿಯ ಬಾಲಕನ ಪ್ಲಾನ್ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಆದ್ರೆ ಇನ್ನೂ ಚಿಕ್ಕ ಬಾಲಕ ಜೊತೆಗೆ ವಿಧವೆ ತಾಯಿ. ಹೀಗಾಗಿ ವಾರ್ನಿಂಗ್ ಕೊಟ್ಟು ಮನೆಗೆ ಕಳಿಸಿದ್ದಾರೆ.