Chief Secretaries meeting: ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಇಂದಿನಿಂದ ಆರಂಭ; ಕಾರ್ಯಕ್ರಮಕ್ಕೆ ಪ್ರಧಾನಿ ನಮೋ ಸಾರಥಿ

| Updated By: Rakesh Nayak Manchi

Updated on: Jan 06, 2023 | 7:39 AM

ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಇಂದಿನಿಂದ ಶುರುವಾಗಿದ್ದು, ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಲಿದ್ದು, 6 ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

Chief Secretaries meeting: ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಇಂದಿನಿಂದ ಆರಂಭ; ಕಾರ್ಯಕ್ರಮಕ್ಕೆ ಪ್ರಧಾನಿ ನಮೋ ಸಾರಥಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us on

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ (National Conference of Chief Secretaries) ಇಂದಿನಿಂದ ಆರಂಭವಾಗಲಿದೆ. ನೀತಿ ಆಯೋಗ ಆಯೋಜಿಸಿರುವ ಈ ಸಭೆಯು ಪುಸಾ ರಸ್ತೆಯಲ್ಲಿರುವ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಹಿಸಲಿದ್ದಾರೆ. ಎಂಎಸ್ಎಂಇಗಳು, ಮೂಲಸೌಕರ್ಯ ಮತ್ತು ಹೂಡಿಕೆಗಳು, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೋಷಣೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡ ಆರು ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿಷಯವನ್ನ ಚರ್ಚಿಸಿ ಪ್ರಸ್ತುತಪಡಿಸಲಾಗುವುದು. ಜೊತೆಗೆ ಈ ಹಿಂದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆದ ಮೂರು ವರ್ಚುವಲ್ ಸಮ್ಮೇಳನಗಳ ಫಲಿತಾಂಶವನ್ನು ಸಹ ಈ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವುದು. ಇದು ನಾಲ್ಕು ವಿಷಯಗಳ ಕುರಿತು ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಸ್ಥಳೀಯ, ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ, G20, ರಾಜ್ಯಗಳ ಪಾತ್ರ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ.

ಇದನ್ನೂ ಓದಿ:Chief Secretaries meeting: ಜನವರಿ 6 ಮತ್ತು 7ರಂದು ಮುಖ್ಯ ಕಾರ್ಯದರ್ಶಿಗಳ ಎರಡನೇ ಸಮಾವೇಶ, ಪ್ರಧಾನಿ ಮೋದಿ ಭಾಗಿ

ಪ್ರಧಾನಮಂತ್ರಿಯವರ ನಿರ್ದೇಶನದ ಪ್ರಕಾರ, ಅವರ ಕಚೇರಿಯು ಜಿಎಸ್‌ಟಿ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಭಾರತದ ಪ್ರತಿಕ್ರಿಯೆ ಕುರಿತು ಮೂರು ವಿಶೇಷ ಚರ್ಚೆಗಳು ನಡೆಯಲಿವೆ. ಕಳೆದ ಮೂರು ತಿಂಗಳಲ್ಲಿ ನಡೆದ 150 ಕ್ಕೂ ಹೆಚ್ಚು ಸಭೆಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ವ್ಯಾಪಕ ಚರ್ಚೆಗಳ ನಂತರ ಸಮ್ಮೇಳನದ ಕಾರ್ಯಸೂಚಿಯನ್ನು ನಿರ್ಧರಿಸಲಾಗಿದೆ ಎಂದು ಪಿಎಂಒ (PMO) ಹೇಳಿಕೆ ನೀಡಿದೆ. ಇನ್ನು ಮೂರು ದಿನಗಳ ಸಮ್ಮೇಳನವು ರಾಜ್ಯಗಳ ಸಹಭಾಗಿತ್ವದಲ್ಲಿ ತ್ವರಿತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವತ್ತ ಗಮನಹರಿಸುತ್ತದೆ ಮತ್ತು ಕೇಂದ್ರದ 200 ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Fri, 6 January 23