ಈಗಲೇ ಶಾಲೆಗಳ ಆರಂಭದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಂಭವ: ಟಾಸ್ಕ್​ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್

| Updated By: guruganesh bhat

Updated on: Jun 22, 2021 | 6:00 PM

ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳು ಡೆಲ್ಟಾ ಪ್ರಭೇದದ ವೈರಸ್ ವಿರುದ್ಧ ಪರಿಣಾಮಕಾರಿಯಾಗಿವೆ. ಜೂನ್ 21 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ88 ಲಕ್ಷ ಡೋಸ್ ಲಸಿಕೆ ನೀಡಲಾಗಿದೆಯೇ ಹೊರತು, ಅದೊಂದು ಅಚಾನಕ್ ಸಾಧನೆ ಅಲ್ಲ ಎಂದು ಡಾ.ರಾಜೇಶ್ ಭೂಷಣ್ ಸ್ಪಷ್ಟಪಡಿಸಿದರು.

ಈಗಲೇ ಶಾಲೆಗಳ ಆರಂಭದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಂಭವ: ಟಾಸ್ಕ್​ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್
ಡಾ. ವಿ.ಕೆ.ಪೌಲ್​
Follow us on

ದೆಹಲಿ: ಶಾಲೆಗಳು ಜನದಟ್ಟಣೆ ಉಂಟಾಗುವ ಪ್ರದೇಶವಾಗಿದ್ದು, ಮಕ್ಕಳು ಪರಸ್ಪರ ಹತ್ತಿರದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ದೇಶದಲ್ಲಿ ಶಾಲೆಗಳನ್ನು ಮತ್ತೆ ಆರಂಭಿಸಿದರೆ ಕೊವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಶಾಲೆ ಆರಂಭಿಸುವ ಬಗ್ಗೆ ಮೂರ್ನಾಲ್ಕು ಇಲಾಖೆಗಳು ಚರ್ಚಿಸಿ ನಿರ್ಧರಿಸಬೇಕಿದೆ. ಜನರು ಗಣನೀಯ ಪ್ರಮಾಣದಲ್ಲಿ ಲಸಿಕೆ ಪಡೆದಾಗ ಮಾತ್ರ ಶಾಲೆ ಆರಂಭಿಸುವ ರಿಸ್ಕ್ ತೆಗೆದುಕೊಳ್ಳಬಹುದು ಎಂದು ಕೊವಿಡ್ ಟಾಸ್ಕ್​ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಮತ್ತು ನಿರ್ವಹಣೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಹೊಸ ಲಸಿಕಾ ನೀತಿ ಜಾರಿಯಾದ ಮೊದಲ ದಿನವೇ ಉತ್ತಮ ಸಾಧನೆ ಮಾಡಲಾಗಿದೆ. ಇದರಿಂದ ದೇಶದ ಸಾಮರ್ಥ್ಯವನ್ನು ಅಂದಾಜಿಸಬಹುದಾಗಿದೆ. ಇದೇ ಶ್ರಮವನ್ನು ರಾಜ್ಯಗಳು ಮುಂದುವರಿಸಿದರೇ ಗ್ರಾಮಗಳಲ್ಲೂ ಲಸಿಕೆ ವಿತರಣೆ ಬಗ್ಗೆ ಉತ್ಸಾಹ ಮೂಡಲಿದೆ. ನಿನ್ನೆಯ ಸಾಧನೆ ದೇಶದ ಕೊವಿಡ್ ಸಮಸ್ಯೆಗಳನ್ನು ತಡೆಯಬಹುದು ಎಂಬ ಭರವಸೆ ನೀಡಿದೆ. ದೇಶದಲ್ಲಿ  ಒಂದೇ ದಿನ 7-8 ಕೋಟಿ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಿದ ಉದಾಹರಣೆ ಇದೆ ಎಂದು ಅವರು ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.  ನಿನ್ನೆ ಲಸಿಕೆ ಪಡೆದವರಲ್ಲಿ ಶೇ.43 ರಷ್ಟು ಮಹಿಳೆಯರಿದ್ದು, ಲಸಿಕೆ ಪಡೆಯುವಲ್ಲಿ ಲಿಂಗ ಅಸಮತೋಲನ ಉಂಟಾಗಿದೆ. ಈ ಅಸಮತೋಲನ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.

ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಮತ್ತು ನಿರ್ವಹಣೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಕೇಂದ್ರ ಆರೋಗ್ಯ ಇಲಾಖೆಯ ಡಾ.ರಾಜೇಶ್ ಭೂಷಣ್, ನಿನ್ನೆ (ಜೂನ್ 21) ಗ್ರಾಮೀಣ ಪ್ರದೇಶಗಳಲ್ಲಿ ಶೇ.63 ರಷ್ಟು, ನಗರ ಪ್ರದೇಶಗಳಲ್ಲಿ ಶೇ.36.3 ಲಸಿಕೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೇಶದ 553 ಜಿಲ್ಲೆಯಲ್ಲಿ ಈಗ ಶೇ.5 ಕ್ಕಿಂತ ಕಡಿಮೆ ಕೊವಿಡ್ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರವನ್ನು ಶೇ‌.5 ಕ್ಕಿಂತ ಕಡಿಮೆಗೆ ಇಳಿಸಲು ಸೂಚಿಸಿದೆ. ಜೂನ್​​ 20ರಂದು 135 ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಸಕ್ರಿಯ ಕೊವಿಡ್ ಪ್ರಕರಣಗಳಿವೆ. ದೇಶದಲ್ಲಿ ಈಗ 6.62 ಲಕ್ಷ ಕೊರೊನಾ ಸಕ್ರಿಯ ಕೇಸ್​ಗಳಿದ್ದು, ದೇಶದಲ್ಲಿ ಈಗ ಗುಣಮುಖ ಪ್ರಮಾಣ ಶೇಕಡಾ 96.5ರಷ್ಟಿದೆ ಎಂದು ಡಾ.ರಾಜೇಶ್ ಭೂಷಣ್ ತಿಳಿಸಿದರು.

ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳು ಡೆಲ್ಟಾ ಪ್ರಭೇದದ ವೈರಸ್ ವಿರುದ್ಧ ಪರಿಣಾಮಕಾರಿಯಾಗಿವೆ. ಜೂನ್ 21 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ88 ಲಕ್ಷ ಡೋಸ್ ಲಸಿಕೆ ನೀಡಲಾಗಿದೆಯೇ ಹೊರತು, ಅದೊಂದು ಅಚಾನಕ್ ಸಾಧನೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಕೊವಿಡ್ 19 ನಿರ್ವಹಣೆ ಬಗ್ಗೆ ಶ್ವೇತಪತ್ರ ಹೊರಡಿಸಿದ ರಾಹುಲ್​ ಗಾಂಧಿ; ಜೀವ ಉಳಿಸಿದ್ದು ಪ್ರಧಾನಿ ಕಣ್ಣೀರಲ್ಲ ಎಂದ ಕಾಂಗ್ರೆಸ್​ ಸಂಸದ

ಕೊವಿಡ್​ 19 ಲಸಿಕೆ ವಿಚಾರದಲ್ಲಿ ರಾಜಕೀಯ, ವಿವಾದ ಮಾಡುವುದನ್ನು ನಿಲ್ಲಿಸಿ: ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್​

(Covid task force chief VK Paul says number of Covid cases has increase if we begin the school in this situation)