ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು #Modiji_cancel12thboards ಹ್ಯಾಶ್​ಟ್ಯಾಗ್​; ಪ್ರಧಾನಿ ಮೋದಿಗೆ ಸಿಬಿಎಸ್​ಇ ಕ್ಲಾಸ್​ 12 ವಿದ್ಯಾರ್ಥಿಗಳ ಮೊರೆ

|

Updated on: May 17, 2021 | 12:51 PM

CBSE Class 12 Board Exam 2021: ಕೊರೊನಾ ಸೋಂಕು ವಿಪರೀತವಾಗಿರುವಾಗ ಭೌತಿಕವಾಗಿ ಶಾಲೆಗಳಲ್ಲಿ ಕುಳಿತು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಕ್ಷೇಮಕರ ಅಲ್ಲ. internal assessment ಅಥವಾ online exams ಮೂಲಕ ನಮ್ಮನ್ನು ಈ ಅಪಾಯದಿಂದ ತೇರ್ಗಡೆ ಮಾಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹೀಗೆ ಪರೀಕ್ಷೆ ರದ್ದು ಮಾಡುವುದು ಕ್ಷೇಮಕರ ಅಲ್ಲ ಎಂದು ಪರಿಗಣಿಸಿ, ಯಾವುದೇ ಬೋರ್ಡ್​ ಅಥವಾ ರಾಜ್ಯ ಸರ್ಕಾರಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿಲ್ಲ.

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು #Modiji_cancel12thboards ಹ್ಯಾಶ್​ಟ್ಯಾಗ್​; ಪ್ರಧಾನಿ ಮೋದಿಗೆ ಸಿಬಿಎಸ್​ಇ ಕ್ಲಾಸ್​ 12 ವಿದ್ಯಾರ್ಥಿಗಳ ಮೊರೆ
ನರೇಂದ್ರ ಮೋದಿ
Follow us on

CBSE Class 12 Board Exam 2021 | ನವದೆಹಲಿ: ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕಾಟದಿಂದ 10ನೆಯ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದಂತೆ, ಕ್ಲಾಸ್​ 12 (Class 12) ಪರೀಕ್ಷೆಯನ್ನು ಸಹ ಕ್ಯಾನ್ಸಲ್​ ಮಾಡುವ ಬಗ್ಗೆ ಇಂದು ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್ ನಿಶಾಂಕ್​ (Union Education Minister Ramesh Pokhriyal Nishank) ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಟ್ವಿಟ್ಟರ್​​ನಲ್ಲಿ ಕ್ಲಾಸ್​ 12 ವಿದ್ಯಾರ್ಥಿಗಳು 2021ನೇ ಸಾಲಿನ ವಾರ್ಷಿಕ ಪರೀಕ್ಷೆಗಳನ್ನು #Modiji_cancel12thboards ಎಂದು ಹ್ಯಾಶ್​ಟ್ಯಾಗ್​ ಬಳಸಿ, ಟ್ವಿಟ್ಟರ್​ನಲ್ಲಿ ಅಭಿಯಾನ ನಡೆಸಿದ್ದಾರೆ. ಅದೀಗ ಭಾರೀ ಟ್ರೆಂಡಿಂಗ್​ ಆಗುತ್ತಿದೆ. ಇದೇ ವೇಳೆ ಅಡ್ವೊಕೇಟ್​ ಮಮತಾ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು ಕ್ಲಾಸ್​ 12 ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪೂರ್ವನಿಗದಿಯಂತೆ ಮೇ 4ರಿಂದ CBSE ಕ್ಲಾಸ್​ 10 ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ದೇಶಾದ್ಯಂತ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕಳೆದ ಏಪ್ರಿಲ್​ ತಿಂಗಳಲ್ಲಿ CBSE Class 10 Board Exam 2021 ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಅದೇ ಮಾದರಿಯಲ್ಲಿ ಕ್ಲಾಸ್​ 12 ಪರೀಕ್ಷೆಗಳನ್ನೂ ರದ್ದುಗೊಳಿಸಿ, ಕ್ಲಾಸ್​ 10 ವಿದ್ಯಾರ್ಥಿಗಳಿಗೆ ಅಂಕ ನೀಡಲು ಅನುಸರಿಸಿದ ಮಾನದಂಡದಲ್ಲೇ ನಮಗೂ ಅಂಕ ನೀಡಿ ಎಂದು ಸುಮಾರು 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್​ ಮಾಡಿ, ಮನವಿ ಮಾಡಿದ್ದಾರೆ. ಸದ್ಯಕ್ಕೆ #modiji_cancel12thboards ಮತ್ತು #CancelExamsSaveStudents ಹ್ಯಾಶ್​ಟ್ಯಾಗ್ ಗಳು ವೈರಲ್​ ಆಗಿವೆ.

ಕೊರೊನಾ ಸೋಂಕು ವಿಪರೀತವಾಗಿರುವಾಗ ಭೌತಿಕವಾಗಿ ಶಾಲೆಗಳಲ್ಲಿ ಕುಳಿತು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಕ್ಷೇಮಕರ ಅಲ್ಲ. internal assessment ಅಥವಾ online exams ಮೂಲಕ ನಮ್ಮನ್ನು ಈ ಅಪಾಯದಿಂದ ತೇರ್ಗಡೆ ಮಾಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹೀಗೆ ಪರೀಕ್ಷೆ ರದ್ದು ಮಾಡುವುದು ಕ್ಷೇಮಕರ ಅಲ್ಲ ಎಂದು ಪರಿಗಣಿಸಿ, ಯಾವುದೇ ಬೋರ್ಡ್​ ಅಥವಾ ರಾಜ್ಯ ಸರ್ಕಾರಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿಲ್ಲ.

(CBSE Board Exams 2021: Students Ask PM narendra modi to Cancel Exams, Trend #Modiji_cancel12thboards on twitter)

CBSE Class 12 Exam 2021: ಸಿಬಿಎಸ್​ಇ ಹತ್ತರಂತೆ, ಕ್ಲಾಸ್​ 12 ಪರೀಕ್ಷೆ ಸಹ ಕ್ಯಾನ್ಸಲ್​? ಹಾಗಾದ್ರೆ ಮುಂದೇನು?

Published On - 12:43 pm, Mon, 17 May 21