JNUನಲ್ಲಿ 2 ಗುಂಪುಗಳ ಮಾರಾಮಾರಿ, ಪ್ರತಿಭಟನಾನಿರತರ ಮೇಲೆ ಮುಸುಕುಧಾರಿಗಳ ಅಟ್ಯಾಕ್

|

Updated on: Jan 06, 2020 | 8:32 AM

ದೆಹಲಿ: ನಿನ್ನೆ ರಾತ್ರಿ ಜೆಎನ್​ಯು ಆವರಣ ರಣರಂಗವಾಗಿದೆ. ಮುಸುಕುಧಾರಿಗಳು ವಿಧ್ಯಾರ್ಥಿನಿಯ ಹಾಸ್ಟೆಲ್​ಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ದೇಶಾಧ್ಯಂತ ಖಂಡನೆ ವ್ಯಕ್ತವಾಗ್ತಿದೆ. ವಿವಿ ಪೋಲೀಸ್ ಕಂಟ್ರೋಲ್ ನಲ್ಲಿದ್ದು ರಾತ್ರಿ ಜೆಎನ್​ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ತಾಳ್ಮೆಯ ಕಟ್ಟೆ ಒಡೆದಿದೆ. ಆಕ್ರೋಶ ಭುಗಿಲೆದ್ದಿದೆ. ಸಿಟ್ಟು ಜ್ವಾಲೆಯಾಗಿ ಸ್ಫೋಟಗೊಂಡಿದೆ. ಕತ್ತಲಲ್ಲೂ ಕಡುಕೋಪ ತಾರಕಕ್ಕೇರಿದೆ. ಹೋರಾಟದ ಕಿಚ್ಚು ಸುನಾಮಿಯಂತೆ ಪುಟಿದೇಳ್ತಿದೆ. ರಾತ್ರಿಯಾದ್ರೂ ಹೋರಾಟ ಬಿಡದ ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ರು. ಮುಸುಕುಧರಿಸಿದ ಗೂಂಡಾಗಳು ಕಾಲೇಜ್ ಕ್ಯಾಂಪಸ್​ಗೇ […]

JNUನಲ್ಲಿ 2 ಗುಂಪುಗಳ ಮಾರಾಮಾರಿ, ಪ್ರತಿಭಟನಾನಿರತರ ಮೇಲೆ ಮುಸುಕುಧಾರಿಗಳ ಅಟ್ಯಾಕ್
Follow us on

ದೆಹಲಿ: ನಿನ್ನೆ ರಾತ್ರಿ ಜೆಎನ್​ಯು ಆವರಣ ರಣರಂಗವಾಗಿದೆ. ಮುಸುಕುಧಾರಿಗಳು ವಿಧ್ಯಾರ್ಥಿನಿಯ ಹಾಸ್ಟೆಲ್​ಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ದೇಶಾಧ್ಯಂತ ಖಂಡನೆ ವ್ಯಕ್ತವಾಗ್ತಿದೆ. ವಿವಿ ಪೋಲೀಸ್ ಕಂಟ್ರೋಲ್ ನಲ್ಲಿದ್ದು ರಾತ್ರಿ ಜೆಎನ್​ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ತಾಳ್ಮೆಯ ಕಟ್ಟೆ ಒಡೆದಿದೆ. ಆಕ್ರೋಶ ಭುಗಿಲೆದ್ದಿದೆ. ಸಿಟ್ಟು ಜ್ವಾಲೆಯಾಗಿ ಸ್ಫೋಟಗೊಂಡಿದೆ. ಕತ್ತಲಲ್ಲೂ ಕಡುಕೋಪ ತಾರಕಕ್ಕೇರಿದೆ. ಹೋರಾಟದ ಕಿಚ್ಚು ಸುನಾಮಿಯಂತೆ ಪುಟಿದೇಳ್ತಿದೆ. ರಾತ್ರಿಯಾದ್ರೂ ಹೋರಾಟ ಬಿಡದ ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ರು.

ಮುಸುಕುಧರಿಸಿದ ಗೂಂಡಾಗಳು ಕಾಲೇಜ್ ಕ್ಯಾಂಪಸ್​ಗೇ ನುಗ್ಗಿದ್ದಾರೆ. ಕೈಯಲ್ಲಿ ಬಡಿಗೆ, ದೊಣ್ಣೆಗಳನ್ನು ಹಿಡಿದು ಡೆಡ್ಲಿ ಅಟ್ಯಾಕ್ ಮಾಡ್ತಿದ್ದಾರೆ. ಎದುರಿಗೆ ಸಿಕ್ಕವರ ಮೇಲೆ ಮಾರಣಾಂತಿಕ ಹಲ್ಲೆ ಮಾಡ್ತಿದ್ದಾರೆ. ಕಿಟಕಿ, ಗಾಜು, ಟೇಬಲ್ಲು, ಕುರ್ಚಿಗಳೆಲ್ಲಾ ಪೀಸ್ ಪೀಸ್ ಮಾಡ್ತಿದ್ದಾರೆ. ಕರುಣೆಯೇ ಇಲ್ಲ ಕಟುಕರಂತೆ ವರ್ತಿಸ್ತಿದ್ದಾರೆ.

ಅಕ್ಷರಶಃ ರಣಾಂಗಣವಾಯ್ತು ಜೆಎನ್​ಯು ಕ್ಯಾಂಪಸ್!
ದೆಹಲಿಯ ಜೆಎನ್​ಯು ಕ್ಯಾಂಪಸ್ ಅಕ್ಷರಶಃ ರಣರಂಗವಾಗಿದೆ. ನಿನ್ನೆ ಜೆಎನ್​ಯು ಸ್ಟೂಡೆಂಟ್ಸ್ ಫೀಸ್ ಹೈಕ್ ವಿರುದ್ಧ ದಂಗೆದ್ದಿದ್ರು. ಬಹಳಷ್ಟು ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗಿದ್ರು. ಆದ್ರೆ, ಅದೇನಾಯ್ತೋ ಏನೋ..? ನಿನ್ನೆ ಸಂಜೆ 6.30ರ ಸುಮಾರಿಗೆ 50ಕ್ಕೂ ಹೆಚ್ಚು ಮುಸುಕುಧಾರಿಗಳು ಕ್ಯಾಂಪಸ್​ಗೇ ನುಗ್ಗಿ ಬಿಟ್ಟಿದ್ರು. ಕೈಯಲ್ಲಿ ಬಡಿಗೆ, ದೊಣ್ಣೆ, ಹಾಕಿ ಸ್ಟಿಕ್, ಬ್ಯಾಟ್ ಹಿಡಿದು ಎಂಟ್ರಿ ಕೊಟ್ಟಿದ್ರು. ಕಣ್ಣಿಗೆ ಕಂಡಿದ್ದನ್ನೆಲ್ಲಾ ಒಡೆದು ಹಾಕೋಕೆ ಶುರು ಮಾಡಿದ್ರು. ಕಿಟಕಿ, ಗಾಜು, ಟೇಬಲ್​ ಎಲ್ಲವನ್ನೂ ಧ್ವಂಸ ಮಾಡಿದ್ರು. ಇದೇ ವೇಳೆ ಸಿಕ್ಕ ವಿವಿಯ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷೆ ಐಶೆ ಘೋಷ್ ಹಾಗೂ ಅವರ ಜತೆಗಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮನಬಂದಂತೆ ದಾಳಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸ್ವರಾಜ್ ಪಾರ್ಟಿ ನಾಯಕನ ಮೇಲೂ ದಾಳಿ!
ಜೆಎನ್​ಯು ಕ್ಯಾಂಪಸ್​ನಲ್ಲಿ ಗಲಾಟೆ ಆಗುತ್ತಿದ್ದಂತೆ ಸ್ಥಳಕ್ಕೆ ಸ್ವರಾಜ್ ಪಾರ್ಟಿ ನಾಯಕರ ಯೋಗೇಂದ್ರ ಯಾದವ್ ಭೇಟಿ ನೀಡಿದ್ರು. ಈ ವೇಳೆ, ಯೋಗೇಂದ್ರ ಯಾದವ್​ರನ್ನು ನೂಕಾಡಿ ತಳ್ಳಾಡಿ ಹಲ್ಲೆ ಮಾಡ್ಲಾಗಿದೆ. ಕೂಡ್ಲೇ ಘಟನಾ ಸ್ಥಳಕ್ಕೆ ಪೊಲೀಸರು ಎಂಟ್ರಿ ಕೊಟ್ರು. ಕ್ಯಾಂಪಸ್ ಸುತ್ತಲೂ ಭದ್ರತೆ ಒದಗಿಸಿದ್ರು.

ಎಬಿವಿಪಿ ಕಾರ್ಯಕರ್ತರ ವಿರುದ್ಧ ಹಲ್ಲೆ ಆರೋಪ:
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಗೂಂಡಾಗಳು ಮಾಡಿದ ದಾಳಿಯಲ್ಲಿ 18 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಏಮ್ಸ್ ಹಾಗೂ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ಹೋಗಿ ಹಲ್ಲೆಗೊಳಗಾದ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ್ದಾರೆ. ಮತ್ತೊಂದೆಡೆ, ವಿವಿಯ ಎಬಿವಿಪಿ ವಿದ್ಯಾರ್ಥಿಗಳೇ ಪೊಲೀಸ್ ಸಹಾಯದಿಂದಲೇ ಮುಸುಕುಧಾರಿಗಳಾಗಿ ಬಂದು ಎಡಪಕ್ಷಗಳ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಅಂತಾ ಆರೋಪಿಸಲಾಗಿದೆ. ಆದ್ರೆ, ಈ ಆರೋಪವನ್ನು ಎಬಿವಿಪಿ ತಿರಸ್ಕರಿಸಿದೆ.

ಹಲ್ಲೆ ಖಂಡಿಸಿ ವಿದ್ಯಾರ್ಥಿಗಳಿಂದ ಅಹೋರಾತ್ರಿ ಪ್ರತಿಭಟನೆ:
ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮುಂಬೈ, ಪುಣೆ, ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ಸ್ಟೂಡೆಂಟ್ಸ್ ಅಹೋರಾತ್ರಿ ಧರಣಿ ನಡೆಸಿದ್ರು. ಮುಂಬೈನಲ್ಲಿ ಕ್ಯಾಂಡಲ್ ಮಾರ್ಚ್ ಮಾಡಿ ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿ ಅಂತಾ ಆಗ್ರಹಿಸಿದ್ರು.

ನಾಲ್ವರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು:
ವಿವಿಯಲ್ಲಾದ ಭೀಕರ ಹಲ್ಲೆಯನ್ನ ರಾಜಕೀಯ ನಾಯಕರು ಖಂಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ‌್ ಕೇಜ್ರೀವಾಲ್, ಸೀತಾರಾಂ ಯಚೂರಿ ಖಂಡಿಸಿದ್ದಾರೆ. ಸ್ಟೂಡೆಂಟ್ಸ್ ರಾತ್ರಿ ನಡೆಸಿದ ಪ್ರತಿಭಟನೆಯಲ್ಲಿ ಜೆಎನ್​ಯು ಪ್ರೋಫೆಸರ್ಸ್ ಕೂಡ ಭಾಗಿಯಾಗಿದ್ರು. ಘಟನೆ ಬಳಿಕ ವಿವಿ ಆವರಣಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದ್ರು. ಘಟನೆ ಬಗ್ಗೆ ತನಿಖೆಗೂ ಆದೇಶಿಸಿದ್ದಾರೆ. ಈಗಾಗ್ಲೇ ಹಲ್ಲೆಯಲ್ಲಿ ಭಾಗಿಯಾದ ಆರೋಪದಡಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ ಅಮಿತ್ ಶಾ:
ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ರಾತ್ರಿಯೇ ಮಾತುಕತೆ ನಡೆಸಿದ್ದಾರೆ. ಸೂಕ್ತ ತನಿಖೆಗೂ ಆದೇಶಿಸಿದ್ದಾರೆ. ಮತ್ತೊಂದ್ಕಡೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಹಲ್ಲೆಯನ್ನ ಖಂಡಿಸಿದ್ದಾರೆ. ಒಟ್ನಲ್ಲಿ, ದೆಹಲಿಯ ಜೆಎನ್​ಯು ಯುನಿವರ್ಸಿಟಿ ನಿನ್ನೆ ರಣಾಂಗಣವಾಗಿತ್ತು. ಮುಸುಕುಧರಿಸಿದ್ದ ಗೂಂಡಾಗಳು ಕ್ಯಾಂಪಸ್​ಗೆ ನುಗ್ಗಿ ಕಂಡ ಕಂಡವರ ಮೇಲೆ ಹಲ್ಲೆ ಮಾಡಿದ್ದು ನಿಜಕ್ಕೂ ಘೋರ.

Published On - 8:30 am, Mon, 6 January 20