ಸ್ವಲ್ಪವಾದರೂ ರಾಷ್ಟ್ರೀಯತೆ, ದೇಶಭಕ್ತಿ ಇರಲಿ: ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ರಕ್ಷಣಾ ಉಪಕರಣ ತಯಾರಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಲಾಭದೊಂದಿಗೆ ರಾಷ್ಟ್ರೀಯತೆ, ದೇಶಪ್ರೇಮವೂ ಮುಖ್ಯ ಎಂದು ಹೇಳಿದ್ದಾರೆ. ಕೆಲವು ಕಂಪನಿಗಳು ಶೇಕಾಡ 70ರಷ್ಟು ದೇಶೀ ಉತ್ಪನ್ನಗಳನ್ನೇ ಬಳಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ತುರ್ತು ಖರೀದಿಗಳಲ್ಲಿನ ಲೋಪಗಳು, ಸಕಾಲಕ್ಕೆ ಉತ್ಪನ್ನ ನೀಡದಿರುವುದು ಮತ್ತು ನಕಲಿ ದೇಶೀ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಕ್ ಇನ್ ಇಂಡಿಯಾದಡಿ ಜಾಗತಿಕ ಗುಣಮಟ್ಟ ಕಾಯ್ದುಕೊಳ್ಳಲು ಅವರು ಕರೆ ನೀಡಿದರು.

ಸ್ವಲ್ಪವಾದರೂ ರಾಷ್ಟ್ರೀಯತೆ, ದೇಶಭಕ್ತಿ ಇರಲಿ: ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ
ಸಿಡಿಎಸ್ ಜನರಲ್ ಅನಿಲ್ ಚೌಹಾಣ್

Updated on: Nov 15, 2025 | 2:42 PM

ಸೇನಾ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ(CDS)ಜನರಲ್ ಅನಿಲ್ ಚೌಹಾಣ್ (CDS Anil Chauhan) ಖಡಕ್​​​ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಸೇನೆಗೆ ನೀಡುವ ಯುದ್ಧ ಉಪರಕಣಗಳಲ್ಲಿ ನಿಮ್ಮ ಲಾಭದ ಜತೆಗೆ ರಾಷ್ಟ್ರೀಯತೆ ಹಾಗೂ ದೇಶ ಪ್ರೇಮ ಕೂಡ ಇರಲಿ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳು ಶೇ 70ರಷ್ಟು ದೇಶೀ ನಿರ್ಮಿತ ಎಂದು ಹೇಳಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಅದು ನಿಜವಾಗಿರುವುದಿಲ್ಲ. ರಕ್ಷಣೆ ಇಲಾಖೆಗೆ ನೀಡುವ ಯುದ್ಧ ಸಲಕರಣೆಗಳು ದೇಶಿಯವಾಗಿರಲಿ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದ್ದಾರೆ.

ಇನ್ನು ಇಪಿಯ (ತುರ್ತು ಸೇನಾ ಯಂತ್ರೋಪಕರಣ ಖರೀದಿ) ಬಗ್ಗೆಯೂ ಅವರು ಅಸಮಾಧನ ಹೊರ ಹಾಕಿದ್ದರು. ಐದನೇ ಮತ್ತು ಆರನೇ ಇಪಿ ಸಮಯದಲ್ಲಿ ಹಲವು ಲೋಪಗಳನ್ನು ಸೇನೆ ಪತ್ತೆ ಮಾಡಿದೆ. ಇದರಿಂದ ಸೇನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಉಪಕರಣಗಳನ್ನು ನೀಡುವಾಗ ಕಂಪನಿಗಳು ಅತಿಯಾಗಿ ಭರವಸೆ ನೀಡಿದೆ. ಆದರೆ ಆ ಯಾವ ಭರವಸೆಯನ್ನು ಸರಿಯಾಗಿ ಪೊರೈಸಿಲ್ಲ. ಇನ್ನು ನಾವು ಕೇಳಿದ ಸಮಯಕ್ಕೆ ಯುದ್ಧ ಸಾಮಾಗ್ರಿಗಳನ್ನು ನೀಡಲು ಕಂಪನಿಗಳು ವಿಫಲವಾಗಿರುವುದನ್ನು ಕೂಡ ನೋಡಿದ್ದೇನೆ. ಸಮಯದ ಚೌಕಟ್ಟಿನೊಳಗೆ ಕೆಲಸ ಮಾಡಲು ಕಲಿಯಿರಿ ಎಂದು ಖಾರವಾಗಿ ಹೇಳಿದರು.

ಇಪಿ ಎಂದರೇನು?

ಇಪಿ ಎಂದರೆ ತುರ್ತು ಸೇನಾ ಯಂತ್ರೋಪಕರಣ ಖರೀದಿಗೆ ಸೇನೆಗೆ ಇರುವ ಪರಮಾಧಿಕಾರ. ಈ ಮೂಲಕ ಸೇನೆಗೆ ತುರ್ತು ಅಗತ್ಯ ಇರುವ ಯುದ್ಧ ಉಪಕರಣಗಳನ್ನುರಕ್ಷಣಾ ಸಚಿವಾಲಯದ ಅನುಮೋದನೆ ಇಲ್ಲದೆ ಮತ್ತು ಇತರ ಯಾವುದೇ ದೀರ್ಘಾವಧಿಯ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸದೆ ಖರೀದಿ ಮಾಡಬಹುದು. ತುರ್ತು ಸೇನಾ ಯಂತ್ರೋಪಕರಣ ಖರೀದಿ ಅಡಿ ಸುಮಾರು 300 ಕೋಟಿ ರೂ.ಗಳವರೆಗಿನ ಒಪ್ಪಂದಗಳನ್ನು ಮಾಡಿಕೊಳ್ಳಲು ಸೇನೆಗೆ ಅವಕಾಶ ಇದೆ ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ನಿಮ್ಮ ತಂತ್ರಜ್ಞಾನದಲ್ಲಿ ಲೋಪ ಕಂಡು ಬಂದರೆ ದೇಶಕ್ಕೆ ಅಪಾಯ: ಚೌಹಾಣ್ ಕಿವಿ ಮಾತು

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಂಪನಿಗಳು ಸ್ಥಳೀಯ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ, ದೇಶೀಯ ವಸ್ತುಗಳಿಗೆ ಮೊದಲು ಗಮನ ನೀಡಿ. ಅವುಗಳನ್ನು ಮರೆಮಾಚುವ ಕೆಲಸ ಮಾಡಬೇಡಿ. ಹಾಗೂ ಒಂದು ಮಾತು ಮಾತ್ರ ನೆನೆಪಿನಲ್ಲಿಟ್ಟುಕೊಳ್ಳಿ, ಸೇನೆ ಜತೆಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದೀರಾ, ಆ ಒಪ್ಪಂದದಂತೆ ನಡೆದುಕೊಳ್ಳಿ, ಸೇನಾ ತಂತ್ರಜ್ಞಾನದಲ್ಲಿ ಲೋಪ ಕಂಡು ಬಂದರೆ, ಅದು ದೇಶಕ್ಕೆ ಅಪಾಯ, ನಾವು ಕೇಳಿದ ಸಮಯದಲ್ಲಿ ಉಪಕರಣಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಹಲವು ಕಂಪನಿಗಳು ಹೇಳುತ್ತವೆ, ನಾನು ಶೇಕಾಡ 70ರಷ್ಟು ದೇಶೀಯ ತಂತ್ರಜ್ಞಾನಗಳನ್ನೇ ಬಳಸುತ್ತೇವೆ ಎಂದು, ಆದರೆ ಸತ್ಯ ನಮಗೆ ತಿಳಿದಿದೆ. ಸುಳ್ಳು ಹೇಳುವ ಅಥವಾ ಮೋಸ ಮಾಡುವ ಮುನ್ನ ಯೋಚನೆ ಮಾಡಿ ನೀವು ವ್ಯವಹಾರ ಮಾಡುತ್ತಿರುವುದು ಬಲಿಷ್ಠ ಸೇನೆಯ ಜತೆಗೆ ಎಂದು. ನಮಗೆ ನೀಡುವ ಸೇನಾ ಉಪಕರಣಗಳು ಕೇವಲ ನಿಮ್ಮ ಲಾಭಕ್ಕಾಗಿ ಮಾತ್ರವಲ್ಲ, ಅದು ದೇಶದ ರಕ್ಷಣೆ ಎಂಬುದು ನೆನೆಪಿರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರು ಸೇರಿ 9 ಮಂದಿ ಸಾವು, ದೆಹಲಿ ಸ್ಫೋಟ ಬೆನ್ನಲ್ಲೇ ಮತ್ತೊಂದು ಕೃತ್ಯ

ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಬೇಕೇ ಹೊರತು ಬೆಲೆ ಕಟ್ಟುವವರಾಗಬಾರದು:

ಯುದ್ಧ ಉಪಕರಣಗಳನ್ನು ಉತ್ಪಾದಿಸುವ ಕಂಪನಿಗಳು ಮೇಕ್-ಇನ್-ಇಂಡಿಯಾದ ಮೂಲಕ ಜಾಗತಿಕವಾಗಿ ಪೈಪೋಟಿ ನೀಡಬೇಕೇ ಹೊರತು, ದೇಶದ ಸೇನೆಗೆ ಬೆಲೆ ಕಟ್ಟುವವರಲ್ಲ. ಖಾಸಗಿ ವಲಯವು ಜಾಗತಿಕ ಮಾರುಕಟ್ಟೆ ಮಾನದಂಡಗಳಿಗೆ ಹೊಂದಿಕೆಯಾದರೆ ಮಾತ್ರ ಮೇಕ್-ಇನ್-ಇಂಡಿಯಾ ರಕ್ಷಣಾ ಉತ್ಪಾದನೆ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಕಂಪನಿಗಳು ವೆಚ್ಚ ಮಾಡಬೇಕು ಹಾಗೂ ಸ್ಪರ್ಧಾತ್ಮಕವಾಗಿ ಕೆಲಸ ಮಾಡಬೇಕು. ವೆಚ್ಚ ಮಾಡುವುದು ಅಥವಾ ಸ್ಪರ್ಧಾತ್ಮಕವಾಗಿರುವುದು ಎಂದರೆ ಭಾರತೀಯ ಸಶಸ್ತ್ರ ಪಡೆಗಳಿಗೆ ಮಾರಾಟ ಮಾಡುವುದು ಅಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವೆಚ್ಚ ಮಾಡಬೇಕು ಹಾಗೂ ಸ್ಪರ್ಧಾತ್ಮಕವಾಗಿರಬೇಕು ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ