2021ನೇ ಸಾಲಿನ ಭುವನ ಸುಂದರಿ(Miss Universe)ಯಾಗಿ ಆಯ್ಕೆಯಾದ ಹರ್ನಾಜ್ ಕೌರ್ ಸಂಧು(Harnaaz Kaur Sandhu) ನಿನ್ನೆ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹರ್ನಾಜ್ ಸಂಧು 70ನೇ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗುವ ಜತೆಗೆ ಬರೋಬ್ಬರಿ 21 ವರ್ಷದ ಬಳಿಕ ಭಾರತಕ್ಕೆ ಈ ಪಟ್ಟ ತಂದುಕೊಟ್ಟವರು. 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು. ಅದಾದ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿರಲ್ಲಿ. ಈ ಬಾರಿ ಪಂಜಾಬ್ನ ಸುಂದರಿ ಹರ್ನಾಜ್ ಸಂಧು ಆ ಗರಿಮೆ ಮುಡಿದಿದ್ದಾರೆ. ಮಿಸ್ ಯೂನಿವರ್ಸ್ ಆಯ್ಕೆಯ ಕೊನೇ ಹಂತದ ಸಮಾರಂಭದ ಇಸ್ರೇಲ್ನ ಐಲಾಟ್ನಲ್ಲಿ ಡಿಸೆಂಬರ್ 13ರಂದು ನಡೆದಿತ್ತು.
ಹರ್ನಾಜ್ ಸಂಧು ಅವರಿಗೆ ಈಗಾಗಲೇ ಹಲವು ಗಣ್ಯರು ಶುಭಕೋರಿದ್ದಾರೆ. ಈ ಮಧ್ಯೆ ಗಮನಸೆಳೆದಿದ್ದು, ಕಾಂಗ್ರೆಸ್ನ ಸಂಸದ ಶಶಿ ತರೂರ್. ಹರ್ನಾಜ್ ಸಂಧು ನಿನ್ನೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಶಶಿ ತರೂರ್ ಹೋಗಿ ಅವರನ್ನು ಭೇಟಿಯಾಗಿದ್ದಾರೆ. ನಂತರ ಟ್ವಿಟರ್ನಲ್ಲಿ ಮಿಸ್ ಯೂನಿವರ್ಸ್ ಹರ್ನಾಜ್ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಭುವನಸುಂದರಿ ಹರ್ನಾಜ್ ಕೌರ್ ಸಂಧು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆ. ಹರ್ನಾಜ್ ವಿಜಯದೊಂದಿಗೆ ಭಾರತಕ್ಕೆ ಮರಳಿದ್ದಾರೆ. ಭಾರತ ಹೆಮ್ಮೆಯಿಂದ ಅವರನ್ನು ಸ್ವಾಗತಿಸಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹರ್ನಾಜ್ ವೇದಿಕೆ ಮೇಲೆ ಹೇಗೆ ಆಕರ್ಷಕವಾಗಿ ಮತ್ತು ಸಮಚಿತ್ತದಿಂದ ಕಾಣಿಸಿಕೊಂಡಿದ್ದರೋ, ಹಾಗೇ ನೈಜವಾಗಿಯೂ ಇದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
Delighted to congratulate Miss Universe @HarnaazKaur Sandhu in person on her triumphant return to India. She’s excited to be back in India for the New Year holidays & India, of course, is proud to welcome her. She’s just as poised & charming in person as on the stage. pic.twitter.com/OBj0KeTkoQ
— Shashi Tharoor (@ShashiTharoor) December 15, 2021
ಇನ್ನು ಹರ್ನಾಜ್ ಕೌರ್ ಸಂಧು ಅವರು ಶಶಿ ತರೂರ್ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಶಶಿ ತರೂರ್ರನ್ನು ಭೇಟಿಯಾಗಿದ್ದು ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಚಂಡಿಗಢದ ಸಿಖ್ ಮನೆತದ ಹರ್ನಾಜ್ ಕೌರ್ ಸಂಧುಗೆ ಇದೀಗ 21 ವರ್ಷ.. ಅವರ ವಾರ್ಷಿಕ ಆದಾಯ ಒಂದು ಮಿಲಿಯನ್ ಡಾಲರ್ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಹರ್ನಾಜ್ 2017ರಲ್ಲಿ ಮಿಸ್ ಚಂಡೀಗಡ ಹಾಗೂ 2018ರಲ್ಲಿ ಮಿಸ್ ಮಾಕ್ಸ್ ಸ್ಟಾರ್ ಆಫ್ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್ನ ಫೆಮಿನಾ ಮಿಸ್ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದೀಗ 2021ರಲ್ಲಿ ಮಿಸ್ ಯುನಿವರ್ಸ್ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: T Natarajan: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಹುಟ್ಟೂರಿನಲ್ಲೇ ಸ್ವಂತ ಕ್ರಿಕೆಟ್ ಮೈದಾನ ಕಟ್ಟಿದ ಸ್ಟಾರ್ ಆಟಗಾರ