AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ದಶಪಥ ಹೆದ್ದಾರಿ ಅದ್ಬುತ ದೃಶ್ಯ: ಸಿಎಂ ಬೊಮ್ಮಾಯಿ ಟ್ವೀಟ್​ಗೆ ಮೋದಿ ಪ್ರತಿಕ್ರಿಯೆ

ಸೋಶಿಯಲ್ ಮೀಡಿಯಾದಲ್ಲಿ ಒಂದು ಅದ್ಭುತ ವಿಡಿಯೋ ವೈರಲ್ ಆಗಿದೆ, ಅದರಲ್ಲಿ ಒಂದೆಡೆ ದಶಪಥ ಹೆದ್ದಾರಿ ಬೃಹತ್ತಾಕಾರದಲ್ಲಿ ಸಾಗುತ್ತಿದ್ದರೆ ಹೆದ್ದಾರಿಯ ಕೆಳ ಭಾಗದಲ್ಲಿ ವಂದೇ ಮಾತರಂ ರೈಲು ಚಲಿಸುತ್ತಿದೆ. ಈ ಟ್ವೀಟ್ ಅನ್ನು ಮೋದಿ ರೀಟ್ವೀಟ್ ಮಾಡುವ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

PM Narendra Modi: ದಶಪಥ ಹೆದ್ದಾರಿ ಅದ್ಬುತ ದೃಶ್ಯ: ಸಿಎಂ ಬೊಮ್ಮಾಯಿ ಟ್ವೀಟ್​ಗೆ ಮೋದಿ ಪ್ರತಿಕ್ರಿಯೆ
ಪ್ರಧಾನಿ ಮೋದಿ ಟ್ವೀಟ್
TV9 Web
| Updated By: Digi Tech Desk|

Updated on:Feb 11, 2023 | 3:52 PM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಟ್ವಿಟರ್​ನಲ್ಲಿ (Tweet) ಹಂಚಿಕೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ಹಾಗೂ ಮೈಸೂರು-ಬೆಂಗಳೂರು ದಶಪಥ ರಸ್ತೆಯ ವಿಡಿಯೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯ ಹಾಗೂ ಬೆಳವಣಿಗೆಯ ಅದ್ಭತ ದೃಶ್ಯ. ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಚಮತ್ಕಾರ ಮಾಡಿದೆ ಎಂದು ಬೊಮ್ಮಾಯಿ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮೋದಿ ಸಹ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 500 ವಿಮಾನ ಖರೀದಿ ಒಪ್ಪಂದ ಅಂತಿಮಗೊಳಿಸಿದ ಏರ್‌ ಇಂಡಿಯಾ

ಸಿಎಂ ಅವರ ಈ ಟ್ವೀಟ್ ಅನ್ನು ಮೋದಿ ರೀಟ್ವೀಟ್ ಮಾಡಿದ್ದು, “ನಮ್ಮ ಜನರಿಗೆ ಉತ್ತಮ ಮೂಲಭೂತ ಸೌಕರ್ಯದ ಅವಶ್ಯಕತೆಯಿದೆ, ಅದನ್ನು ಒದಗಿಸಲು ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ. ನಮ್ಮ ಉತ್ತಮ ಮೂಲಭೂತ ಸೌಕರ್ಯದ ಯೋಜನೆಗಳು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ.” ಎಂದು ಪ್ರಶಂಸಿಸಿದ್ದಾರೆ.

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ (Bengaluru-Mysuru) 118 ಕಿಲೋಮೀಟರ್ ಇದೆ.‌ ಇದರಲ್ಲಿ 61.104 ಕಿಲೋಮೀಟರ್ ಮಂಡ್ಯ ಜಿಲ್ಲೆಯಲ್ಲೇ ಹಾದು ಹೋಗಲಿದೆ. ಈ ಯೋಜನೆಗಾಗಿ 11,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ವಾಹನಗಳು ಈ ರಸ್ತೆ ಮೇಲೆ ಸಂಚರಿಸುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಅದ್ಭುತ ವಿಡಿಯೋ ವೈರಲ್ ಆಗಿದೆ, ಅದರಲ್ಲಿ ಒಂದೆಡೆ ದಶಪಥ ಹೆದ್ದಾರಿ ಬೃಹತ್ತಾಕಾರದಲ್ಲಿ ಸಾಗುತ್ತಿದ್ದರೆ ಹೆದ್ದಾರಿಯ ಕೆಳ ಭಾಗದಲ್ಲಿ ವಂದೇ ಮಾತರಂ ರೈಲು ಚಲಿಸುತ್ತಿದೆ.

ಈ ಅತೀ ಸುಂದರವಾದ ವಿಡಿಯೋವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು (CM Basavaraj Bommai) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆ “ಅದ್ಭುತ ನೋಟ! ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕರ್ನಾಟಕದ ಅಭೂತಪೂರ್ವ ಬೆಳವಣಿಗೆಯನ್ನು ಬಿಂಬಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಜೊತೆಗೆ 10-ಲೇನ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ದೃಶ್ಯ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ, ನಮ್ಮ ಡಬಲ್ ಇಂಜಿನ್ ಸರ್ಕಾರವು ರಾಜ್ಯದಲ್ಲಿ ಅದ್ಭುತಗಳನ್ನು ಮಾಡುತ್ತಿದೆ.” ಎಂದು ಟ್ವೀಟ್ ಮಾಡಿದ್ದರು.

Published On - 3:50 pm, Sat, 11 February 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ