ಕಾಳಿಂಗ ಸರ್ಪವನ್ನು ಹಿಡಿದು 2 ವರ್ಷದ ಮಗಳನ್ನು ಅಪಾಯದಿಂದ ಪಾರು ಮಾಡಿದ ಸೂಪರ್ ಅಮ್ಮ!

Viral Image: ನಾನು ಈವರೆಗೂ ಯಾವುದೇ ಹಾವನ್ನೂ ಹಿಡಿದಿರಲಿಲ್ಲ. ಆದರೆ ಕಾಳಿಂಗ ಸರ್ಪವನ್ನು ಹಿಡಿದು ಅದರ ಮೂಲ ನೆಲೆಗೆ ಬಿಟ್ಟಿದ್ದೇವೆ. ಈ ಕಾರ್ಯಕ್ಕೆ ನಮ್ಮ ಮನೆಯವರು, ಊರವರು ಮತ್ತು ವಿಶೇಷವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಾಯ ಮಾಡಿದ್ದಾರೆ ಎಂದು ಸಸ್ಮಿತಾ ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಾಳಿಂಗ ಸರ್ಪವನ್ನು ಹಿಡಿದು 2 ವರ್ಷದ ಮಗಳನ್ನು ಅಪಾಯದಿಂದ ಪಾರು ಮಾಡಿದ ಸೂಪರ್ ಅಮ್ಮ!
ಕಾಳಿಂಗ ಸರ್ಪವನ್ನು ರಕ್ಷಿಸಿದ ಮಹಿಳೆ
Follow us
TV9 Web
| Updated By: guruganesh bhat

Updated on: Jun 06, 2021 | 10:59 PM

ಅನಿರೀಕ್ಷಿತವಾಗಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬರೋಬ್ಬರಿ 8 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೋರ್ವರು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಓಡಿಶಾ ರಾಜ್ಯದ ಮಯೂರ್​ಭಂಜ್ ಎಂಬ ಪ್ರದೇಶದಲ್ಲಿ ಶನಿವಾರದಂದು (ಮೇ 5) ಈ ಘಟನೆ ನಡೆದಿದೆ. ಸಸ್ಮಿತೆ ಗೋಚ್ಚಾತ್ ಎಂಬ ಮಹಿಳೆಯೇ ಕಿಂಗ್ ಕೋಬ್ರಾಕ್ಕೆ ಹೆದರದೇ ಹಾವನ್ನು ರಕ್ಷಿಸಿದವರು.

ಮನೆಯೊಳಗೆ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸಸ್ಮಿತಾ ಗೋಚ್ಚಾತ್ ಅವರಿಗೆ ಮನೆಯ ಹೊರಗೆ ಆಡುತ್ತಿದ್ದ ತಮ್ಮ 2 ವರ್ಷದ ಮಗುವಿನ ಅಳು ಕೇಳಿಸಿದೆ. ಮಗು ಏಕೆ ಅಳುತ್ತಿದೆ ಎಂದು ನೋಡಲು ಮನೆಯಿಮದ ಹೊರಬಂದ ಸಸ್ಮಿತಾ ಗೋಚ್ಚಾತ್ ಮತ್ತು ಅವರ ಪತಿ ಅಕಿಲ್ ಮುಂಡಾ ಅವರಿಗೆ ತಮ್ಮ ಮಗುವಿನ ಬಳಿಯೇ ಕಾಳಿಂಗ ಸರ್ಪ ಇರುವುದು ಕಾಣಿಸಿತು. ಒಮ್ಮೆ ಗಾಬರಿಗೊಂಡರೂ ತಡಮಾಡದೇ, ಅಕಿಲ್ ಮುಂಡಾ ಮಗುವನ್ನು ಎತ್ತಿಕೊಂಡು ದೂರ ಸರಿದರು. ಜತೆಗೆ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ತಕ್ಷಣವೇ ಅಲ್ಲಿಗೆ ಕರೆತಂದರು. ಆದರೆ ಸಸ್ಮಿತಾ ಮಾತ್ರ ಹೆದರದೇ ಅಲ್ಲೇ ನಿಂತರು. ಈವರೆಗೆ, ತಮ್ಮ ಜೀವಮಾನದಲ್ಲಿ ಒಮ್ಮೆಯೂ ಚಿಕ್ಕ ಕೇರೆಹಾವನ್ನೂ ಹಿಡಿದು ಗೊತ್ತಿರದ ಅವರು, ಆ ಕ್ಷಣ 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದೇಬಿಟ್ಟರು.

ನಾನು ಈವರೆಗೂ ಯಾವುದೇ ಹಾವನ್ನೂ ಹಿಡಿದಿರಲಿಲ್ಲ. ಆದರೆ ಕಾಳಿಂಗ ಸರ್ಪವನ್ನು ಹಿಡಿದು ಅದರ ಮೂಲ ನೆಲೆಗೆ ಬಿಟ್ಟಿದ್ದೇವೆ. ಈ ಕಾರ್ಯಕ್ಕೆ ನಮ್ಮ ಮನೆಯವರು, ಊರವರು ಮತ್ತು ವಿಶೇಷವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಾಯ ಮಾಡಿದ್ದಾರೆ ಎಂದು ಸಸ್ಮಿತಾ ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?

ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

(Women rescued 8 feet King Cobra in Odisha)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್