ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಐಐಟಿ ಕಾನ್ಪುರದ ವೆಬ್‌ಸೈಟನ್ನೇ ಹ್ಯಾಕ್​​ ಮಾಡಿ ಸಾಮರ್ಥ್ಯ ಪ್ರದರ್ಶಿಸಿದ ಅಭ್ಯರ್ಥಿ!

ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಅಭ್ಯರ್ಥಿಯೊಬ್ಬ ಐಐಟಿ ಕಾನ್ಪುರದ ವೆಬ್‌ಸೈಟ್ ಹ್ಯಾಕ್ ಮಾಡಿ ತನ್ನ ಸಾಮರ್ಥ್ಯ ಪ್ರದರ್ಶಿಸಿರೋದಾಗಿ ಹೇಳಿಕೊಂಡಿದ್ದಾನೆ. ಆಯ್ಕೆ ಪ್ರಕ್ರಿಯೆಯ ಭಾಗವಾಗಿದ್ದ ಹ್ಯಾಕಥಾನ್‌ನಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಲಿಲ್ಲ ಎಂದು ಆತ ದೂರಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಐಐಟಿ ಕಾನ್ಪುರ ನಿರ್ದೇಶಕರು ಅಭ್ಯರ್ಥಿಯನ್ನು ಕ್ಯಾಂಪಸ್‌ಗೆ ಆಹ್ವಾನಿಸಿ ಅವನ ಸಾಮರ್ಥ್ಯವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಐಐಟಿ ಕಾನ್ಪುರದ ವೆಬ್‌ಸೈಟನ್ನೇ ಹ್ಯಾಕ್​​ ಮಾಡಿ ಸಾಮರ್ಥ್ಯ ಪ್ರದರ್ಶಿಸಿದ ಅಭ್ಯರ್ಥಿ!
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 30, 2026 | 6:36 PM

ಮುಖ್ಯಾಂಶಗಳು

  • ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಣೆ
  • IIT ಕಾನ್ಪುರದ ವೆಬ್‌ಸೈಟನ್ನೇ ಹ್ಯಾಕ್​​ ಮಾಡಿದ ಅಭ್ಯರ್ಥಿ
  • ಘಟನೆ ಬಗ್ಗೆ ಐಐಟಿ ಕಾನ್ಪುರ ನಿರ್ದೇಶಕರು ಹೇಳಿದ್ದೇನು?

ಕಾನ್ಪುರ, ಜುಲೈ 30: ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಪ್ರವೇಶ ನಿರಾಕರಿಸಲ್ಪಟ್ಟ ಕಾರಣ ಅಭ್ಯರ್ಥಿಯೋರ್ವ ಐಐಟಿ ಕಾನ್ಪುರದ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದ ಅಭ್ಯರ್ಥಿ, ತನಗೆ ಬೇಕಾಗಿರುವುದು ಕೇವಲ ನ್ಯಾಯಯುತ ಅವಕಾಶ ಮಾತ್ರ. ತನ್ನ ಉದ್ದೇಶ ಐಐಟಿ ಕಾನ್ಪುರ ಅಥವಾ ಅದರ ವೆಬ್‌ಸೈಟ್‌ಗೆ ಹಾನಿ ಮಾಡುವುದು ಅಲ್ಲ, ಬದಲಾಗಿ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿನ ತನ್ನ ಸಾಮರ್ಥ್ಯವನ್ನು ತೋರಿಸುವುದೇ ಎಂದು ಸ್ಪಷ್ಟಪಡಿಸಿದ್ದಾನೆ.

ಅಭ್ಯರ್ಥಿ ಹೇಳಿದ್ದೇನು?

ಆಯ್ಕೆ ಪ್ರಕ್ರಿಯೆಯ ಭಾಗವಾಗಿದ್ದ ಹ್ಯಾಕಥಾನ್‌ನಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಲಿಲ್ಲ. ನಾನು ಪ್ರವೇಶ ಶುಲ್ಕ ಪಾವತಿಸಿದ್ದೆ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದೆ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿನ ನನ್ನ ಕೆಲಸದ ಸಾಕ್ಷ್ಯಗಳನ್ನೂ ಸಲ್ಲಿಸಿದ್ದೆ. ಆದರೂ ನನ್ನನ್ನು ಆಯ್ಕೆ ಮಾಡಲಿಲ್ಲ ಎಂದು ಅಭ್ಯರ್ಥಿ ಆರೋಪಿಸಿದ್ದಾನೆ.

ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ

ಸಾಮರ್ಥ್ಯ ಮರುಪರಿಶೀಲಿಸಲು ನಿರ್ಧಾರ

ಈ ಘಟನೆಗೆ ಸಂಬಂಧಿಸಿದಂತೆ ಐಐಟಿ ಕಾನ್ಪುರ ನಿರ್ದೇಶಕ ಪ್ರೊ. ಮನೀಂದ್ರ ಅಗರ್ವಾಲ್ ಅವರು ಪೊಲೀಸರಿಗೆ ದೂರು ನೀಡದೇ, ಅಭ್ಯರ್ಥಿಯನ್ನು ಕ್ಯಾಂಪಸ್‌ಗೆ ಆಹ್ವಾನಿಸಿ ಅವನ ಸಾಮರ್ಥ್ಯವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ. ಅಭ್ಯರ್ಥಿ ನಿಜವಾಗಿಯೂ ಪ್ರತಿಭಾವಂತನಾಗಿದ್ದರೆ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನಾವು ಅವಕಾಶ ನೀಡುತ್ತೇವೆ. ಅದರ ಆಧಾರದ ಮೇಲೆ ಪ್ರವೇಶ ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಭ್ಯರ್ಥಿ ಈ ರೀತಿ ಮಅಡಿರುವುದು ಸರಿಯಾದ ಮಾರ್ಗವಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಹ್ಯಾಕಥಾನ್‌ನಲ್ಲಿ ಭಾಗವಹಿಸಲು ಅವಕಾಶವೇ ನೀಡಲಾಗಿರಲಿಲ್ಲ ಎಂಬ ಅಭ್ಯರ್ಥಿಯ ಆರೋಪವನ್ನೂ ತಳ್ಳಿಹಾಕಿದ್ದಾರೆ. ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಹ್ಯಾಕಥಾನ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಆದರೆ, ಆಯ್ಕೆ ಪ್ರಕ್ರಿಯೆಯ ವೇಳೆ ಸಂಬಂಧಿಸಿದ ಅಭ್ಯರ್ಥಿ ತನ್ನ ಹ್ಯಾಕಿಂಗ್ ಕೌಶಲ್ಯದ ಬಗ್ಗೆ ಸಮರ್ಪಕ ಸಾಕ್ಷ್ಯ ಒದಗಿಸಲು ವಿಫಲನಾಗಿದ್ದ ಎಂದು ಪ್ರೊ. ಮನೀಂದ್ರ ಅಗರ್ವಾಲ್ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:23 pm, Thu, 30 July 26

Loading...
Unable to load recommendations.
Follow Us