ಕಂಗನಾ ತಮಿಳುನಾಡಿಗೇನಾದ್ರೂ ಬಂದ್ರೆ ಕಪಾಳಕ್ಕೆ ಬಾರಿಸಿ, ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ

ಬಾಲಿವುಡ್ ನಟಿ ಮತ್ತು ಮಂಡಿ ಸಂಸದೆ ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಮಿಳುನಾಡು ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಸ್. ಅಳಗಿರಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಂಗನಾ ತಮಿಳುನಾಡಿನಲ್ಲಿ ಕಾಣಿಸಿಕೊಂಡರೆ ತಕ್ಷಣ ಕಪಾಳಮೋಕ್ಷ ಮಾಡಿ ಎಂದು ಹಿರಿಯ ನಾಯಕ ರೈತರಿಗೆ ಸಲಹೆ ನೀಡಿದ್ದಾರೆ. ಇದು ಕೋಲಾಹಲಕ್ಕೆ ಕಾರಣವಾಗಿದ್ದು, ಜನರು ಕಾಂಗ್ರೆಸ್ ಮತ್ತು ಅಳಗಿರಿಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಕಂಗನಾ ತಮಿಳುನಾಡಿಗೇನಾದ್ರೂ ಬಂದ್ರೆ ಕಪಾಳಕ್ಕೆ ಬಾರಿಸಿ, ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಅಳಗಿರಿ

Updated on: Sep 19, 2025 | 10:25 AM

ಚೆನ್ನೈ, ಸೆಪ್ಟೆಂಬರ್ 19: ಮಂಡಿ ಸಂಸದೆ ‘‘ಕಂಗನಾ ರಣಾವತ್(Kangana Ranaut) ಏನಾದ್ರೂ ತಮಿಳುನಾಡಿಗೆ ಬಂದ್ರೆ ಆಕೆಯ ಕಪಾಳಕ್ಕೆ ಬಾರಿಸಬೇಕು’’ ಎಂದು ಕಾಂಗ್ರೆಸ್ ನಾಯಕ ಕೆಎಸ್ ಅಳಗಿರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದರು. ಅವರು ಎಲ್ಲಿ ಹೋದರೂ ಎಲ್ಲರನ್ನೂ ನಿಂದಿಸುತ್ತಿರುತ್ತಾರೆ ಎಂದು ಪೊಲೀಸ್ ಅಧಿಕಾರಿ ಕಾರಣ ನೀಡಿದ್ದರು.

ಹಾಗಾಗಿ ನಾನು ಕೃಷಿ ಕಾರ್ಮಿಕರಿಗೆ ಹೇಳಿದ್ದೆ ಒಂದೊಮ್ಮೆ ಕಂಗನಾ ತಮಿಳುನಾಡಿಗೆ ಬಂದರೆ ಆ ಪೊಲೀಸ್ ಅಧಿಕಾರಿ ಮಾಡಿದ್ದನ್ನೇ ಮಾಡಿ ಎಂದು, ಆಗ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ ಎಂದರು.
ತಮಿಳುನಾಡು ಕಾಂಗ್ರೆಸ್​ನ ಮಾಜಿ ಅಧ್ಯಕ್ಷರೂ ಆಗಿರುವ ಅಳಗಿರಿ ರಣಾವತ್ ಅವರ ಹಿಂದಿನ ಹೇಳಿಕೆಗಳಿಂದ ಅಸಮಾಧಾನಗೊಂಡ ರೈತರ ದೂರುಗಳಿಗೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿದರು.

ಕಾಂಗ್ರೆಸ್ ನಾಯಕ ಅಳಗಿರಿ ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ
ನಾವು ಎಲ್ಲಿ ಬೇಕಾದರೂ ಹೋಗಬಹುದು. ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೆಲವರು ನನ್ನನ್ನು ದ್ವೇಷಿಸಿದರೆ, ನನ್ನನ್ನು ಪ್ರೀತಿಸುವವರು ಹಲವರಿದ್ದಾರೆ. ತಮಿಳುನಾಡಿನ ಜನರು ಯಾವಾಗಲೂ ನನಗೆ ಪ್ರೀತಿಯನ್ನು ನೀಡಿದ್ದಾರೆ.ಒಬ್ಬ ವ್ಯಕ್ತಿಯ ಮಾತುಗಳು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.

ಮತ್ತಷ್ಟು ಓದಿ: ಈಗ ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಪ್ರವಾಹ ಸಂತ್ರಸ್ತೆಯ ಪ್ರಶ್ನೆಗೆ ಮಳೆಯಲ್ಲೂ ಬೆವರಿದ ಕಂಗನಾ ರಣಾವತ್

ಕಂಗನಾರ ಹಳೆಯ ಹೇಳಿಕೆಯನ್ನು ಆಧರಿಸಿ ಅಳಗಿರಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. 2020 ರ ರೈತರ ಪ್ರತಿಭಟನೆಯ ಸಮಯದಲ್ಲಿ, ನಟಿ ಇಲ್ಲಿ ಮಹಿಳೆಯರು 100 ರೂಪಾಯಿ ಪಡೆದು ಪ್ರತಿಭಟನೆಯಲ್ಲಿ ಕುಳಿತಿದ್ದಾರೆ ಎಂದು ಪೋಸ್ಟ್​ ಮಾಡಿ ಬಳಿಕ ಅಳಿಸಿದ್ದರು. ಕಂಗನಾ ನಮ್ಮ ಘನತೆ, ಧೈರ್ಯ, ಬೆವರಿಗೆ ಬೆಲೆ ಇಲ್ಲ ಎಂದುಕೊಂಡಿದ್ದಾರೆ.

ಅಳಗಿರಿ ಹೇಳಿಕೆ

ಕೆಎಸ್‌ಕೆ ಅಳಗಿರಿ 2019 ರಿಂದ 2024 ರವರೆಗೆ ತಮಿಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಕೆಎಸ್‌ಕೆ ಅಳಗಿರಿಯನ್ನು ಅನುಭವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಕಡಲೂರು ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ. 1952ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರು ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ