ಕೊರೊನಾ ವೈರಸ್ ಜನಜೀವನದ ಮೇಲೆ ತುಂಬ ವ್ಯತಿರಿಕ್ತ ಪ್ರಭಾವ ಬೀರಿದೆ. ಹಾಗೇ ಮದುವೆ ಕಾರ್ಯಕ್ರಮಗಳನ್ನೂ ಅದ್ದೂರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಮದುವೆಗಳಲ್ಲಿ ತುಂಬ ಸಂಖ್ಯೆಯಲ್ಲಿ ಅತಿಥಿಗಳು ಭಾಗವಹಿಸುವಂತಿಲ್ಲ ಎಂದು ನಿರ್ಬಂಧವನ್ನೂ ಹೇರಲಾಗಿದೆ. ಅದರ ಅನ್ವಯ ವಧು-ವರರ ಆಪ್ತರು ಮಾತ್ರ ವಿವಾಹದಲ್ಲಿ ಇರುವಂತಾಗಿದೆ. ಅದೆಲ್ಲ ಬಿಡಿ..ಈಗೊಂದು ಮದುವೆಯ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ ನಿಮಗೂ ಖುಷಿಯಾಗುತ್ತದೆ.
ಇದು ವಧು ಕ್ಯಾಮರಾಕ್ಕೆ ಕದ್ದು ಪೋಸ್ ಕೊಡುವ ವಿಡಿಯೋ. ವಧು-ವರ ಅಕ್ಕಪಕ್ಕ ಕುಳಿತಿರುತ್ತಾರೆ. ಏನೋ ಸಂಪ್ರದಾಯ ನಡೆಯುತ್ತಿರುತ್ತದೆ. ವಧುವಿನ ಬಲಭಾಗಕ್ಕೊಂದು ಕ್ಯಾಮರಾ ಇರುತ್ತದೆ. ಅದನ್ನು ಗಮನಿಸಿದ ವಧು ಅದಕ್ಕೆ ಚೆಂದನೆಯ ಪೋಸ್ ಕೊಡುತ್ತಾಳೆ. ವಿಕ್ಟರಿ ಮಾರ್ಕ್ ತೋರಿಸಿ, ಕಣ್ಣು ಹೊಡೆದು ಕದ್ದು ಪೋಸ್ ಕೊಡುವ ಅಂದವನ್ನು ನೀವು ಈ ವಿಡಿಯೋದಲ್ಲೇ ನೋಡಬೇಕು. ಅಷ್ಟರಲ್ಲಿ ವರ ಕೂಡ ಈ ಕಡೆ ತಿರುಗುತ್ತಾನೆ. ಆದರೆ ಆತನಿಗೇ ಏನೂ ಗೊತ್ತಾಗಲಿಲ್ಲ..ಕ್ಯಾಮರಾವನ್ನು ನೋಡಲಿಲ್ಲ.
ವಧುವಿನ ಪೋಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈಕೆ ಸಖತ್ ಬೋಲ್ಡ್ ಮದುಮಗಳು ಎಂದು ಕಾಮೆಂಟ್ಗಳನ್ನು ಹಾಕಿದ್ದಾರೆ. official_niranjanm87 ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಶೇರ್ ಆಗಿದೆ. 2 ಸಾವಿರಕ್ಕೂ ಅಧಿಕ ಲೈಕ್ಸ್ಗಳು ಬಂದಿದ್ದು, ಅನೇಕರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ನ್ಯೂಸ್ ಓದುವಾಗ ಶಾರ್ಟ್ಸ್ ಧರಿಸಿ ಕುಳಿತ ನ್ಯೂಸ್ ಆ್ಯಂಕರ್! ವಿಡಿಯೋ ವೈರಲ್