Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್
ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್

ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

TV9kannada Web Team

| Edited By: shruti hegde

Jun 07, 2021 | 11:06 AM


ಬೇಸಿಗೆಯ ತಿಂಗಳಿನಲ್ಲಿ ತಾಳಲಾರದಷ್ಟು ಸೆಕೆ. ಫ್ಯಾನ್​​ ಗಾಳಿ ಎಷ್ಟು ಜೋರಾಗಿದ್ದರೂ ಗಾಳಿ ಮಾತ್ರ ತಾಗುವುದೇ ಇಲ್ಲ. ಇಂತಹ ಘೋರಾಕಾರದ ಸೆಕೆಯಲ್ಲಿ ಬಿಬಿಸಿ ನ್ಯೂಸ್​ ಆ್ಯಂಕರ್​ ಓರ್ವರು ಕ್ಯಾಮರಾಕ್ಕೆ ಕಾಣುವಷ್ಟು ಕೋಟ್​ ಶರ್ಟ್​ಅನ್ನು ಶಿಸ್ತಾಗಿ ಧರಿಸಿ. ಸೊಂಟದ ಕೆಳಗೆ ಶಾರ್ಟ್​ ಧರಿಸಿ ಕುಳಿತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಅವರ ಎದುರಿಗೆ ದೊಡ್ಡದಾದ ಮೇಜನ್ನು ಇರಿಸಲಾಗಿದೆ. ಬಿಳಿ ಬಣ್ಣದ ಶರ್ಟ್​ ಹಾಗೂ ಕಪ್ಪು ಬಣ್ಣದ ಕೋಟ್​ ಧರಿಸಿ ಆ್ಯಂಕರ್​ ಕುಳಿತಿದ್ದಾರೆ. ಆದರೂ ಸಹ ಕ್ಯಾಮದಲ್ಲಿ ಅವರು ಶಾರ್ಟ್​ ಧರಿಸಿರುವ ದೃಶ್ಯ ಸೆರೆಯಾಗಿದೆ. ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ವಿಡಿಯೋ ವೈರಲ್​ ಆಗಿದೆ. ಕೆಲವರು ನಗುವ ಇಮೋಜಿಗಳನ್ನು ಕಳುಹಿಸಿ ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಬೇಸಿಗಾಲವಾದ್ದರಿಂದ ಆ್ಯಂಕರ್​ ಹೀಗೆ ಮಾಡಿದ್ದಾರೆ ಎಂದು ಅವರ ಪರ ನಿಂತಿದ್ದಾರೆ. ‘ಇದು ಜೂಮ್​ ಮೀಟಿಂಗ್​ ಅಲ್ಲ! ಬಿಬಿಸಿ ನ್ಯೂಸ್​ ಆ್ಯಂಕರ್​ಗೆ ಹೇಳಲು ಯಾರಾದರೂ ಮರೆತಿದ್ದೀರಾ?’ ಎಂದು ಇನ್ನೋರ್ವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ‘ಸುದೀರ್ಘವಾದ ವಿಷಯವನ್ನು ಹೇಳಲು ಹೊರಟಾಗ ಅವರು ಏನು ಧರಿಸಿದ್ದಾರೆ ಎಂಬುದು ಮುಖ್ಯವಲ್ಲ’ ಎಂಬ ಅನಿಸಿಕೆಗಳೂ ಕೇಳಿಬಂದಿವೆ.

ಇದನ್ನೂ ಓದಿ:

Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!

Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

Follow us on

Related Stories

Most Read Stories

Click on your DTH Provider to Add TV9 Kannada