ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್​ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ

ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪುವುದರಿಂದ ಸೋಂಕಿತರನ್ನು ಇದು ತಡೆಗಟ್ಟಲು ಸಹಕರಿಸಲಿದೆ. ಅಲ್ಲದೇ, ಇದರ ಬಳಕೆಯಿಂದ ಕೊವಿಡ್ 19 ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮಾಣವೂ ಇಳಿಮುಖವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್​ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ
ಡಿಆರ್​ಡಿಓ 2ಡಿಜಿ ಔಷಧ ಬಿಡುಗಡೆ
Follow us
Skanda
|

Updated on: May 17, 2021 | 1:58 PM

ಕೊರೊನಾ ವೈರಾಣು ಮಾನವ ದೇಹವನ್ನು ಪ್ರವೇಶಿಸಿ ಉಂಟುಮಾಡುತ್ತಿರುವ ಸಮಸ್ಯೆಗೆ ಇಡೀ ವೈದ್ಯಕೀಯ ಲೋಕವೇ ಬೆಚ್ಚಿಬಿದ್ದಿದೆ. ಇದನ್ನು ಹೇಗಾದರೂ ತಡೆದು, ವೈರಾಣುವನ್ನು ಮಟ್ಟ ಹಾಕಬೇಕೆಂದು ವಿಜ್ಞಾನಿಗಳು, ಸಂಶೋಧನಾಕಾರರು ಮೇಲಿಂದ ಮೇಲೆ ಹಲವು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧವನ್ನು ಇಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ.

ಕೊವಿಡ್ ಸೋಂಕು ನಿರೋಧಕವಾಗಿ ಕೆಲಸ ಮಾಡುವ ಸಾಮರ್ಥ್ಯವುಳ್ಳ ಈ ಔಷಧವನ್ನು ಹೈದರಾಬಾದ್​ನ ಡಾ.ರೆಡ್ಡಿಸ್ ಲ್ಯಾಬ್​ನ ಸಹಯೋಗದಲ್ಲಿ ಡಿಆರ್​ಡಿಒ ಅಭಿವೃದ್ಧಿಪಡಿಸಿದ್ದು, ಇದು ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಭರವಸೆ ನೀಡಬಲ್ಲ ಫಲಿತಾಂಶವನ್ನು ನೀಡಿರುವ 2ಡಿಜಿ, ಪೌಡರ್​ ರೂಪದಲ್ಲಿ ಇರಲಿದ್ದು ನೀರಿನ ಜತೆ ಬೆರೆಸಿ ಸೇವಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿರುವ ಡಾ.ಹರ್ಷವರ್ಧನ್, 2ಡಿಜಿ ಔಷಧವು ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಭರವಸೆ ಇದ್ದು, ಸೋಂಕಿತರು ಗುಣಮುಖರಾಗುವ ಅವಧಿ ಹಾಗೂ ಆಕ್ಸಿಜನ್​ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಬಹುಮುಖ್ಯವಾಗಿ ಇದು ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಆಶಾದಾಯಕವಾಗಲಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಇಂತಹ ಭರವಸೆಯನ್ನು ನೀಡಿದ ಡಿಆರ್​ಡಿಓ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

2ಡಿಜಿ ಔಷಧ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (ಡಿಸಿಜಿಐ) ಅನುಮತಿ ನೀಡಿದ್ದು, ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪುವುದರಿಂದ ಸೋಂಕಿತರನ್ನು ಇದು ತಡೆಗಟ್ಟಲು ಸಹಕರಿಸಲಿದೆ. ಅಲ್ಲದೇ, ಇದರ ಬಳಕೆಯಿಂದ ಕೊವಿಡ್ 19 ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮಾಣವೂ ಇಳಿಮುಖವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಡಿಆರ್​ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧದ 10 ಸಾವಿರ ಡೋಸ್ ಇಂದು ವಿತರಣೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ