ದೆಹಲಿ: ಕೊವಿಡ್ ಬಾಧಿತ ವಲಯಗಳ ನೆರವಿಗೆ ಮತ್ತೊಮ್ಮೆ ಧಾವಿಸಿರುವ ಕೇಂದ್ರ ಸರ್ಕಾರವು ₹ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಯನ್ನು ಘೋಷಿಸಿದೆ. ಕೊವಿಡ್ 2ನೇ ಅಲೆಯಿಂದಾಗಿ ನಷ್ಟ ಅನುಭವಿಸಿದ ವಲಯಗಳ ಸುಧಾರಣೆಗೆ ಈ ನಿಧಿಯ ಬಳಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಕೊರೊನಾ ಬಾಧಿತ ವಲಯಗಳಿಗಾಗಿ ಆತ್ಮನಿರ್ಭರ್ ಭಾರತ್ ಸೇರಿದಂತೆ ಹಲವು ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಿತ್ತು. ₹ 21 ಲಕ್ಷ ಕೋಟಿಯಷ್ಟು ಮೊತ್ತದ ಆರ್ಥಿಕ ಮತ್ತು ಇತರ ರೂಪದ ನೆರವನ್ನು ಇದು ಹೊಂದಿತ್ತು. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ (Gross Domestic Product – GDP) ಪ್ಯಾಕೇಜ್ ಶೇ 10ರಷ್ಟು ಮೊತ್ತದ ಪರಿಹಾರ ಇದಾಗಿತ್ತು.
ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದ ಜೂನ್ ತಿಂಗಳ ಮಾಸಿಕ ಬುಲೆಟಿನ್ ಪ್ರಕಟವಾದ ನಂತರ ಸಚಿವರ ನೆರವಿನ ಹೇಳಿಕೆ ಪ್ರಕಟವಾಗಿರುವುದು ಗಮನಾರ್ಹ ಸಂಗತಿ. ಕೊವಿಡ್ 2ನೇ ಅಲೆಯು ದೇಶದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳನ್ನು ಬಾಧಿಸುತ್ತಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕುಸಿತವಾಗಲಿದೆ. ಇದರಿಂದ ದೇಶಕ್ಕೆ ಈ ಬಾರಿ ಸುಮಾರು ₹ 2 ಲಕ್ಷ ಕೋಟಿಯಷ್ಟು ಆರ್ಥಿಕ ನಷ್ಟ ಆಗಬಹುದು ಎಂದು ಆರ್ಬಿಐ ಅಂದಾಜಿಸಿತ್ತು. ಜೂನ್ ತಿಂಗಳ ಆರಂಭದಲ್ಲಿ ಸರ್ಕಾರ ಪ್ರಕಟಿಸಿದ್ದ ಮಾಹಿತಿ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇ 7.3ರಷ್ಟು ಕುಸಿದಿದೆ.
(Covid Stimulus Package Finance Minister Nirmala Sitharaman Announces Loan Guarantee Scheme)
ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗೆ ಹೆಚ್ಚಿನ ಹಣ ನೀಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ
Published On - 4:14 pm, Mon, 28 June 21