ನವದೆಹಲಿ: ಕೊರೊನಾದ ಕ್ರೂರತನಕ್ಕೆ ವಿಶ್ವ ಸಮೂಹ ಬೆಚ್ಚಿಬಿದ್ದಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸ್ತಾನೆ ಇದೆ. ಏನೇನೋ ಕಂಟ್ರೋಲ್ ಮಾಡಿ, ಸೂಪರ್ ಪವರ್ ಅನ್ನಿಸಿಕೊಂಡಿದ್ದ ರಾಷ್ಟ್ರಗಳು ಕೂಡ ಈ ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗದೆ ತತ್ತರಿಸಿ ಹೋಗಿವೆ. ಈ ಹೊತ್ತಿನಲ್ಲೇ ಭಾರತ ವಿಶ್ವಕ್ಕೆ ಮಾದರಿಯಾಗುತ್ತಿದೆ. ಅದೊಂದು ವಿಸ್ಮಯಕಾರಿ ಚಿಕಿತ್ಸಾ ವಿಧಾನದಿಂದಾಗಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ.
ಪ್ರಳಯ ಆಗುತ್ತೆ ಈ ಜಗತ್ತು ಮುಳುಗೇ ಹೊಗುತ್ತೆ ಅನ್ನೋ ಮಾತುಗಳು ಆಗಾಗ ಜನರನ್ನ ಭಯಬೀಳಿಸುತ್ತಲೇ ಇರ್ತವೆ. ಆದ್ರೆ ಅದ್ಯಾವುದೂ ಇದುವರೆಗೆ ನಡೆಯದೇ ಹೋದರೂ, ಪ್ರಳಯದ ರೂಪದಲ್ಲಿ ಅಥವಾ ಜಗತನ್ನೇ ನಾಶ ಮಾಡಲು ಕೊರೊನಾ ಅನ್ನೋ ಪೀಡೆ ವಕ್ಕರಿಸಿಯಾಗಿದೆ.
ಹಂತ ಹಂತವಾಗಿ ಇಡೀ ಮನುಕುಲವನ್ನೇ ಮುಗಿಸೋದಕ್ಕೆ ಸ್ಕೆಚ್ ಹಾಕಿದ್ದ ಕಿಲ್ಲರ್ ಕೊರೊನಾ ವಿರುದ್ಧ ಹೋರಾಡಲು ಅತ್ಯುತ್ತಮವಾದ ಮದ್ದುಸಿಕ್ಕಿದೆ. ಈ ಮೂಲಕ ಕೊರೊನಾ ಹುಟ್ಟಡಗಿಸಲು ವೈದ್ಯಲೋಕ ಸಜ್ಜಾಗಿದೆ. ಹಂತ ಹಂತವಾಗಿ ಪ್ಲಾಸ್ಮಾ ಚಿಕಿತ್ಸಾ ವಿಧಾನ ಸಕ್ಸಸ್ ಆಗ್ತಾ ಬರ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಕ್ಸಸ್!
ಯೆಸ್, ಕೊರೊನಾ ವಿರುದ್ಧದ ಹೋರಾಟಕ್ಕೆ ಬ್ರಹ್ಮಾಸ್ತ್ರವೊಂದು ಸಿಕ್ಕಿದೆ. ದಿನೇ ದಿನೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಹೊತ್ತಲ್ಲೇ ಪ್ಲಾಸ್ಮಾ ಟ್ರೀಟ್ಮೆಂಟ್ ಗೇಮ್ ಚೇಂಜರ್ ಸ್ಥಾನ ಅಲಂಕರಿಸಿದೆ. ಈಗಾಗ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸಾ ವಿಧಾನ ಅನುಸರಿಸಿ, ಸಕ್ಸಸ್ ಕಾಣಲಾಗಿದೆ.
2625 ಸೋಂಕಿತರನ್ನು ಇದುವರೆಗೂ ದೆಹಲಿಯೊಂದರಲ್ಲೇ ಪತ್ತೆ ಹಚ್ಚಲಾಗಿದ್ದು, ಈ ಪೈಕಿ 869 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದು ಹೊಸ ಭರವಸೆ ಮೂಡಿಸಿದೆ. ಅದರಲ್ಲೂ ಕ್ರಿಟಿಕಲ್ ಆಗಿದ್ದ ಸೋಂಕಿತನಿಗೆ ಪ್ಲಾಸ್ಮಾ ಟ್ರೀಟ್ಮೆಂಟ್ ನೀಡಲಾಗಿದ್ದು, ರೋಗಿ ಆರೋಗ್ಯದಲ್ಲಿ ಭಾರಿ ಚೇತರಿಕೆ ಕಂಡುಬಂದಿದೆ ಅಂತಾ ದೆಹಲಿ ಸಿಎಂ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಸೋಂಕಿತರಿಗೆ ಬಿಗ್ ರಿಲೀಫ್ ನೀಡಿದ್ರೆ ಕೇಜ್ರಿವಾಲ್ಗಂತೂ ಸಖತ್ ಖುಷಿ ಕೊಟ್ಟಿದೆ.
ರಾಜ್ಯದಲ್ಲೂ ಆರಂಭವಾಗಿದೆ ‘ಪ್ಲಾಸ್ಮಾ ಥೆರಪಿ’ ಟ್ರೀಟ್ಮೆಂಟ್!
ಕರ್ನಾಟಕದಲ್ಲೂ ಸೋಂಕಿತರನ್ನು ಗುಣಪಡಿಸಲು ಪ್ಲಾಸ್ಮಾ ಥೆರಪಿ ಅನುಸರಿಸಲಾಗುತ್ತಿದೆ. ನಿನ್ನೆಯಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನಕ್ಕೆ ಚಾಲನೆ ನೀಡ್ಲಾಗಿದೆ. ಕ್ರಿಟಿಕಲ್ ಕಂಡೀಷನ್ನಲ್ಲಿ ಇರುವವರನ್ನ ಪ್ಲಾಸ್ಮಾ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ.
ಗೇಮ್ ಚೇಂಜರ್ ‘ಪ್ಲಾಸ್ಮಾ’!
‘ಪ್ಲಾಸ್ಮಾ’ ಅಂದ್ರೆ ಬೇರೇನೂ ಅಲ್ಲ ಇದು ದ್ರವರೂಪದಲ್ಲಿರುವ ರೋಗ ನಿರೋಧಕ ಕಣಗಳ ಸಮೂಹ. ಅಂದಹಾಗೆ ‘ಪ್ಲಾಸ್ಮಾ ಥೆರಪಿ’ ಮೂಲಕ ಕೊರೊನಾ ಸೋಂಕಿತ ವ್ಯಕ್ತಿಯಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಲಾಗುತ್ತೆ. ಮತ್ತೊಂದು ವಿಶೇಷತೆ ಅಮದ್ರೆ ರಕ್ತದಾನ ಮಾಡುವ ರೀತಿಯಲ್ಲೇ ‘ಪ್ಲಾಸ್ಮಾ ದಾನ’ ಪ್ರಕ್ರಿಯೆಯನ್ನೂ ನಡೆಸಲಾಗುತ್ತೆ. ಆದರೆ ‘ಪ್ಲಾಸ್ಮಾ’ಗೆ ರಕ್ತದ ರೀತಿ ಕೆಂಪು ಬಣ್ಣ ಇರುವುದಿಲ್ಲ, ಬದಲಾಗಿ ‘ಪ್ಲಾಸ್ಮಾ’ ಬಿಳಿ ಬಣ್ಣದ್ದಲ್ಲಿಯೇ ಲಭ್ಯವಿರುತ್ತದೆ. ಈ ಮೊದಲು ಕೊರೊನಾದಿಂದ ಗುಣಮುಖನಾದ ವ್ಯಕ್ತಿಯಿಂದ ಪ್ಲಾಸ್ಮಾ ಸಂಗ್ರಹಿಸಲಾಗುತ್ತದೆ.
ನಂತರ ‘ಕೊರೊನಾ’ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿ ದೇಹಕ್ಕೆ ಇದೇ ‘ಪ್ಲಾಸ್ಮಾ’ ಟ್ರಾನ್ಸ್ಫರ್ ಮಾಡುತ್ತಾರೆ. ಚಿಕಿತ್ಸೆಯಲ್ಲಿ ಸೋಂಕಿನಿಂದ ಗುಣಮುಖರಾದ ಬಳಿಕ ಒಬ್ಬ ವ್ಯಕ್ತಿ 2 ಡೋಸ್ ‘ಪ್ಲಾಸ್ಮಾ’ ಕೊಡುವಷ್ಟು ಶಕ್ತನಾಗಿರುತ್ತಾನೆ. ಹಾಗೆ ಒಬ್ಬ ಸೋಂಕಿತನಿಗೆ 1 ಡೋಸ್ ‘ಪ್ಲಾಸ್ಮಾ’ ಕೊಡಬೇಕಿರುವ ಹಿನ್ನೆಲೆಯಲ್ಲಿ, ಇಬ್ಬರನ್ನು ಗುಣಮಾಡಬಹುದು.
ಈ ಮೊದಲು ‘ಕೊರೊನಾ’ ವಿರುದ್ಧ ಹೋರಾಡಿದ ಪರಿಣತಿ ಮೇಲೆ ‘ಪ್ಲಾಸ್ಮಾ’ ಹೊಸ ದೇಹದಲ್ಲಿ ಌಕ್ಟಿವ್ ಆಗುತ್ತದೆ. ಹೀಗೆ ಹೊಸ ದೇಹ ಸೇರಿದ ಬಳಿಕ ಕೊರೊನಾ ವೈರಸ್ ನಾಶಪಡಿಸಲು ‘ಪ್ಲಾಸ್ಮಾ’ ಹೋರಾಟ ಆರಂಭ ಮಾಡುತ್ತದೆ. ಇದೆಲ್ಲದರ ನಂತರ ಪ್ಲಾಸ್ಮಾ ಥೆರಪಿ ಪರಿಣಾಮ ಕೊರೊನಾ ಸೋಂಕಿತ ವ್ಯಕ್ತಿ ಅಲ್ಪಕಾಲದಲ್ಲೇ ಚೇತರಿಕೆ ಕಂಡು ಡಿಸ್ಚಾರ್ಜ್ ಆಗುತ್ತಾನೆ.
ಒಟ್ನಲ್ಲಿ ಸಂಕಷ್ಟದ ಸ್ಥಿತಿಯಲ್ಲಿ ಪ್ಲಾಸ್ಮಾ ಪ್ಲಾನ್ ಭಾರತದ ಕೈಹಿಡಿದಿದೆ. ICMR ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟು, ಪ್ಲಾಸ್ಮಾ ಥೆರಪಿ ವಿಧಾನ ಪ್ರೋತ್ಸಾಯಿಸ್ತಿದೆ. ಈ ಮೂಲಕ ವಿಶ್ವದ ಎದುರು ಭಾರತ ಮತ್ತೊಮ್ಮೆ ಡಿಫರೆಂಟ್ ಹೆಜ್ಜೆ ಹಾಕುತ್ತಾ, ಅದರಲ್ಲಿ ಸಕ್ಸಸ್ ಕಾಣ್ತಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ.
Published On - 6:28 am, Mon, 27 April 20