Breaking News: ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

| Updated By: ರಶ್ಮಿ ಕಲ್ಲಕಟ್ಟ

Updated on: Sep 28, 2022 | 7:25 PM

ಇಂದು ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಹೊಸ ಸೇನಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

Breaking News: ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ
Lieutenant General Anil Chauhan
Follow us on

ಜನರಲ್ ಬಿಪಿನ್ ರಾವತ್ (Bipin Rawat) ಅವರ ಸಾವಿನ ಒಂಬತ್ತು ತಿಂಗಳ ನಂತರ, ಸರ್ಕಾರವು ಇಂದು ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) (Lt Gen Anil Chauhan (Retd)) ಅವರನ್ನು ಸೇನಾ ಪಡೆಗಳ ನೂತನ ಮುಖ್ಯಸ್ಥರನ್ನಾಗಿ (Chief of Defence Staff) ನೇಮಕ ಮಾಡಿದೆ. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್   ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಇನ್ಸ್ಟುಮೆಂಟಲ್  ನೇಮಕಾತಿಗಳನ್ನು ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ದಂಗೆ-ನಿರೋಧಕ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವ ಇವರಿಗಿದೆ. ಈಶಾನ್ಯ ಭಾರತದಲ್ಲಿ ಸೇನಾ ನಾಯಕತ್ವ ವಹಿಸುವ ಮುನ್ನ ಇವರು ನವದೆಹಲಿಯಲ್ಲಿ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿದ್ದ ಇವರು Op Sunriseನ ಮುಖ್ಯ ಶಿಲ್ಪಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎರಡು ದೇಶಗಳ ನಡುವಿನ ಗಡಿಯ ಬಳಿ ಕಾರ್ಯನಿರ್ವಹಿಸುತ್ತಿರುವ ದಂಗೆಕೋರ ಗುಂಪುಗಳ ವಿರುದ್ಧ ಭಾರತೀಯ ಮತ್ತು ಮ್ಯಾನ್ಮಾರ್ ಸೇನೆಗಳು ಸಂಘಟಿತ ಕಾರ್ಯಾಚರಣೆಗಳನ್ನು ನಡೆಸಿದವು. ಭಾರತ-ಪಾಕಿಸ್ತಾನ ಗಡಿಯಲ್ಲಿ ಉಲ್ಬಣಗೊಳ್ಳುವಿಕೆಯ ನಂತರದ ಸ್ಟ್ರೈಕ್ ನಿರ್ವಹಣೆ ಸೇರಿದಂತೆ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್‌ಗಳ ಯೋಜನೆಯಲ್ಲಿ ಅವರು ಭಾಗಿಯಾಗಿದ್ದರು.

 

1961 ರ ಮೇ 18 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನೇಮಕಗೊಂಡರು. ಚೌಹಾಣ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್‌ನ ಹಳೆಯ ವಿದ್ಯಾರ್ಥಿ. ಮೇಜರ್ ಜನರಲ್ ಶ್ರೇಣಿಯಲ್ಲಿ ಉತ್ತರ ಕಮಾಂಡ್‌ನಲ್ಲಿ ನಿರ್ಣಾಯಕ ಬಾರಾಮುಲಾ ವಲಯದಲ್ಲಿ ಪದಾತಿ ದಳದ ವಿಭಾಗವನ್ನು ವಹಿಸಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಸೇನಾ ನೇತೃತ್ವ ವಹಿಸಿದರು.ಬರ್ 2019 ರಿಂದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದು ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾದರು.

ಇವರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕನ ಉಸ್ತುವಾರಿ ವಹಿಸಿದ್ದರು.. ಇದಕ್ಕೂ ಮೊದಲು ಇವರು ಅಂಗೋಲಾಕ್ಕೆ ವಿಶ್ವಸಂಸ್ಥೆಯ ಮಿಷನ್ ಆಗಿ ಸೇವೆ ಸಲ್ಲಿಸಿದ್ದರು. 31 ಮೇ 2021 ರಂದು  ಭಾರತೀಯ ಸೇನೆಯಿಂದ ನಿವೃತ್ತರಾದರು. ಸೇನೆಯಿಂದ ನಿವೃತ್ತರಾದ ನಂತರವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದರು. ಸೇನೆಯಲ್ಲಿನ ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ .

Published On - 6:55 pm, Wed, 28 September 22