ಪಾಟ್ನಾ: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಪೋಸ್ಟ್ಗಳನ್ನು ಸೈಬರ್ ಕ್ರೈಮ್ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ಹೂಡುವ ಯೋಚನೆ ವಿವಾದಕ್ಕೀಡಾಗಿದೆ. ಈ ವಿವಾದವನ್ನು ಶಮನಗೊಳಿಸಲು ಪ್ರಯತ್ನಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ರಚನಾತ್ಮಕ ಟೀಕೆಯನ್ನು ಸ್ವಾಗತಿಸುತ್ತೇವೆ. ಸುಳ್ಳುಸುದ್ದಿ ಹಬ್ಬಿಸುವ, ಅವಮಾನ ಉಂಟುಮಾಡುವಂತಹ ಪೋಸ್ಟ್ಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಅವಶ್ಯ. ಆದರೆ, ರಚನಾತ್ಮಕ ಮತ್ತು ಗುಣಮಟ್ಟದ ಭಾಷೆಯಲ್ಲಿದ್ದರೆ ಮಾತ್ರ ಅವುಗಳು ಸ್ವೀಕಾರಾರ್ಹ. ವದಂತಿಗಳನ್ನು ಹಬ್ಬಿಸುವ, ಕೆಟ್ಟ ಭಾಷೆಯಲ್ಲಿ ತೆಗಳುವ ಪೋಸ್ಟ್ಗಳನ್ನು ಐಟಿ ಆ್ಯಕ್ಟ್ನಡಿ ಶಿಕ್ಷೆಗೆ ಒಳಪಡಿಸಬಹುದು ಎಂದು ಬಿಹಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ನಿನ್ನೆಯಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಪೋಸ್ಟ್ಗಳನ್ನು ಹಾಕುವವರನ್ನು ಶಿಕ್ಷಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈ ನಿರ್ಣಯ ವಿವಾದಕ್ಕೀಡಾಗುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.
Published On - 10:06 pm, Fri, 22 January 21