
ನವದೆಹಲಿ: ದೆಹಲಿ-ಪುಣೆ ನಡುವೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ (Delhi Airport) ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆಗುವುದಕ್ಕೂ ಮೊದಲು ಬೆದರಿಕೆ ಕರೆ ಬಂದಿದೆ. ಕೂಡಲೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ವಿಮಾನವನ್ನು ಪರಿಶೀಲಿಸಿದರು. ಆದ್ರೆ, ಸ್ಫೋಟಕ ಪತ್ತೆಯಾಗಿಲ್ಲದಿರುವುದರಿಂದ ಇದೊಂದು ಹುಸಿ ಬೆದರಿಕೆ ಕರೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.
Published On - 8:37 pm, Thu, 12 January 23