ಛತ್ತೀಸ್​ಗಢ: ಶಾಲೆಬಿಟ್ಟು ಟ್ರ್ಯಾಕ್ಟರ್​ ಸವಾರಿ ಮಾಡಲು ಹೋಗಿ ಮೂವರು ವಿದ್ಯಾರ್ಥಿಗಳು ಸಾವು

ಶಾಲೆಬಿಟ್ಟು ಟ್ರ್ಯಾಕ್ಟರ್​ ಸವಾರಿ ಮಾಡಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕುರುಡ್ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ರಾ ಗ್ರಾಮದ ಬಳಿ ಬುಧವಾರ ಈ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೃತರನ್ನು ಮೋಗ್ರಾ ಗ್ರಾಮದ ನಿವಾಸಿಗಳಾದ ಪ್ರೀತಮ್ ಚಂದ್ರಕರ್ (16), ಮಾಯಾಂಕ್ ಧ್ರುವ್ (16) ಮತ್ತು ಚರ್ರಾದ ಹೊನೇಂದ್ರ ಸಾಹು (14) ಎಂದು ಗುರುತಿಸಲಾಗಿದೆ

ಛತ್ತೀಸ್​ಗಢ: ಶಾಲೆಬಿಟ್ಟು ಟ್ರ್ಯಾಕ್ಟರ್​ ಸವಾರಿ ಮಾಡಲು ಹೋಗಿ ಮೂವರು ವಿದ್ಯಾರ್ಥಿಗಳು ಸಾವು
ಪೊಲೀಸ್​

Updated on: Feb 06, 2025 | 3:14 PM

ಶಾಲೆಗೆ ಚಕ್ಕರ್ ಹೊಡೆದು ಟ್ರ್ಯಾಕ್ಟರ್ ಸವಾರಿ ಮಾಡಲು ಹೋಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಛತ್ತೀಸ್​ಗಢದ ಧಮತರಿ ಜಿಲ್ಲೆಯಲ್ಲಿ ಶಾಲೆ ಬಿಟ್ಟು ಟ್ರ್ಯಾಕ್ಟರ್​ ಏರಿ ಹೊರಟಾಗ ಅದು ಪಲ್ಟಿಯಾಗಿ ಮೂವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕುರುಡ್ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ರಾ ಗ್ರಾಮದ ಬಳಿ ಬುಧವಾರ ಈ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಮೋಗ್ರಾ ಗ್ರಾಮದ ನಿವಾಸಿಗಳಾದ ಪ್ರೀತಮ್ ಚಂದ್ರಕರ್ (16), ಮಾಯಾಂಕ್ ಧ್ರುವ್ (16) ಮತ್ತು ಚರ್ರಾದ ಹೊನೇಂದ್ರ ಸಾಹು (14) ಎಂದು ಗುರುತಿಸಲಾಗಿದೆ . ಗಾಯಗೊಂಡ ಬಾಲಕ ಅರ್ಜುನ್ ಯಾದವ್ ಬನಗರ ಮೂಲದವನು ಎಂದು ಅವರು ಹೇಳಿದರು.

ಚಂದ್ರಕರ್ ತನ್ನ ಟ್ರ್ಯಾಕ್ಟರ್ ಹೊರತೆಗೆದಾಗ ನಾಲ್ವರೂ ಶಾಲೆಯನ್ನು ಬಿಟ್ಟು ಅದರ ಮೇಲೆ ಸವಾರಿ ಮಾಡಲು ಕುರುಡ್‌ಗೆ ಹೋದರು ಎಂದು ಅವರು ಹೇಳಿದರು. ಹಿಂತಿರುಗುವಾಗ, ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಚಂದ್ರಕರ್, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಚಾರ್ರಾದ ಕೃಷಿ ಕಾಲೇಜು ಬಳಿ ಪಲ್ಟಿ ಹೊಡೆದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮಹಾಕುಂಭಕ್ಕೆ ತೆರಳುವ ಮಾರ್ಗದಲ್ಲಿ ಎರಡು ಪ್ರತ್ಯೇಕ ಅಪಘಾತ, ಮೂವರು ಸಾವು, 40 ಮಂದಿಗೆ ಗಾಯ

ಮೂವರು ಬಾಲಕರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದರು. ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us