ಕೊರೊನಾ ನರ್ತನ: ರಾಜ್ಯ, ದೇಶ, ವಿಶ್ವದಾದ್ಯಂತ ಎಷ್ಟು ಮಂದಿಗೆ ಸೋಂಕು?

|

Updated on: May 03, 2020 | 6:41 AM

ಬೆಂಗಳೂರು: ಗುಪ್ತಗಾಮಿನಿಯಂತೆ ಹರಡುತ್ತಿರುವ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ. 602ಸೋಂಕಿತರಲ್ಲಿ 271 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 601 ಜನರ ಪೈಕಿ 25 ಜನ ಮೃತಪಟ್ಟಿದ್ದಾರೆ. ಉಳಿದ304 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: ಭಾರತದಲ್ಲಿ ಒಟ್ಟು […]

ಕೊರೊನಾ ನರ್ತನ: ರಾಜ್ಯ, ದೇಶ, ವಿಶ್ವದಾದ್ಯಂತ ಎಷ್ಟು ಮಂದಿಗೆ ಸೋಂಕು?
Follow us on

ಬೆಂಗಳೂರು: ಗುಪ್ತಗಾಮಿನಿಯಂತೆ ಹರಡುತ್ತಿರುವ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ. 602ಸೋಂಕಿತರಲ್ಲಿ 271 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 601 ಜನರ ಪೈಕಿ 25 ಜನ ಮೃತಪಟ್ಟಿದ್ದಾರೆ. ಉಳಿದ304 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 37,776
ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 1,223
ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 10,018
ದೇಶದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 26,535

ಜಗತ್ತಿನಲ್ಲಿ ಕೊರೊನಾ ಸೋಂಕಿತರ ಅಪ್ಡೇಟ್ಸ್​:
ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ- 34,80,452
ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 2,44,609
ವಿಶ್ವದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 11,08,065

ಅಮೆರಿಕ-11,60,414 ಜನರಿಗೆ ಸೋಂಕು, 67,409 ಜನ ಬಲಿ
ಇಟಲಿ-2,09,328 ಜನರಿಗೆ ಸೋಂಕು, 28,710 ಜನ ಬಲಿ
ಸ್ಪೇನ್-2,45,567 ಜನರಿಗೆ ಸೋಂಕು, 25,100 ಜನ ಬಲಿ
ಫ್ರಾನ್ಸ್-1,68,396 ಜನರಿಗೆ ಸೋಂಕು, 24,760 ಜನ ಬಲಿ
ಯುಕೆ-1,82,260 ಜನರಿಗೆ ಸೋಂಕು, 28,131 ಜನ ಬಲಿ

Published On - 6:40 am, Sun, 3 May 20