ರಾಜಸ್ಥಾನ: ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಕ್ಕೆ ಕೋಪಗೊಂಡು ಮಸೀದಿ ಧ್ವಂಸ ಮಾಡಿದ ಜನ

|

Updated on: Sep 14, 2023 | 11:47 AM

ರಾಜಸ್ಥಾನದ ಡುಂಗರ್‌ಪುರದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಅನ್ಯ ಕೋಮಿನ ಯುವಕರು ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದರು ಎನ್ನುವ ಕೋಪಕ್ಕೆ ಜನರು ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನದ ಡುಂಗರ್​ಪುರದಲ್ಲಿ ನಡೆದಿದೆ. ಜನರು ಆಕ್ರೋಶಗೊಂಡು ಮೂರ್ನಾಲ್ಕು ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ ಜತೆಗೆ ಮಸೀದಿಯನ್ನು ಕೂಡ ಧ್ವಂಸಗೊಳಿಸಿದ್ದಾರೆ.

ರಾಜಸ್ಥಾನ: ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಕ್ಕೆ ಕೋಪಗೊಂಡು ಮಸೀದಿ ಧ್ವಂಸ ಮಾಡಿದ ಜನ
Image Credit source: News 18
Follow us on

ರಾಜಸ್ಥಾನದ ಡುಂಗರ್‌ಪುರದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಅನ್ಯ ಕೋಮಿನ ಯುವಕರು ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದರು ಎನ್ನುವ ಕೋಪಕ್ಕೆ ಜನರು ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನದ ಡುಂಗರ್​ಪುರದಲ್ಲಿ ನಡೆದಿದೆ. ಜನರು ಆಕ್ರೋಶಗೊಂಡು ಮೂರ್ನಾಲ್ಕು ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ ಜತೆಗೆ ಮಸೀದಿಯನ್ನು ಕೂಡ ಧ್ವಂಸಗೊಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರಾದರೂ ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣವಿದೆ. ಡುಂಗರ್‌ಪುರದ ದೋವ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ ಬಂಕೋಡ ಗ್ರಾಮದಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಮನೆಗೆ ಮರಳುತ್ತಿದ್ದಳು. ದಾರಿ ಮಧ್ಯೆ ಅನ್ಯಕೋಮಿನ ಯುವಕರು ವಿದ್ಯಾರ್ಥಿನಿಯನ್ನು ತಡೆದು ಕಿರುಕುಳ ನೀಡಿದ್ದಾರೆ.

ಆರೋಪಿಗಳ ಕಪಿಮುಷ್ಠಿಯಿಂದ ಮುಕ್ತರಾದ ಬಳಿಕ ವಿದ್ಯಾರ್ಥಿನಿ ಮನೆಗೆ ತಲುಪಿ ಮನೆಯವರಿಗೆ ವಿಷಯ ತಿಳಿಸಿದ್ದು, ಇದನ್ನು ಕೇಳಿದ ವಿದ್ಯಾರ್ಥಿನಿಯ ಮನೆಯವರು ಸಿಟ್ಟಿಗೆದ್ದು ಊರಿನ ಇತರರೊಂದಿಗೆ ಆರೋಪಿಯ ಮನೆಗೆ ತಲುಪಿದ್ದಾರೆ.

ಮತ್ತಷ್ಟು ಓದಿ: ಗೆಳತಿಯಿಂದ ಅತ್ಯಾಚಾರ ಆರೋಪ, ಮನನೊಂದು ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಆದರೆ, ಆ ವೇಳೆಗಾಗಲೇ ಆರೋಪಿ ಯುವಕ ಅಲ್ಲಿಂದ ಪರಾರಿಯಾಗಿದ್ದ. ಇದಾದ ಬಳಿಕ ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಯ ಸಂಬಂಧಿಕರೊಬ್ಬರನ್ನು ಆತನ ಮನೆಯಿಂದ ಎತ್ತಿಕೊಂಡು ಹೋಗಿ ತೀವ್ರವಾಗಿ ಥಳಿಸಿದ್ದಾರೆ. ಆರೋಪಿಗಳ ಮನೆಯ ಹೊರಗೆ ನಿಲ್ಲಿಸಿದ್ದ ಎರಡ್ಮೂರು ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದೆ.

ಅಷ್ಟೇ ಅಲ್ಲ, ಕೋಪಗೊಂಡ ಜನರು ಸಮೀಪದ ಮಸೀದಿಯನ್ನು ಧ್ವಂಸಗೊಳಿಸಿದರು ಮತ್ತು ಆರೋಪಿಯ ತಂದೆಯ ಅಂಗಡಿಗೆ ಬೆಂಕಿ ಹಚ್ಚಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆಕ್ರೋಶಗೊಂಡ ಜನರನ್ನು ಸಮಾಧಾನಪಡಿಸಿದರು.

ಈ ಸಂಬಂಧ ವಿದ್ಯಾರ್ಥಿನಿಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ, ಎಫ್‌ಐಆರ್ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಸದ್ಯ ಸ್ಥಳದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರ ಪ್ರಕಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ