ದೆಹಲಿ: ದೇಶದಲ್ಲಿ ಈಗಲೂ ಶೇ.50 ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ. ಉಳಿದ ಶೇ.50ರಷ್ಟು ಜನರು ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಸಮರ್ಪಕ ವಿಧಾನದಲ್ಲಿ ಮಾಸ್ಕ್ ಧರಿಸುವವರ ಪ್ರಮಾಣ ಶೇ.15 ಮಾತ್ರ ಎಂದು ಐಸಿಎಂಆರ್ ಡಿಜಿ ಬಲರಾಮ ಭಾರ್ಗವ್ ಅಧ್ಯಯನವೊಂದ್ನು ಬಹಿರಂಗಪಡಿಸಿದರು.
ರಾಪಿಡ್ ಆ್ಯಂಟಿಜೆನ್ ಟೆಸ್ಟ್, ಹೋಮ್ ಟೆಸ್ಟಿಂಗ್ಗಳ ಮೂಲಕ ಜೂನ್ ಅಂತ್ಯದೊಳಗೆ ನಿತ್ಯ 45 ಲಕ್ಷ ಕೊರೊನಾ ಸ್ಯಾಂಪಲ್ ಪರೀಕ್ಷೆ ಗುರಿ ಇಟ್ಟುಕೊಳ್ಳಲಾಗಿದೆ. 3-ಮುಂದಿನ 4 ದಿನಗಳಲ್ಲಿ ಹೋಮ್ ಟೆಸ್ಟಿಂಗ್ ಕಿಟ್ ಬಿಡುಗಡೆ ಮಾಡಲಿದ್ದೇವೆ. ಅಲ್ಲದೇ ಒಂದು ವಾರದಲ್ಲಿ 3 ಕಂಪನಿಗಳಿಂದ ಹೋಮ್ ಟೆಸ್ಟಿಂಗ್ ಕಿಟ್ ಬಿಡುಗಡೆಯಾಗಲಿದೆ. ಶೇ.10 ಕ್ಕಿಂತ ಹೆಚ್ಚು ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇರುವ ಕಡೆ ಹೆಚ್ಚಿನ ಸ್ಥಳೀಯ ಕಾರ್ಯತಂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದೇಶದಲ್ಲಿ ಮೇ 12-18 ರವರೆಗೆ 430 ಜಿಲ್ಲೆಯಲ್ಲಿ ಪ್ರತಿದಿನ ನೂರಕ್ಕಿಂತ ಹೆಚ್ಚು ಕೊರೊನಾ ಸೊಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಐಸಿಎಂಆರ್ ಡಿಜಿ ಬಲರಾಮ ಭಾರ್ಗವ್ ತಿಳಿಸಿದರು.
ಕರ್ನಾಟಕಕ್ಕೆ ಕೊಡಬೇಕಿದೆ ಹೆಚ್ಚಿನ ಗಮನ
ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕರ್ನಾಟಕದಲ್ಲಿ ನಿಧಾನವಾಗಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಕರ್ನಾಟದಲ್ಲಿ ಈಗಲೂ ಶೇಕಡಾ 29.9 ರಷ್ಟು ಕೊವಿಡ್ ಪಾಸಿಟಿವಿಟಿ ದರ ಇರುವ ಕಾರಣ ಹೆಚ್ಚಿನ ಗಮನ ನೀಡಬೇಕಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
Half of India isn’t wearing a mask!
Around 50% Indians do not wear a #Mask today, only 7% wear it correctly
– @MoHFW_INDIA quotes a study conducted in 25 cities #Unite2FightCorona #StaySafe pic.twitter.com/f85gvG1noQ
— #IndiaFightsCorona (@COVIDNewsByMIB) May 20, 2021
ಬ್ಲ್ಯಾಕ್ ಫಂಗಸ್ ಸೋಂಕನ್ನು ಅಧಿಸೂಚಿತ ಸೋಂಕು ಎಂದು ಕೇಂದ್ರದ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿ ವೇಳೆ ಘೋಷಣೆ ಮಾಡಲಾಯಿತು. ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಈ ಘೋಷಣೆ ಮಾಡಲಾಗಿದ್ದು, ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಬೇಕು ಎಂದು ಲವ್ ಅಗರ್ವಾಲ್ ನಿರ್ದೇಶನ ನೀಡಿದರು.
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘನೆ; ಬಿಗ್ ಬಾಸ್ ಮನೆ ಸೀಜ್, 1 ಲಕ್ಷ ರೂಪಾಯಿ ದಂಡ
ರಾಜ್ಕುಮಾರ್ಗೆ ಯೋಗಾಸನ ಹೇಳಿಕೊಟ್ಟ ಹೊನ್ನಪ್ಪ ನಾಯ್ಕರ್ ಕೊವಿಡ್ನಿಂದ ನಿಧನ
(By June end 45 lakh covid tests per day says ICMR DG Balram Bhargava)
Published On - 5:40 pm, Thu, 20 May 21