Andhra Pradesh: ಆಂಧ್ರಪ್ರದೇಶದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ

|

Updated on: Jun 16, 2023 | 6:07 PM

ಆಂಧ್ರಪ್ರದೇಶದ ಗುಂಟೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಲಾಗಿದೆ.

Andhra Pradesh: ಆಂಧ್ರಪ್ರದೇಶದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ
Crime Scene
Follow us on

ಅಮರಾವತಿ: ಆಂಧ್ರಪ್ರದೇಶ(Andhra Pradesh) ಗುಂಟೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಲಾಗಿದೆ. ಬಾಪಟ್ಲಾ ಜಿಲ್ಲೆಯಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ, ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 15 ವರ್ಷದ ಯುವಕನ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಲಾಗಿದೆ ಎಂದು ಹೇಳಲಾಗಿದೆ.

ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ವೆಂಕಿ ಎಂದು ಹೆಸರು ಹೇಳುತ್ತಿದ್ದ. ಸಾವನ್ನಪ್ಪಿರುವ ಬಾಲಕನನ್ನು ಅಮರನಾಥ್ ಎಂದು ಗುರುತಿಸಲಾಗಿದೆ. ವೆಂಕಟೇಶ್ವರ್ ಜತೆಗೆ ಇತರ ಮೂವರ ಹೆಸರನ್ನು ಹೇಳುತ್ತಿದ್ದ ಎಂದು ಹೇಳಲಾಗಿದೆ. ಚೆರುಕುಪಲ್ಲಿ ಮಂಡಲದ ರಾಜವೋಲು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅಮರನಾಥ್ ಸೈಕಲ್​​ನಲ್ಲಿ ಟ್ಯೂಷನ್​​ಗೆ ಹೋಗುತ್ತಿದ್ದಾಗ ರೆಡ್ಲಪಾಲೆಂ ಬಳಿ ಯುವಕರು ತಡೆದಿದ್ದಾರೆ.

ಇದನ್ನೂ ಓದಿ: Andhra Pradesh Accident: ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ 7 ಮಂದಿ ದುರ್ಮರಣ

21 ವರ್ಷದ ವೆಂಕಟೇಶ್ವರ್ ಎಂಬಾತ ತನ್ನ ತಂಗಿಗೆ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿದ್ದು, ಅಮರನಾಥ್​​ನ ತಂಗಿ ಓದುತ್ತಿದ್ದ ಶಾಲೆಯಲ್ಲಿ ವೆಂಕಟೇಶ್ವರ್‌  ತಿರುಗಾಡುತ್ತಿದ್ದ ಈ ಕಾರಣಕ್ಕೆ ಅಮರನಾಥ್​​ ವೆಂಕಟೇಶ್ವರ್​​ನ್ನು   ಪ್ರಶ್ನಿಸಿದ್ದ, ಈ ಕೋಪಕ್ಕೆ ಈ ರೀತಿ ಮಾಡಿದ್ದಾನೆ ಎಂದು ಹೇಳಿದ್ದಾರೆ. ಮರನಾಥ್ ಸೈಕಲ್ ನಲ್ಲಿ ಟ್ಯೂಷನ್ ಗೆ ಹೋಗುತ್ತಿದ್ದಾಗ ಇಬ್ಬರು ಮುಖಾಮುಖಿಯಾಗಿದ್ದಾರೆ,  ಈ ಸಮಯದಲ್ಲಿ ವೆಂಕಟೇಶ್ವರ್  ಅಮರನಾಥ್​​ನ ಮೇಲೆ ದಾಳಿ ಮಾಡಿದ್ದಾನೆ, ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಬೆಂಕಿ ನಂದಿಸಿ ಗುಂಟೂರಿನ ಜಿಜಿಎಚ್‌ಗೆ ರವಾನಿಸಿದ್ದಾರೆ. ಇದೀಗ ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

Published On - 5:37 pm, Fri, 16 June 23