ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Feb 08, 2021 | 6:16 PM

ಜನವರಿ 26ರಂದು ನಡೆದ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ್ಯಾಲಿ ವೇಳೆ ಖಲಿಸ್ತಾನ ​ ಬಾವುಟ ಹಾರಾಡಿದ್ದವು. ಈ ಮೂಲಕ ರೈತರ ಪ್ರತಿಭಟನೆಗೆ ಖಲಿಸ್ತಾನ​ ಲಿಂಕ್​ ಸಿಕ್ಕಿತ್ತು. 

ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ಖಲಿಸ್ತಾನ ಹಾಗೂ ಪಾಕಿಸ್ತಾನದ ಜತೆ ನಂಟು ಹೊಂದಿರುವ 1,178 ಟ್ವಿಟ್ಟರ್​ ಖಾತೆಗಳ ಮೇಲೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್​ಗೆ ಸೂಚನೆ ನೀಡಿದೆ. ನಕಲಿ ಸುದ್ದಿ ಹರಡುತ್ತಿರುವ ಆರೋಪದ ಮೇಲೆ 250 ಟ್ವಿಟರ್​ ಖಾತೆಗಳನ್ನು ಹೆಸರಿಸಿ ಅವನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್​ ಬಳಿ ಈ ಮೊದಲು ಕೋರಿತ್ತು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಕಳೆದ ಗುರುವಾರವೇ ಟ್ವಿಟ್ಟರ್​ಗೆ ಈ ನೋಟಿಸ್​ ನೀಡಿದೆ. ಐಟಿ ಇಲಾಖೆ ಹೇಳುವ ಪ್ರಕಾರ ಅವರು ಉಲ್ಲೇಖಿಸಿರುವ 1,178 ಟ್ವಿಟ್ಟರ್​ ಖಾತೆಗಳಿಗೆ ಖಲಿಸ್ತಾನ ಇಲ್ಲವೇ ಪಾಕಿಸ್ತಾನದ ಲಿಂಕ್​ ಇದೆಯಂತೆ. ಇದರಿಂದ ದೇಶದ ಸೌಹಾರ್ದತೆ ಹಾಳಾಗಲಿದೆ ಎಂಬುದು ಕೇಂದ್ರ ಸರ್ಕಾರದ ಆರೋಪ.

ರೈತ ಪ್ರತಿಭಟನೆ ವಿಚಾರ ಇಟ್ಟುಕೊಂಡು ನಕಲಿ ಸುದ್ದಿ ಹರಡುತ್ತಿರುವ ಹಾಗೂ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವವರ ವಿರುದ್ಧ ಟ್ವಿಟ್ಟರ್​ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಮೂಲಕ ಭಾರತದ ನೀತಿಯನ್ನು ಅವರು​ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವುದು ಕೇಂದ್ರ ಸರ್ಕಾರದ ಆರೋಪವಾಗಿದೆ. ಈಗ ಉಲ್ಲೇಖ ಮಾಡಿರುವ ಟ್ವಿಟ್ಟರ್​ ಖಾತೆಗಳು ಕೂಡ ದೇಶಕ್ಕೆ ತೊಂದರೆ ತಂದೊಡ್ಡಬಹುದು. ಹೀಗಾಗಿ ಅವನ್ನು ರದ್ದು ಮಾಡಬೇಕು ಎಂಬುದು ಕೇಂದ್ರ ಸರ್ಕಾರ ಕಳಕಳಿ.

ಇನ್ನು, ಇತ್ತೀಚೆಗಷ್ಟೇ ವೈಯಕ್ತಿಕ ಕಾರಣ ನೀಡಿ ಟ್ವಿಟ್ಟರ್​ ಇಂಡಿಯಾದ ಪಬ್ಲಿಕ್​ ಪಾಲಿಸಿ ಮಹಿಮಾ ಕೌಲ್​ ರಾಜೀನಾಮೆ ನೀಡಿದ್ದರು. ಕೌಲ್​ ಮಾರ್ಚ್​ವರೆಗೆ ಕಾರ್ಯ ನಿರ್ವಹಿಸಲಿದ್ದು, ನಂತರ ಟ್ವಿಟ್ಟರ್​ ತೊರೆಯಲಿದ್ದಾರೆ. ಒತ್ತಡಕ್ಕೆ ಮಣಿದು ಕೌಲ್​ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ.

ಜನವರಿ 26ರಂದು ನಡೆದ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ್ಯಾಲಿ ವೇಳೆ ಖಲಿಸ್ತಾನ ​ ಬಾವುಟ ಹಾರಾಡಿದ್ದವು. ಈ ಮೂಲಕ ರೈತರ ಪ್ರತಿಭಟನೆಗೆ ಖಲಿಸ್ತಾನ​ ಲಿಂಕ್​ ಸಿಕ್ಕಿತ್ತು.

 

ಟ್ರಂಪ್​ ಟ್ವಿಟ್ಟರ್​ ಖಾತೆ ರದ್ದುಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಇದೇ ಮಹಿಳೆ! ಪ್ರಕ್ರಿಯೆ ಹೇಗಿತ್ತು ಗೊತ್ತಾ?