
ಫ್ಲೈದುಬೈ’ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಶೌರ್ಯ ಅಪ್ರತಿಮವಾದುದು. ಸದ್ಯ ಅವರ ಹೆಸರು ಜಗತ್ತಿನಾದ್ಯಂತ ಭಾರಿ ಸುದ್ದು ಮಾಡುತ್ತಿದೆ. ಜೊತೆಗೆ ಅವರ “ಮಚ್ಛರ್” ಎಂಬ ಉಪನಾಮ (Surname) ಸಾಕಷ್ಟು ಜನರನ್ನು ಗೊಂದಲಕ್ಕೀಡು ಮಾಡಿದೆ. ಯಾಕೆಂದರೆ ಹಿಂದಿಯಲ್ಲಿ ‘ಮಚ್ಛರ್’ ಎಂದರೆ ಸೊಳ್ಳೆ. ಹೀಗೆ ಪ್ರಾಣಿ, ಪಕ್ಷಿ ಮತ್ತು ಕೀಟಗಳ ಹೆಸರನ್ನೇ ತಮ್ಮ ಉಪನಾಮಗಳನ್ನಾಗಿ ಇಟ್ಟುಕೊಳ್ಳುವ ಅಪರೂಪದ ಹಾಗೂ ರಸವತ್ತಾದ ಸಂಪ್ರದಾಯ ಗುಜರಾತಿ ಸಮುದಾಯಗಳಲ್ಲಿದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿದುಕೊಳ್ಳಿ.
ಗುಜರಾತ್‌ನ ನಾಗರ ಬ್ರಾಹ್ಮಣರು (Nagar Brahmins), ಬ್ರಹ್ಮಕ್ಷತ್ರಿಯ ಮತ್ತು ಲೋಹಾನ ಸಮುದಾಯಗಳಲ್ಲಿ ಇಂತಹ ಪ್ರಾಣಿಗಳಿಗೆ ಸಂಬಂಧಿಸಿದ ಮನೆತನದ ಹೆಸರುಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು:
ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ
‘ಮಚ್ಚರ್’, ‘ಹಾಥಿ’, ‘ಘೋಡಾ’ ಅಥವಾ ‘ಪೋಪಟ್’ ಎಂಬ ಉಪನಾಮಗಳು ಹೊರಗಿನವರಿಗೆ ಮೊದಲಿಗೆ ವಿಚಿತ್ರವಾಗಿ ಕಾಣಬಹುದು. ಆದರೆ ಅವುಗಳನ್ನು ಹೊಂದಿರುವ ಕುಟುಂಬಗಳಿಗೆ ಇವು ಕೇವಲ ಪದಗಳಲ್ಲ; ತಲೆಮಾರುಗಳಿಂದ ಬಂದ ಕುಟುಂಬದ ಗುರುತುಗಳು. ಉಪನಾಮದ ಅರ್ಥವನ್ನು ತಿಳಿದುಕೊಳ್ಳುವ ಕುತೂಹಲ ಸಹಜ. ಆದರೆ ಪ್ರತಿಯೊಂದು ಹೆಸರಿಗೂ ಒಂದೇ ಮೂಲ ಅಥವಾ ಒಂದೇ ಕಥೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಹೆಸರುಗಳ ಹಿಂದೆ ಅಡ್ಡಹೆಸರು ಇರಬಹುದು, ಕೆಲವು ಸ್ಥಳನಾಮದಿಂದ ಬಂದಿರಬಹುದು, ಇನ್ನೂ ಕೆಲವು ಹೆಸರುಗಳ ನಿಖರ ಮೂಲ ಇಂದಿಗೂ ಸ್ಪಷ್ಟವಾಗಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ