ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ಳ 48 ಕೋಟಿ ರೂಪಾಯಿ ವೆಚ್ಚದ ಪರಿಸರ ಸ್ನೇಹಿ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ. ಮುಂಬೈನ ಪಾಲಿ ಹಿಲ್ನಲ್ಲಿರುವ ಕಂಗನಾ ಕಚೇರಿ ಬಳಿ ಹೈಡ್ರಾಮಾ ಸೃಷ್ಟಿಯಾಗಿದೆ.
ನಟಿ ಕಂಗನಾ ಬಿಎಂಸಿ ನಿಯಮ ಉಲಂಘನೆ ಮಾಡಿದ್ದಾರೆ ಎಂದು ಬಿಎಂಸಿ ಜೆಸಿಬಿಯಿಂದ ಕಂಗನಾ ಕಟ್ಟಡ ಕೆಡವೊ ಕಾರ್ಯಾಚರಣೆ ಆರಂಭ ಮಾಡಿದೆ. ಇದರ ವಿರುದ್ಧ, ನನ್ನ ಕಟ್ಟಡ ಕೆಡವುತ್ತಿದ್ದಾರೆ ಎಂದು ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದು ಇಂದು ಮಧ್ಯಾಹ್ನ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಕಂಗನಾ ಚಂಡೀಗಢದಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಕಂಗನಾ ಕಚೇರಿ ಕಟ್ಟಡ ತೆರವಿಗೆ ತಡೆ:
ನಟಿ ಕಂಗನಾ ರಣಾವತ್ ಕಚೇರಿ ಕಟ್ಟಡ ತೆರವಿಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಮುಂಬೈ ಮಹಾನಗರಪಾಲಿಕೆ ಕಂಗನಾ ರಣಾವತ್ ಕಚೇರಿ ಕಟ್ಟಡ ತೆರವಿಗೆ ಮುಂದಾಗಿದ್ದ , ಸದ್ಯ ಅದಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ.
Mumbai: Kangana Ranaut's lawyer files a plea in High Court against the demolition drive by Brihanmumbai Municipal Corporation (BMC) at her property. Hearing to take place at 12.30 pm today. https://t.co/mk1bHPE93r
— ANI (@ANI) September 9, 2020
ಇದನ್ನೂ ಓದಿ: ಕೊರೊನಾ ಸಂಕಷ್ಟವಿದ್ದರೂ ದೊಡ್ಡ ಬಂಗಲೆಯನ್ನೇ ಖರೀದಿಸಿದ ನಟಿ ಕಂಗನಾ!
Published On - 12:45 pm, Wed, 9 September 20