ಪರ-ವಿರೋಧದ ನಡುವೆಯೇ CAA ಕಾಯ್ದೆಗೆ ಬಿತ್ತು ಗೆಜೆಟ್ ಅಂಕಿತ​

|

Updated on: Jan 11, 2020 | 10:43 AM

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ನಿನ್ನೆಯಿಂದ ಜಾರಿಗೊಂಡಿದೆ. ಕಾಯ್ದೆಯನ್ನು ಅನುಷ್ಠಾನಗೊಳಿಸಿ ಕೇಂದ್ರ ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಧಾರ್ಮಿಕ ಕಿರುಕುಳಗಳ ಹಿನ್ನೆಲೆಯಲ್ಲಿ ಡಿಸೆಂಬರ್ 31, 2014ರ ಒಳಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ದೇಶಾದ್ಯಂತ ಸಿಎಎ ಪರ-ವಿರೋಧ ಹೋರಾಟಗಳು ನಡೆಯುತ್ತಿರುವಾಗಲೇ ಕೇಂದ್ರ ಗೃಹಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್​ನಲ್ಲಿ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು.

ಪರ-ವಿರೋಧದ ನಡುವೆಯೇ CAA ಕಾಯ್ದೆಗೆ ಬಿತ್ತು ಗೆಜೆಟ್ ಅಂಕಿತ​
Follow us on

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ನಿನ್ನೆಯಿಂದ ಜಾರಿಗೊಂಡಿದೆ. ಕಾಯ್ದೆಯನ್ನು ಅನುಷ್ಠಾನಗೊಳಿಸಿ ಕೇಂದ್ರ ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಧಾರ್ಮಿಕ ಕಿರುಕುಳಗಳ ಹಿನ್ನೆಲೆಯಲ್ಲಿ ಡಿಸೆಂಬರ್ 31, 2014ರ ಒಳಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆ ಇದಾಗಿದೆ.

ದೇಶಾದ್ಯಂತ ಸಿಎಎ ಪರ-ವಿರೋಧ ಹೋರಾಟಗಳು ನಡೆಯುತ್ತಿರುವಾಗಲೇ ಕೇಂದ್ರ ಗೃಹಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್​ನಲ್ಲಿ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು.

Published On - 7:37 am, Sat, 11 January 20