ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು #Modiji_cancel12thboards ಹ್ಯಾಶ್ಟ್ಯಾಗ್; ಪ್ರಧಾನಿ ಮೋದಿಗೆ ಸಿಬಿಎಸ್ಇ ಕ್ಲಾಸ್ 12 ವಿದ್ಯಾರ್ಥಿಗಳ ಮೊರೆ
CBSE Class 12 Board Exam 2021: ಕೊರೊನಾ ಸೋಂಕು ವಿಪರೀತವಾಗಿರುವಾಗ ಭೌತಿಕವಾಗಿ ಶಾಲೆಗಳಲ್ಲಿ ಕುಳಿತು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಕ್ಷೇಮಕರ ಅಲ್ಲ. internal assessment ಅಥವಾ online exams ಮೂಲಕ ನಮ್ಮನ್ನು ಈ ಅಪಾಯದಿಂದ ತೇರ್ಗಡೆ ಮಾಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹೀಗೆ ಪರೀಕ್ಷೆ ರದ್ದು ಮಾಡುವುದು ಕ್ಷೇಮಕರ ಅಲ್ಲ ಎಂದು ಪರಿಗಣಿಸಿ, ಯಾವುದೇ ಬೋರ್ಡ್ ಅಥವಾ ರಾಜ್ಯ ಸರ್ಕಾರಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿಲ್ಲ.
CBSE Class 12 Board Exam 2021 | ನವದೆಹಲಿ: ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕಾಟದಿಂದ 10ನೆಯ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದಂತೆ, ಕ್ಲಾಸ್ 12 (Class 12) ಪರೀಕ್ಷೆಯನ್ನು ಸಹ ಕ್ಯಾನ್ಸಲ್ ಮಾಡುವ ಬಗ್ಗೆ ಇಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Union Education Minister Ramesh Pokhriyal Nishank) ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಟ್ವಿಟ್ಟರ್ನಲ್ಲಿ ಕ್ಲಾಸ್ 12 ವಿದ್ಯಾರ್ಥಿಗಳು 2021ನೇ ಸಾಲಿನ ವಾರ್ಷಿಕ ಪರೀಕ್ಷೆಗಳನ್ನು #Modiji_cancel12thboards ಎಂದು ಹ್ಯಾಶ್ಟ್ಯಾಗ್ ಬಳಸಿ, ಟ್ವಿಟ್ಟರ್ನಲ್ಲಿ ಅಭಿಯಾನ ನಡೆಸಿದ್ದಾರೆ. ಅದೀಗ ಭಾರೀ ಟ್ರೆಂಡಿಂಗ್ ಆಗುತ್ತಿದೆ. ಇದೇ ವೇಳೆ ಅಡ್ವೊಕೇಟ್ ಮಮತಾ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಕ್ಲಾಸ್ 12 ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪೂರ್ವನಿಗದಿಯಂತೆ ಮೇ 4ರಿಂದ CBSE ಕ್ಲಾಸ್ 10 ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ದೇಶಾದ್ಯಂತ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕಳೆದ ಏಪ್ರಿಲ್ ತಿಂಗಳಲ್ಲಿ CBSE Class 10 Board Exam 2021 ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಅದೇ ಮಾದರಿಯಲ್ಲಿ ಕ್ಲಾಸ್ 12 ಪರೀಕ್ಷೆಗಳನ್ನೂ ರದ್ದುಗೊಳಿಸಿ, ಕ್ಲಾಸ್ 10 ವಿದ್ಯಾರ್ಥಿಗಳಿಗೆ ಅಂಕ ನೀಡಲು ಅನುಸರಿಸಿದ ಮಾನದಂಡದಲ್ಲೇ ನಮಗೂ ಅಂಕ ನೀಡಿ ಎಂದು ಸುಮಾರು 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ, ಮನವಿ ಮಾಡಿದ್ದಾರೆ. ಸದ್ಯಕ್ಕೆ #modiji_cancel12thboards ಮತ್ತು #CancelExamsSaveStudents ಹ್ಯಾಶ್ಟ್ಯಾಗ್ ಗಳು ವೈರಲ್ ಆಗಿವೆ.
ಕೊರೊನಾ ಸೋಂಕು ವಿಪರೀತವಾಗಿರುವಾಗ ಭೌತಿಕವಾಗಿ ಶಾಲೆಗಳಲ್ಲಿ ಕುಳಿತು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಕ್ಷೇಮಕರ ಅಲ್ಲ. internal assessment ಅಥವಾ online exams ಮೂಲಕ ನಮ್ಮನ್ನು ಈ ಅಪಾಯದಿಂದ ತೇರ್ಗಡೆ ಮಾಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹೀಗೆ ಪರೀಕ್ಷೆ ರದ್ದು ಮಾಡುವುದು ಕ್ಷೇಮಕರ ಅಲ್ಲ ಎಂದು ಪರಿಗಣಿಸಿ, ಯಾವುದೇ ಬೋರ್ಡ್ ಅಥವಾ ರಾಜ್ಯ ಸರ್ಕಾರಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿಲ್ಲ.
(CBSE Board Exams 2021: Students Ask PM narendra modi to Cancel Exams, Trend #Modiji_cancel12thboards on twitter)
CBSE Class 12 Exam 2021: ಸಿಬಿಎಸ್ಇ ಹತ್ತರಂತೆ, ಕ್ಲಾಸ್ 12 ಪರೀಕ್ಷೆ ಸಹ ಕ್ಯಾನ್ಸಲ್? ಹಾಗಾದ್ರೆ ಮುಂದೇನು?
Published On - 12:43 pm, Mon, 17 May 21