Narendra Modi: ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ; ಪ್ರಧಾನಿ ಮೋದಿ

|

Updated on: Feb 11, 2023 | 4:10 PM

ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ. ಟರ್ಕಿ ಭೂಕಂಪದಂಥ ಪರಿಸ್ಥಿತಿ ಎದುರಾದಾಗ ಫಿಸಿಯೋಥೆರಪಿಸ್ಟ್​​ಗಳ ವಿಡಿಯೋ ಕನ್ಸಲ್ಟಿಂಗ್​ನಿಂದ ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Narendra Modi: ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ; ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ನವದೆಹಲಿ: ಯೋಗದೊಂದಿಗೆ (Yoga) ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ. ಟರ್ಕಿ ಭೂಕಂಪದಂಥ ಪರಿಸ್ಥಿತಿ ಎದುರಾದಾಗ ಫಿಸಿಯೋಥೆರಪಿಸ್ಟ್​​ಗಳ (physiotherapists) ವಿಡಿಯೋ ಕನ್ಸಲ್ಟಿಂಗ್​ನಿಂದ ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಭಾರತೀಯ ಫಿಸಿಯೋಥೆರಪಿಸ್ಟ್​​ಗಳ ಸಂಘದ (IAP) 60ನೇ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ವೃತ್ತಿಪರರು ವಿಡಿಯೋ ಕನ್ಸಲ್ಟಿಂಗ್ ಮತ್ತು ಟೆಲಿ-ಮೆಡಿಸಿನ್ (ದೂರವಾಣಿ ಮೂಲಕ ವೈದ್ಯಕೀಯ ಸಲಹೆ ನೀಡುವ ಪ್ರಕ್ರಿಯೆ) ಮಾರ್ಗಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಟರ್ಕಿ ಭೂಕಂಪದಂಥ ಸಂದರ್ಭಗಳಲ್ಲಿ ಇದರಿಂದ ಪ್ರಯೋಜನವಾಗಲಿದೆ. ಭಾರತದ ಫಿಸಿಯೋಥೆರಪಿಸ್ಟ್​​ಗಳು ದೂರವಾಣಿಗಳ ಸಹಾಯದಿಂದ ಅವರಿಗೆ ನೆರವಾಗಬಹುದು. ನಿಮ್ಮಂಥವರ ನೇತೃತ್ವದಲ್ಲಿ ಭಾರತವು ಫೀಟ್ ಮತ್ತು ಸೂಪರ್ ಹಿಟ್ ಆಗಿರಲಿದೆ ಎಂಬ ಬಗ್ಗೆ ನನಗೆ ನಂಬಿಕೆ ಇದೆ ಎಂದು ಮೋದಿ ಹೇಳಿದರು.

ಸಾಂತ್ವನ, ಭರವಸೆ, ಚೇತರಿಕೆಯಲ್ಲಿ ಫಿಸಿಯೋಥೆರಪಿಸ್ಟ್ ಪಾತ್ರ ಬಹು ಮುಖ್ಯವಾದದ್ದು. ಫಿಸಿಯೋಥೆರಪಿಸ್ಟ್​​ಗಳು ಕೇವಲ ಭೌತಿಕ ಗಾಯಕ್ಕಷ್ಟೇ ಚಿಕಿತ್ಸೆ ನೀಡುವುದಿಲ್ಲ. ಚಿಕಿತ್ಸೆಯ ಜತೆಗೆ ರೋಗಿಗಳಲ್ಲಿ ಧೈರ್ಯವನ್ನೂ ತುಂಬುತ್ತಾರೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಫಿಸಿಯೋಥೆರಪಿಸ್ಟ್​​ಗಳಿಗೆ ಬಹು ನಿರೀಕ್ಷಿತ ಮನ್ನಣೆ ದೊರೆತಿದೆ. ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ ಮೂಲಕ ಫಿಸಿಯೋಥೆರಪಿಸ್ಟ್​​ಗಳಿಗೂ ಸರ್ಕಾರ ಮನ್ನಣೆ ನೀಡಿದೆ. ಕಾಯ್ದೆಯ ಪರಿಣಾಮ ಫಿಸಿಯೋಥೆರಪಿಸ್ಟ್​​ಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರೂ ಮತ್ತು ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ದಶಪಥ ಹೆದ್ದಾರಿ ಅದ್ಬುತ ದೃಶ್ಯ: ಸಿಎಂ ಬೊಮ್ಮಾಯಿ ಟ್ವೀಟ್​ಗೆ ಮೋದಿ ಪ್ರತಿಕ್ರಿಯೆ

ಸರ್ಕಾರವು ಫಿಸಿಯೋಥೆರಪಿಸ್ಟ್​​ಗಳನ್ನು ಆಹಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೆಟ್​​ವರ್ಕ್​​ಗೂ ಸೇರ್ಪಡೆ ಮಾಡಿದೆ. ಇದರಿಂದ ಫಿಸಿಯೋಥೆರಪಿಸ್ಟ್​​ಗಳಿಗೆ ರೋಗಿಗಳ ಜತೆ ಸಂಪರ್ಕ ಸಾಧಿಸುವುದು ಸುಲಭಸಾಧ್ಯವಾಗಿದೆ. ಫಿಟ್​​ ಇಂಡಿಯಾ ಚಳವಳಿ, ಖೇಲೋ ಇಂಡಿಯಾದಂಥ ಚಳವಳಿಗಳಿಂದ ಫಿಸಿಯೋಥೆರಪಿಸ್ಟ್​ಗಳ ವ್ಯಾಪ್ತಿ ವಿಸ್ತಾರಗೊಂಡಿದೆ ಎಂದು ಮೋದಿ ಹೇಳಿದರು.

ಸರಿಯಾದ ಭಂಗಿ, ಅಭ್ಯಾಸಗಳು ಮತ್ತು ವ್ಯಾಯಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡಬೇಕು ಎಂದು ಫಿಸಿಯೋಥೆರಪಿಸ್ಟ್​ಗಳ ಬಳಿ ಮೋದಿ ವಿನಂತಿ ಮಾಡಿದರು. ಲೇಖನಗಳು, ಉಪನ್ಯಾಸಗಳು ಮತ್ತು ವಿಡಿಯೋಗಳ ಮೂಲಕ ಜನರಲ್ಲಿ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ