ಸುಡಾನ್​​ನಿಂದ ಭಾರತೀಯರ ಸ್ಥಳಾಂತರ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಆರೋಪಗಳಿಗೆ ಖಡಕ್ ಉತ್ತರ ನೀಡಿದ ಮೋದಿ

|

Updated on: May 10, 2023 | 6:56 PM

ಇಂದು, ರಾಜಸ್ಥಾನದ ಸಿರ್ಹೋಯ್ ಜಿಲ್ಲೆಯಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವು ಅಲ್ಲಿ ಸಿಲುಕಿದ್ದ ಜನರನ್ನು ಸುಡಾನ್‌ನಿಂದ ಹೊರ ತರಲು ಪ್ರಯತ್ನಿಸುತ್ತಿದ್ದರೆ ಇಲ್ಲಿ ಕಾಂಗ್ರೆಸ್ ಸದ್ದು ಮಾಡಲು ಶುರು ಮಾಡಿತ್ತು ಎಂದಿದ್ದಾರೆ.

ಸುಡಾನ್​​ನಿಂದ ಭಾರತೀಯರ ಸ್ಥಳಾಂತರ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಆರೋಪಗಳಿಗೆ ಖಡಕ್ ಉತ್ತರ ನೀಡಿದ ಮೋದಿ
ನರೇಂದ್ರ ಮೋದಿ
Follow us on

ಜೈಪುರ: ಕರ್ನಾಟಕದಲ್ಲಿ ಇಂದು ವಿಧಾನಸಭೆ ಚುನಾವಣೆಗೆ (Karnataka Assembly Polls) ಮತದಾನ ನಡೆದಿದೆ. ಇದೇ ಹೊತ್ತಲ್ಲಿ ರಾಜಸ್ಥಾನದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕರ್ನಾಟಕದ ಕಾಂಗ್ರೆಸ್  (Congress), ಸುಡಾನ್‌ನಲ್ಲಿರುವ ಕರ್ನಾಟಕದ ಆದಿವಾಸಿಗಳ ಗುಂಪಿನ ದುಸ್ಥಿತಿಯನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಹಕ್ಕಿಪಿಕ್ಕಿ ಆದಿವಾಸಿಗಳ ಜೀವವನ್ನು ಕಾಂಗ್ರೆಸ್ ಅಪಾಯಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ್ದಾರೆ. ಕಳೆದ ತಿಂಗಳು ಯುದ್ಧ ಪೀಡಿತ ಸುಡಾನ್​​ನಲ್ಲಿ ಸಿಲುಕಿರುವ ಬುಡಕಟ್ಟು ಜನಾಂಗದವರ ಪರಿಸ್ಥಿತಿ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿದ್ದರು. ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಬುಡಕಟ್ಟು ಜನರ ಪರಿಸ್ಥಿತಿಯನ್ನ ರಾಜಕೀಯಗೊಳಿಸುವುದು ತೀರಾ ಬೇಜವಾಬ್ದಾರಿ ಸಂಗತಿ. ಯಾವುದೇ ಚುನಾವಣಾ ಗುರಿಯು ವಿದೇಶದಲ್ಲಿರುವ ಭಾರತೀಯರಿಗೆ ಅಪಾಯವನ್ನುಂಟುಮಾಡುವುದನ್ನು ಸಮರ್ಥಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.

ಇಂದು, ರಾಜಸ್ಥಾನದ ಸಿರ್ಹೋಯ್ ಜಿಲ್ಲೆಯಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವು ಅಲ್ಲಿ ಸಿಲುಕಿದ್ದ ಜನರನ್ನು ಸುಡಾನ್‌ನಿಂದ ಹೊರ ತರಲು ಪ್ರಯತ್ನಿಸುತ್ತಿದ್ದರೆ ಇಲ್ಲಿ ಕಾಂಗ್ರೆಸ್ ಸದ್ದು ಮಾಡಲು ಶುರು ಮಾಡಿತ್ತು ಎಂದಿದ್ದಾರೆ.

ನಾವು ಅವರನ್ನು ಸದ್ದಿಲ್ಲದೆ ಹೊರಗೆ ತರಬೇಕಾಗಿತ್ತು. ಆದರೆ ಕಾಂಗ್ರೆಸ್ಸಿಗರು ತಮ್ಮ ಮುಖವನ್ನು ಬಹಿರಂಗಗೊಳಿಸಿದರು. ಅಂತಹ ತಪ್ಪುಗಳನ್ನು ಮಾಡುವ ಮೂಲಕ ಅವರು ಈ ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದಿದ್ದಾರೆ ಮೋದಿ.


ಕಾಂಗ್ರೆಸ್  ಏನಾದರೂ ಅಹಿತಕರ ಘಟನೆಗಾಗಿ ಕಾಯುತ್ತಿದೆ. ಹಾಗಾದರೆ ಅವರು  ಮೋದಿಯ ಕಾಲರ್ ಹಿಡಿದು ಕರ್ನಾಟಕದಲ್ಲಿ ರಾಜಕೀಯ ಮಾಡಬಹುದು ಎಂದು ಅವರು ಹೇಳಿದರು. ಆದರೆ ಪಕ್ಷವು ಒಂದು ವಿಷಯವನ್ನು ಮರೆತಿದೆ. ಕಾಂಗ್ರೆಸ್ ಇನ್ನೂ ಮೋದಿಯನ್ನು ಅರ್ಥಮಾಡಿಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಮೋದಿಎಂದು ಕಾಂಗ್ರೆಸ್ ಜನರು ತಿಳಿದಿರಬೇಕು. ಅವರು ಕಷ್ಟದಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನು ರಕ್ಷಿಸಲು ಯಾವುದೇ ಹಂತವನ್ನು ದಾಟಬಲ್ಲರು ಎಂದು ಅವರು ಹೇಳಿದ್ದಾರೆ.

ನೈಸರ್ಗಿಕ ಸಸ್ಯ-ಆಧಾರಿತ ಔಷಧದಿಂದ ಬದುಕುತ್ತಿರುವ ಬುಡಕಟ್ಟು ಜನಾಂಗದ ಹಕ್ಕಿ ಪಿಕ್ಕಿ, ಸುಡಾನ್‌ನಲ್ಲಿದೆ. ಅಲ್ಲಿ ಅನೇಕರು ಸಾಂಪ್ರದಾಯಿಕ ಔಷಧವನ್ನು ಅವಲಂಬಿಸಿದ್ದಾರೆ. ಯುದ್ಧ ಪ್ರಾರಂಭವಾದಾಗ, ಅವರಲ್ಲಿ 31 ಮಂದಿ ಸಿಲುಕಿಕೊಂಡಿದ್ದರು.ಮೂಲತಃ ರಾಜಸ್ಥಾನದವರಾದ ಇವರು ನೂರಾರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: PM Narendra Modi: ₹5,500 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ, ಸಿದ್ದರಾಮಯ್ಯ ಅವರು, “ಅಂತರ್ಯುದ್ಧದಿಂದ ತೊಂದರೆಗೊಳಗಾಗಿರುವ ಸುಡಾನ್‌ನಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಇಎಎಂ ಜೈಶಂಕರ್, ಮತ್ತು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಬೊಮ್ಮಾಯಿಅವರಲ್ಲಿ ತಕ್ಷಣವೇ ಮಧ್ಯಪ್ರವೇಶಿಸಲು ಮತ್ತು ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.

ಅವರ ಇನ್ನೊಂದು ಟ್ವೀಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುಡಾನ್‌ನಲ್ಲಿ ಹಕ್ಕಿ ಪಿಕ್ಕಿಗಳು ಆಹಾರವಿಲ್ಲದೆ ಸಿಲುಕಿದ್ದಾರೆ ಮತ್ತು ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಹಕ್ಕಿ ಪಿಕ್ಕಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಮಾಡಿ ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ತಲುಪಬೇಕು ಎಂದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Wed, 10 May 23