AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಡ್-ಏರ್ ಹೈಡ್ರಾಮಾ ತನಿಖೆಯಲ್ಲಿ ಶಾಕಿಂಗ್ ಸತ್ಯ: ಕ್ಯಾಪ್ಟನ್ ಸ್ಮಿತ್‌ಗೆ ಚಾಕು ಇರಿದಿದ್ದ ಕೋ-ಪೈಲಟ್ ಉಗ್ರ

ದುಬೈನಿಂದ ತೆಲ್ ಅವೀವ್‌ಗೆ ಸಾಗುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ಹೈಜಾಕ್ ಯತ್ನ ನಡೆದಿತ್ತು. ಜಿಹಾದಿ ಹಿನ್ನೆಲೆಯುಳ್ಳ ಕೋ-ಪೈಲಟ್, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಚಾಕು ದಾಳಿ ಮಾಡಿ ವಿಮಾನ ಪತನಕ್ಕೆ ಯತ್ನಿಸಿದ್ದ. ಆದರೆ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ರ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ 170ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸಲಾಗಿದೆ. ಓಮನ್‌ನಲ್ಲಿ ನಿಷೇಧಿತ ಉಗ್ರ ಕೋ-ಪೈಲಟ್ ನೇಮಕದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಿಡ್-ಏರ್ ಹೈಡ್ರಾಮಾ ತನಿಖೆಯಲ್ಲಿ ಶಾಕಿಂಗ್ ಸತ್ಯ: ಕ್ಯಾಪ್ಟನ್ ಸ್ಮಿತ್‌ಗೆ ಚಾಕು ಇರಿದಿದ್ದ ಕೋ-ಪೈಲಟ್ ಉಗ್ರ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 03, 2026 | 9:58 AM

Share

ದೆಹಲಿ, ಅ.3: ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ಸಾಗುತ್ತಿದ್ದ ‘ಫ್ಲೈದುಬೈ’ (flydubai) ಸಂಸ್ಥೆಯ ವಿಮಾನವನ್ನು ಹೈಜಾಕ್ ಗೆ ಯತ್ನಿಸಿ, ಅದನ್ನು ತಡೆದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಭೀಕರ ಚಾಕು ದಾಳಿ ನಡೆಸಿದ್ದ ಕೋ-ಪೈಲಟ್ ಜಿಹಾದಿ ಹಿನ್ನೆಲೆಯುಳ್ಳ ಉಗ್ರವಾದಿಯಾಗಿದ್ದು, ಈ ಹಿಂದೆ ಓಮನ್ ದೇಶದಲ್ಲೇ ಆತನ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ‘ದಿ ವಾಲ್ ಸ್ಟ್ರೀಟ್ ಜರ್ನಲ್’ (WSJ) ವರದಿಯಿಂದ ಬಹಿರಂಗವಾಗಿದೆ. ಆತನನ್ನು ಓಮನ್ ತಂದೆ ಹಾಗೂ ಸಿರಿಯನ್ ತಾಯಿಗೆ ಯುಎಇಯಲ್ಲಿ ಜನಿಸಿದ್ದ ಓಮನ್ ಪ್ರಜೆ ಹಮಾಮ್ ಅಲ್-ಹಮಾಮಿ ಎಂದು ಗುರುತಿಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಓಮನ್‌ನಲ್ಲಿ ಬ್ಯಾನ್ ಆಗಿದ್ದ ಉಗ್ರವಾದಿ ‘ಫ್ಲೈದುಬೈ’ ಕಾಕ್‌ಪಿಟ್ ತಲುಪಿದ್ದು ಹೇಗೆ?:

ವರದಿಯ ಪ್ರಕಾರ, ಹಮಾಮ್ ಅಲ್-ಹಮಾಮಿ ಸಿರಿಯಾದಲ್ಲಿದ್ದಾಗ ಉಗ್ರವಾದಿ ಐಡಿಯಾಲಜಿಯಿಂದ ಪ್ರಭಾವಿತಗೊಂಡಿದ್ದ, 2024 ರಲ್ಲಿ ‘ಓಮನ್ ಏರ್’ ಸಂಸ್ಥೆಯಲ್ಲಿ ಕೋ-ಪೈಲಟ್ ಟ್ರೈನಿಯಾಗಿದ್ದಾಗ ಈತನ ಬಳಿ ಅತ್ಯಂತ ಅಪಾಯಕಾರಿ ಉಗ್ರವಾದಿ ಸಾಹಿತ್ಯ ಹಾಗೂ ವೀಡಿಯೋಗಳು ಪತ್ತೆಯಾಗಿದ್ದವು. ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಓಮನ್ ಆತನನ್ನು ಯಾವುದೇ ವಿಮಾನ ಹಾರಿಸದಂತೆ ಸಂಪೂರ್ಣವಾಗಿ ನಿಷೇಧಿಸಿ, ಕೇವಲ ಆಡಳಿತಾತ್ಮಕ ಹುದ್ದೆಗೆ ಸೀಮಿತಗೊಳಿಸಿತ್ತು.

ಓಮನ್ ವಿಧಿಸಿದ್ದ ಬ್ಯಾನ್ ಗಣನೆಗೆ ತೆಗೆದುಕೊಳ್ಳದೆ, ದುಬೈ ಮೂಲದ ‘ಫ್ಲೈದುಬೈ’ ಸಂಸ್ಥೆಯು ಎಂಟು ತಿಂಗಳ ಹಿಂದೆಯಷ್ಟೇ ಆತನನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಪರಿಣಾಮ, ಅತ್ಯಂತ ಸೂಕ್ಷ್ಮ ಪ್ರದೇಶವಾದ ಯುಎಇ ಮತ್ತು ಇಸ್ರೇಲ್ ನಡುವಿನ ವಿಮಾನ ಹಾರಾಟದ ಹೊಣೆಯನ್ನು ಆತನಿಗೆ ವಹಿಸಲಾಗಿತ್ತು. ಆತ ಇಸ್ರೇಲ್ ನೆಲದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬೋಯಿಂಗ್ 737 ವಿಮಾನವನ್ನು ಪತನಗೊಳಿಸುವ ಪಕ್ಕಾ ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಸೋಷಿಯಲ್ ಮೀಡಿಯಾದಲ್ಲಿ ಉಗ್ರ ಸಂಘಟನೆಗಳ ಪೋಸ್ಟ್:

ಘಟನೆ ನಡೆದ ಕೇವಲ 9 ಗಂಟೆಗಳ ಅಂತರದಲ್ಲಿ ಆತನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ಉಗ್ರವಾದಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಬೋಯಿಂಗ್ 737 ಕಾಕ್‌ಪಿಟ್‌ನಿಂದ ಇಸ್ರೇಲ್‌ನ ‘ಎಲ್ ಅಲ್’ ವಿಮಾನವನ್ನು ಜೂಮ್ ಮಾಡಿ ತೆಗೆದ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ವೀಡಿಯೋದ ಕೊನೆಯಲ್ಲಿ ಅಲ್ ಖೈದಾ ಮಾಜಿ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹಾಗೂ 2009 ರ ಅಮೆರಿಕ ದಾಳಿಯ ಆತ್ಮಹತ್ಯಾ ಬಾಂಬರ್ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಚಿತ್ರಗಳನ್ನು ಹಾಕಿದ್ದ. CNN ವರದಿಯ ಪ್ರಕಾರ, ಆತನ ಅಕೌಂಟ್‌ಗಳಲ್ಲಿ ತೀವ್ರ ಕೋಮುವಾದಿ ಹಾಗೂ ಮಹಿಳಾವಿರೋಧಿ  ಆಲೋಚನೆಗಳಿದ್ದವು.

ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ

ಮಿಡ್-ಏರ್ ಹೈಡ್ರಾಮಾ: ಪ್ರಾಣದ ಹದಿನೆಂಟರ ಹದಿನಾರಲ್ಲೂ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್ ಸ್ಮಿತ್

ವಿಮಾನವು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಅಲ್-ಹಮಾಮಿ ವಿಮಾನದ ನಿಯಂತ್ರಣ ತಪ್ಪಿಸಿ, ಪ್ರತಿ ನಿಮಿಷಕ್ಕೆ 23,000 ಅಡಿಗಳಷ್ಟು ವೇಗದಲ್ಲಿ ಕೆಳಕ್ಕೆ ಧುಮುಕುವಂತೆ ಮಾಡಿದ್ದ. ಇದನ್ನು ತಡೆಯಲು ಬಂದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಹಮಾಮ್ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ಒಳಗಡೆ ಬಂದ ಪ್ರಯಾಣಿಕ ಯಾನಿವ್ ಹಯೂನ್ ಹಾಗೂ ಸಿಬ್ಬಂದಿ ದಾಳಿಕೋರನನ್ನು ತಡೆದು ಬಂಧಿಸಿದರು. ಅಷ್ಟರಲ್ಲಿ ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು (Dentist) ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರು. ಹಿಂಭಾಗದ ಸೀಟಿನಲ್ಲಿದ್ದ ಇಬ್ಬರು ರಿಲೀಫ್ ಪೈಲಟ್‌‌ಗಳು ತಕ್ಷಣ ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ಸೌದಿ ಅರೇಬಿಯಾದ ‘ತಬುಕ್’ (Tabuk) ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ಇದೀಗ ಈ ವಿಚಾರ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. ನೆನ್ನೆ (ಅ.2)ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯಲ್ಲಿ “ನನಗೆ ಗಾಯಗಳಾಗಿದ್ದವು, ಆದರೆ 170ಕ್ಕೂ ಹೆಚ್ಚು ಅಮಾಯಕ ಪ್ರಯಾಣಿಕರನ್ನು ಸಾಲಾಗಿ ಸಾಯಲು ಬಿಡಲು ನನ್ನ ಮನಸ್ಸು ಬರಲಿಲ್ಲ” ಎಂದು ಕ್ಯಾಪ್ಟನ್ ಸ್ಮಿತ್ ಹೇಳಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Sat, 3 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್