ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಮನೆ ಕುಸಿತ, ಅವಶೇಷಗಳಡಿ ಐವರು ಸಿಲುಕಿರುವ ಶಂಕೆ

|

Updated on: Aug 10, 2023 | 12:21 PM

ಹಿಮಾಚಲ ಪ್ರದೇಶ(Himachal Pradesh)ದ ಸಿರ್ಮೌರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇಘಸ್ಫೋಟ ಸಂಭವಿಸಿದ್ದು, ನೀರು ನುಗ್ಗಿದ ಪರಿಣಾಮ ಪರಿಣಾಮ ಮನೆ ಕುಸಿದು ಬಿದ್ದಿದೆ, ಅವಶೇಷಗಳಡಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಮನೆ ಕುಸಿತ, ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ಮೇಘಸ್ಫೋಟ
Image Credit source: Outlook
Follow us on

ಹಿಮಾಚಲ ಪ್ರದೇಶ(Himachal Pradesh)ದ ಸಿರ್ಮೌರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇಘಸ್ಫೋಟ ಸಂಭವಿಸಿದ್ದು, ನೀರು ನುಗ್ಗಿದ ಪರಿಣಾಮ ಪರಿಣಾಮ ಮನೆ ಕುಸಿದು ಬಿದ್ದಿದೆ, ಅವಶೇಷಗಳಡಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಪೋಂಟಾ ಸಾಹಿಬ್ ಪ್ರದೇಶದಲ್ಲಿ ಬುಧವಾರ ರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ಮಾಳಗಿ ದಡಿಯಾತ್ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿದೆ ಎಂದು ಅವರು ಹೇಳಿದರು.

ಈ ಪೈಕಿ ಒಂದು ಮನೆ ಕುಸಿದಿದೆ. ಒಂದೇ ಕುಟುಂಬದ ಐವರು ಅದರ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಳಗಿ ದಡಿಯಾತ್‌ನಲ್ಲಿ ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕುಲದೀಪ್ ಸಿಂಗ್ ಅವರ ಮನೆ ಕುಸಿದಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಮತ್ತಷ್ಟು ಓದಿ: Karnataka Weather: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಆಗಸ್ಟ್ 16ರವರೆಗೆ ಮಳೆ

ಅವಶೇಷಗಳಡಿ ಸಿಲುಕಿದವರು ಸಿಂಗ್, ಅವರ ಪತ್ನಿ ಜೀತೋ ದೇವಿ, ರಜನಿ ದೇವಿ, ನಿತೇಶ್ ಮತ್ತು ದೀಪಿಕಾ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್‌ಬಾನ್ ಮತ್ತು ಸತೌನ್ ನಡುವಿನ ರಸ್ತೆಯ ಭಾಗವನ್ನು ನಿರ್ಬಂಧಿಸಲಾಗಿದೆ ಮತ್ತು ಮೇಘಸ್ಫೋಟದಿಂದಾಗಿ ಗಿರಿ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಆರಂಭದಿಂದ ಇಲ್ಲಿಯವರೆಗೆ, ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 231 ಜನರು ಸಾವನ್ನಪ್ಪಿದ್ದಾರೆ. ತುರ್ತು ಕೇಂದ್ರದ ಪ್ರಕಾರ ಹಿಮಾಚಲ ಪ್ರದೇಶ 6,731 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ರಾಜ್ಯದಲ್ಲಿ ಇನ್ನೂ ಸುಮಾರು 190 ರಸ್ತೆಗಳನ್ನು ಮುಚ್ಚಲಾಗಿದೆ.

ಗುರುವಾರದಿಂದ ಭಾನುವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಕಚೇರಿ ಅಲರ್ಟ್​ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ