
ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ನಿವಾಸದ ಬಳಿ ಅನುಮಾನಾಸ್ಪದವಾಗಿ ಕಾರು ಪತ್ತೆಯಾಗಿದೆ. ಸ್ಕಾರ್ಪಿಯೊ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಸ್ಥಳಕ್ಕೆ ಎಟಿಎಸ್, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಶ್ವಾನ ದಳ, ಬಾಂಬ್ ಪತ್ತೆ & ನಿಷ್ಕ್ರಿಯ ದಳದ ತಜ್ಞರು ದೌಡಾಯಿಸಿದ್ದಾರೆ.
ಮುಕೇಶ್ ಅಂಬಾನಿಯವರ ಅಂತಿಲ್ಲಾ ನಿವಾಸದ ಬಳಿ ಸ್ಕಾರ್ಪಿಯೊ ವಾಹನವೊಂದು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಜೆಲೆಟಿನ್ ಕಡ್ಡಿಗಳು ಇರುವುದು ಕಂಡುಬಂದಿದೆ.
ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ಮುಂಬೈ ಪೊಲೀಸ್ ವಕ್ತಾರ DCP ಚೈತನ್ಯ ವಾಹನದಲ್ಲಿ ಸ್ಫೋಟಕ ಜಿಲೆಟಿನ್ ಕಡ್ಡಿಗಳು ಇರುವುದು ಪತ್ತೆಯಾಗಿದೆ. ಆದರೆ, ಇದು ಬಾಂಬ್ ಮಾದರಿಯಲ್ಲಿ ರೂಪಿಸಿರುವುದಾಗಿ ಸದ್ಯಕ್ಕೆ ಕಂಡುಬಂದಿಲ್ಲ. ಸದ್ಯ, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
ಅಂದ ಹಾಗೆ, ಈ ಸ್ಕಾರ್ಪಿಯೊ ವಾಹನದ ನೋಂದಣಿ ಸಂಖ್ಯೆ ಉದ್ಯಮಿಯ ಭದ್ರತಾ ಸಿಬ್ಬಂದಿ ಬಳಸುವ ವಾಹನಗಳಿಗೆ ಹೋಲುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ, ವಾಹನದಿಂದ ಪತ್ರವೊಂದು ಸಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಕೇಶ್ ಅಂಬಾನಿ ನಿವಾಸದ ಬಳಿ ಬಾಂಬ್ ಪತ್ತೆ & ನಿಷ್ಕ್ರಿಯ ದಳದ ತಜ್ಞರು

ಮುಕೇಶ್ ಅಂಬಾನಿ ನಿವಾಸದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರು
Published On - 8:40 pm, Thu, 25 February 21