ಭ್ರಷ್ಟಾಚಾರ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್​ ದೇಶಮುಖ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಸಿಬಿಐ

|

Updated on: Apr 24, 2021 | 10:36 AM

ಮಹಾರಾಷ್ಟ್ರ ಗೃಹಸಚಿವರ ವಿರುದ್ಧ ಮಾಡಲಾದ ಭ್ರಷ್ಟಾಚಾರ ಆರೋಪ ಗಂಭೀರವಾಗಿದ್ದು, ಅದನ್ನು ತನಿಖೆ ನಡೆಸಬೇಕು ಎಂದು ಏಪ್ರಿಲ್​ 8ರಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಭ್ರಷ್ಟಾಚಾರ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್​ ದೇಶಮುಖ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಸಿಬಿಐ
ಅನಿಲ್​ ದೇಶಮುಖ್​
Follow us on

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ ಬೀರ್​ ಸಿಂಗ್​ ಮಾಡಿದ್ದ ಭ್ರಷ್ಟಾಚಾರ, ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶ್​​ಮುಖ್​ ವಿರುದ್ಧ ಸಿಬಿಐ ಎಫ್ಐಆರ್​ ದಾಖಲಿಸಿದೆ. ಹಾಗೇ ಅನಿಲ್ ದೇಶ್​​ಮುಖ್​ಗೆ ಸಂಬಂಧಪಟ್ಟ ಹಲವು ಪ್ರದೇಶಗಳನ್ನು ರೇಡ್​ ಮಾಡಿದೆ. ಅನಿಲ್​ ದೇಶಮುಖ್​ ಅವರು ತಮ್ಮ ಅಧೀನ ಅಧಿಕಾರಿಗಳ ಮೂಲಕ ಮುಂಬೈನ ಬಾರ್​, ರೆಸ್ಟೋರೆಂಟ್, ಹೋಟೆಲ್​​ಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಪರಮ್​ಬೀರ್ ಸಿಂಗ್​ ಅವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರಿಗೆ ಪತ್ರ ಬರೆದಿದ್ದರು. ಈ ಪತ್ರದ ಅನ್ವಯ ಏಪ್ರಿಲ್​ 14ರಂದು ಸಿಬಿಐ ಅನಿಲ್​ ದೇಶ​​ಮುಖ್​​ಗೆ ಸಮನ್ಸ್​ ನೀಡಿತ್ತು.

ಮುಂಬೈನ ಬಾರ್​, ಹೊಟೆಲ್, ರೆಸ್ಟೋರೆಂಟ್​ ಮತ್ತಿತರ ಮೂಲಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಹೇಳಿದ್ದರು. (ಮುಕೇಶ್​ ಅಂಬಾನಿ ಮನೆಯ ಬಳಿ ಬಾಂಬ್​ ಸ್ಫೋಟದ ಕೇಸ್​ನಲ್ಲಿ ಸದ್ಯ ಅಮಾನತುಗೊಂಡ ಪೊಲೀಸ್ ಅಧಿಕಾರಿ) ಎಂದು ಪರಮ್​ಬೀರ್ ಸಿಂಗ್​ ತಮ್ಮ ಪತ್ರದಲ್ಲಿ ಉಲ್ಲೇಖಿಸಿ, ಆರೋಪ ಮಾಡಿದ್ದರು.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ, ಅನಿಲ್​ ದೇಶಮುಖ್​ ಅವರ ಆಪ್ತ ಸಹಾಯಕರಾದ ಸಂಜೀವ್​ ಪಾಲಂದೆ ಮತ್ತು ಕುಂದಾನ್​ ಶಿಂಧೆ, ಮಾಜಿ ಪೊಲೀಸ್ ಅಧಿಕಾರಿ ಸಚಿನ್​ ವಾಝೆಯ ಇಬ್ಬರು ಚಾಲಕರು, ಬಾರ್​ ಮಾಲೀಕರು, ಮುಂಬೈ ಪೊಲೀಸ್ ಅಧಿಕಾರಿಗಳು ಹಾಗೂ ದೇಶಮುಖ್​ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರನ್ನೂ ಸಿಬಿಐ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.

ಮಹಾರಾಷ್ಟ್ರ ಗೃಹಸಚಿವರ ವಿರುದ್ಧ ಮಾಡಲಾದ ಭ್ರಷ್ಟಾಚಾರ ಆರೋಪ ಗಂಭೀರವಾಗಿದ್ದು, ಅದನ್ನು ತನಿಖೆ ನಡೆಸಬೇಕು ಎಂದು ಏಪ್ರಿಲ್​ 8ರಂದು ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಸಿಬಿಐ ಇದನ್ನು ಸೀರಿಯಸ್​ ಆಗಿ ತೆಗೆದುಕೊಂಡಿದೆ.

ಇದನ್ನೂ ಓದಿ: Happy Birthday Sachin: ಸಚಿನ್ ಬ್ಯಾಟಿಂಗ್ ಮಾಡುವಾಗ ನನ್ನ ದೇಶದ ಉತ್ಪಾದನೆಯು 5 % ಇಳಿಕೆಯಾಗುತ್ತಿತ್ತು; ಬರಾಕ್ ಒಬಾಮ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನಗಳು ರದ್ದು