ನಿರೀಕ್ಷೆಯಂತೆ ಅಮೆರಿಕಾದ ಮೇಲೆ ಗದಾಪ್ರಹಾರ ನಡೆಸಿದ ಚೀನಾ

ದೆಹಲಿ: ಚೀನಾದಲ್ಲೇ ಹುಟ್ಟಿ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಮೆರಿಕವನ್ನು ಹೆಚ್ಚು ಕಾಡಿದೆ. ಹೀಗಾಗಿ ಮೊದಲಿಗಿಂತಲೂ ಈಗ ಅಮೆರಿಕಗೆ ಚೀನಾ ಕಂಡ್ರೆ ಆಗಲ್ಲ. ಚೀನಾ ಆ್ಯಪ್​ಗಳನ್ನ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಖಡಕ್ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಅಮೆರಿಕಾದ ಹೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ರಮಗಳಿಗೆ ಪ್ರತೀಕಾರವಾಗಿ ಚೀನಾ ಸಹ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತು. ಅದರಂತೆ ಇಂದು ಚೀನಾದ ಸಿಂಚೂನ್ ಪ್ರಾಂತ್ಯದಲ್ಲಿರುವ ಚೆಂಗ್ಡುನಲ್ಲಿರುವ ಅಮೆರಿಕದ […]

ನಿರೀಕ್ಷೆಯಂತೆ ಅಮೆರಿಕಾದ ಮೇಲೆ ಗದಾಪ್ರಹಾರ ನಡೆಸಿದ ಚೀನಾ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jul 24, 2020 | 10:13 AM

ದೆಹಲಿ: ಚೀನಾದಲ್ಲೇ ಹುಟ್ಟಿ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಮೆರಿಕವನ್ನು ಹೆಚ್ಚು ಕಾಡಿದೆ. ಹೀಗಾಗಿ ಮೊದಲಿಗಿಂತಲೂ ಈಗ ಅಮೆರಿಕಗೆ ಚೀನಾ ಕಂಡ್ರೆ ಆಗಲ್ಲ. ಚೀನಾ ಆ್ಯಪ್​ಗಳನ್ನ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಖಡಕ್ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಅಮೆರಿಕಾದ ಹೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ರಮಗಳಿಗೆ ಪ್ರತೀಕಾರವಾಗಿ ಚೀನಾ ಸಹ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತು.

ಅದರಂತೆ ಇಂದು ಚೀನಾದ ಸಿಂಚೂನ್ ಪ್ರಾಂತ್ಯದಲ್ಲಿರುವ ಚೆಂಗ್ಡುನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮುಚ್ಚಲು ಚೀನಾ ಆದೇಶ ನೀಡಿದೆ. ಚೀನಾದಲ್ಲಿ ಆಮೆರಿಕಾದ ಐದು ಕಾನ್ಸುಲೇಟ್ ಕಚೇರಿಗಳಿವೆ. ಇವುಗಳ ಪೈಕಿ ಒಂದನ್ನು ಮುಚ್ಚಲು ಆದೇಶ ನೀಡಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us