Char Dham Yatra: ಚಾರ್ ಧಾಮ್ ಯಾತ್ರೆ ವೇಳೆ ಹೃದಯಾಘಾತದಿಂದ ಇಬ್ಬರು ಯಾತ್ರಾರ್ಥಿಗಳು ಸಾವು

|

Updated on: Apr 24, 2023 | 6:02 PM

ಉತ್ತರಾಖಂಡದ ಯಮ್ನೋತ್ರಿಯಲ್ಲಿ ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯಲ್ಲಿ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ

Char Dham Yatra: ಚಾರ್ ಧಾಮ್ ಯಾತ್ರೆ ವೇಳೆ ಹೃದಯಾಘಾತದಿಂದ ಇಬ್ಬರು ಯಾತ್ರಾರ್ಥಿಗಳು ಸಾವು
ಸಾಂದರ್ಭಿಕ ಚಿತ್ರ
Follow us on

ಡೆಹ್ರಾಡೂನ್: ಚಾರ್ ಧಾಮ್ ಯಾತ್ರೆ (Char Dham Yatra) ವೇಳೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರಾಖಂಡದ ಯಮ್ನೋತ್ರಿಯಲ್ಲಿ ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯಲ್ಲಿ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಚಾರ್ ಧಾಮ್ ಯಾತ್ರೆಗೆ ಭೇಟಿ ನೀಡುವ ಯಾತ್ರಾರ್ಥಿಗಳು ಉತ್ತರಾಖಂಡ್ ಸರ್ಕಾರವು ಚಾರ್ ಧಾಮ್ ಯಾತ್ರೆಯ ಬಗ್ಗೆ ನೀಡಿದ ಸಲಹೆಗೆ ಗಮನ ಕೊಡುತ್ತಿಲ್ಲ, ಪ್ರಯಾಣಿಕರಿಗೆ ಸರ್ಕಾರವು ಆರೋಗ್ಯ ಸಲಹೆಯನ್ನು ನೀಡಿದೆ ಆದರೆ ಯಾತ್ರಾರ್ಥಿಗಳು ನಿರ್ಲಕ್ಷ್ಯದಿಂದಾಗಿ, ಯಮುನೋತ್ರಿ ಧಾಮದಲ್ಲಿ ಸತತ ಎರಡನೇ ಬಾರಿಗೆ ಭಕ್ತರು ಸಾವನ್ನಪ್ಪಿದ್ದಾರೆ. ಯಮ್ನೋತ್ರಿಯಲ್ಲಿ ಹೃದಯಾಘಾತದಿಂದ ಇಲ್ಲಿಯವರೆಗೆ 2 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ:Char Dham Yatra 2022: ಚಾರ್​ಧಾಮ್ ಯಾತ್ರೆ ವೇಳೆ ಈ ಬಾರಿ 201 ಭಕ್ತರು ಸಾವು

ಉತ್ತರಾಖಂಡ್ ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಯಾತ್ರೆಗೆ ತೆರಳುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ವಿಶೇಷವಾಗಿ 55 ವರ್ಷ ಮೇಲ್ಪಟ್ಟ ರೋಗಿಗಳು, ವೃದ್ಧರು ಹಾಗೂ ಯಾತ್ರಾರ್ಥಿಗಳು ಆರೋಗ್ಯ ತಪಾಸಣೆ ಅರ್ಜಿಯನ್ನು ಭರ್ತಿ ಮಾಡುವಂತೆ ಸೂಚಿಸಲಾಗಿದೆ. ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿದ ನಂತರವೇ ಅವರು ಯಾತ್ರೆಗೆ ಹೋಗಬೇಕು ಎಂದು ಹೇಳಲಾಗಿದೆ. ಅಕ್ಷಯ ತೃತೀಯದ (ಏ.22) ಶುಭ ಸಂದರ್ಭದಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Mon, 24 April 23