ಬಿಪಿಎಲ್ ಕಾರ್ಡುದಾರರೇ ಇತ್ತ ಗಮನಿಸಿ.. ಪಡಿತರ ವಿವರ ಪಡೆಯಲು ಬಂದಿದೆ ಹೊಸ ಆ್ಯಪ್

|

Updated on: Mar 16, 2021 | 2:52 PM

Mera Ration App: ಸದ್ಯ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಮೇರಾ ರೇಷನ್ ಆ್ಯಪ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ 14 ಭಾಷೆಗಳಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಿದ್ದೇವೆ ಎಂದು ಆ್ಯಪ್ ರಚಿಸಿದ ನ್ಯಾಷನಲ್ ಇನ್ಫಾರ್ಮೇಶನ್ ಸೆಂಟರ್ ತಿಳಿಸಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ Mera Ration ಆ್ಯಪ್​ನ್ನು  ಸುಲಭವಾಗಿ ಡೌನ್​ಲೋಡ್​ ಮಾಡಿಕೊಳ್ಳಬಹುದು.

ಬಿಪಿಎಲ್ ಕಾರ್ಡುದಾರರೇ ಇತ್ತ ಗಮನಿಸಿ.. ಪಡಿತರ ವಿವರ ಪಡೆಯಲು ಬಂದಿದೆ ಹೊಸ ಆ್ಯಪ್
ಪ್ರಾತಿನಿಧಿಕ ಚಿತ್ರ
Follow us on

ದೇಶದ ಪಡಿತರ ಚೀಟಿದಾರರಿಗೆ ಸಹಕಾರಿಯಾಗಬಲ್ಲ ಆ್ಯಂಡ್ರಾಯ್ಡ್ ಆ್ಯಪ್ ಆ್ಯಪ್ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಮಹತ್ವಾಕಾಂಕ್ಷಿ ಒನ್ ನೇಶನ್ ಒನ್ ರೇಷನ್ ಕಾರ್ಡ ಯೋಜನೆ ಜಾರಿಗೆ ಸಹಾಯಕಾರಿ ಆಗಬಲ್ಲ ಈ ಆ್ಯಪ್​ಗೆ‘ಮೇರಾ ರೇಷನ್’ ಎಂದು ಹೆಸರಿಸಲಾಗಿದೆ. ಮೇರಾ ರೇಷನ್ ಆ್ಯಪ್ ಪಡಿತರ ಚೀಟಿ ಹೊಂದಿರುವ ವಲಸೆ ಕಾರ್ಮಿಕರಿಗೆ ಹೆಚ್ಚು ಉಪಯೋಗವಾಗಲಿದೆ. ಅಲ್ಲದೇ ದೇಶದ ಎಲ್ಲಾ ಬಿಪಿಎಲ್ ಕಾರ್ಡುದಾರರು ಈ ಆ್ಯಪ್​ನ ಪ್ರಯೋಜನ ಪಡೆಯಬಹುದಾಗಿದೆ.

ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಯ ವಿವರ, ಹಿಂದಿನ ಬಾರಿ ಪಡೆದ ಪಡಿತರದ ವಿವರ ಮತ್ತು ಪಡಿತರ ಚೀಟಿ​ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪಡೆಯಲು ಮೇರಾ ರೇಷನ್ ಆ್ಯಪ್ ಸಹಕಾರಿಯಾಗಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಹೊಂದಿದವರು ತಮಗೆ ದೊರೆಯುವ ಪಡಿತರದ ವಿವರವನ್ನು ಮೇರಾ ರೇಷನ್ ಆ್ಯಪ್ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು. ಇದೀಗ ಒಂದು ದೇಶ, ಒಂದು ರೇಷನ್ ​ಕಾರ್ಡ್​ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲು ’ಮೇರಾ ರೇಷನ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಸದ್ಯ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಮೇರಾ ರೇಷನ್ ಆ್ಯಪ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ 14 ಭಾಷೆಗಳಲ್ಲಿ ಈ ಆ್ಯಪ್​ ಬಿಡುಗಡೆ ಮಾಡಲಿದ್ದೇವೆ ಎಂದು ಆ್ಯಪ್ ರಚಿಸಿದ ನ್ಯಾಷನಲ್ ಇನ್ಫಾರ್ಮೇಶನ್ ಸೆಂಟರ್ ತಿಳಿಸಿದೆ.

ಗೂಗಲ್ ಪ್ಲೇ ಸ್ಟೋರ್​ನಲ್ಲಿ Mera Ration ಆ್ಯಪ್​ನ್ನು  ಸುಲಭವಾಗಿ ಡೌನ್​ಲೋಡ್​ ಮಾಡಿಕೊಳ್ಳಬಹುದು.

ಮಹತ್ವಾಕಾಂಕ್ಷಿ ‘ಒನ್ ನೇಶನ್ ಒನ್ ರೇಷನ್ ಕಾರ್ಡ್’ ಯೋಜನೆಯನ್ನು ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಪ್ರಾಯೋಗಿಕವಾಗಿ ದೇಶದ ನಾಲ್ಕು ರಾಜ್ಯಗಳಲ್ಲಿ ಆರಂಭಿಸಿತ್ತು. ಇಡೀ ದೇಶದಲ್ಲಿ ಈ ವರ್ಷದ ಮಾರ್ಚ್ 31ರ ಒಳಗೆ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಮೇರಾ ರೇಷನ್ ಆ್ಯಪ್ ಈ ಉದ್ದೇಶಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಲಿದೆ.

ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯ ಮೇಲೆ ಕೇಂದ್ರ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆ ಇಟ್ಟುಕೊಂಡಿದೆ. ದೇಶದ ವಲಸೆ ಕಾರ್ಮಿಕರು ಮತ್ತು ಅಲೆಮಾರಿ ಜನಾಂಗಗಳಿಗೆ ಈ ಯೋಜನೆ ಬಹು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಗಳೊಂದಿಗೆ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ಇನ್ನೊಂದು ಬಲು ಪ್ರಯೋಜನಕಾರಿ ಯೋಜನೆ ಇದೆ..ಯಾವುದು ಗೊತ್ತಾ?
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿತ್ತು. ಮೂರು ಕಂತುಗಳಲ್ಲಿ ತಲಾ ₹2000, ವಾರ್ಷಿಕ ₹6000 ಹಣವನ್ನು ರೈತರಿಗೆ ಒದಗಿಸುವ ಮೂಲಕ ಆರ್ಥಿಕ ಚೇತರಿಕೆಗೆ ಸಣ್ಣ ದಾರಿ ಮಾಡಿಕೊಡುವುದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಉದ್ದೇಶ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಈ ಮೂಲಕ ವಾರ್ಷಿಕ ₹6000 ಮೊತ್ತವನ್ನು ಸರ್ಕಾರದಿಂದ ನೇರವಾಗಿ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅತ್ಯಂತ ಸುಲಭವಾಗಿ ನೋಂದಣಿ ಆಗಬಹುದು. ನೋಂದಾಯಿಸಿಕೊಳ್ಳಲು ಹತ್ತಿರದ ಕಂಪ್ಯೂಟರ್/ಇಂಟರ್​ನೆಟ್ ಕೇಂದ್ರಕ್ಕೆ ತೆರಳಬಹುದು ಇಲ್ಲವೇ ಹಲವು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕೇಂದ್ರಗಳನ್ನೂ ಸಂಪರ್ಕಿಸಬಹುದು. ಅಂತಹ ಕೇಂದ್ರಗಳ ಮೂಲಕವೂ ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಇಲ್ಲವೇ, PM Kisan ವೆಬ್​ಸೈಟ್​ಗೆ ತೆರಳಿ, ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ನ್ಯೂ ಫಾರ್ಮರ್ಸ್ ರಿಜಿಸ್ಟ್ರೇಶನ್​ಗೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಅಧಾರ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಬರೆಯಿರಿ. ನಂತರ ನಿಮ್ಮ ಖಾಸಗಿ ವಿವರಗಳನ್ನು ಅಲ್ಲಿ ಕೇಳಿದಂತೆ ತುಂಬಿ, ಬ್ಯಾಂಕ್ ಖಾತೆಯನ್ನೂ ನಮೂದಿಸಿ.

ಇದನ್ನೂ ಓದಿ: ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ

Karnataka Budget 2021: ಕೃಷಿ ಮತ್ತು ಪೂರಕ ಚಟುವಟಿಕೆಗೆ ₹ 31,028 ಕೋಟಿ ಅನುದಾನ, ರೈತ ಸಮುದಾಯಕ್ಕೆ ಶಕ್ತಿ ತುಂಬಲು ಹಲವು ಯೋಜನೆ

Published On - 11:13 am, Sat, 13 March 21