ಬಿಜೆಪಿ ನಾಯಕನ ಮನೆಯ ಮುಂದೆ ಸಗಣಿ ಸುರಿದ ಪ್ರತಿಭಟನಾ ರೈತರು; ಸಿಎಂ ಅಮರೀಂದರ್ ಖಡಕ್​ ಎಚ್ಚರಿಕೆ

ಬಿಜೆಪಿ ಮುಖಂಡನ ಮನೆ ಎದುರು ಸಗಣಿ ಸುರಿದು ರೈತರ ವಿರುದ್ಧ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಿಡಿಕಾರಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನಾಯಕನ ಮನೆಯ ಮುಂದೆ ಸಗಣಿ ಸುರಿದ ಪ್ರತಿಭಟನಾ ರೈತರು; ಸಿಎಂ ಅಮರೀಂದರ್ ಖಡಕ್​ ಎಚ್ಚರಿಕೆ
ಮಾಜಿ ಸಚಿವನ ಮನೆಯ ಅಂಗಳದಲ್ಲಿ ಸುರಿದ ಸಗಣಿ

Updated on: Jan 02, 2021 | 12:52 PM

ಚಂಡಿಗಢ​: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್​​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪೊಂದು ಶುಕ್ರವಾರ ಒಂದು ಟ್ರಾಲಿಯಷ್ಟು ಹಸುವಿನ ಸೆಗಣಿಯನ್ನು ತಂದು ಬಿಜೆಪಿ ನಾಯಕನ ಮನೆ ಮುಂದೆ ಚೆಲ್ಲಿದೆ.

ಒಂದು ಟ್ರ್ಯಾಕ್ಟರ್​ ಟ್ರ್ಯಾಲಿ ತುಂಬ ಸಗಣಿಯನ್ನು ಹೊತ್ತು ತಂದ ರೈತರ ಗುಂಪು ಅದನ್ನು ಪಂಜಾಬ್​ನ ಹೋಶಿಯಾರ್​ಪುರದದಲ್ಲಿರುವ ಮಾಜಿ ಬಿಜೆಪಿ ಸಚಿವ ಟಿಕ್ಷನ್ ಸೂದ್ Tikshan Sood ಮನೆಯ ಹೊರಗೆ ಸುರಿದಿದೆ. ನಂತರ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇನ್ನು ಬಿಜೆಪಿ ಮುಖಂಡನ ಮನೆ ಎದುರು ಸಗಣಿ ಸುರಿದ ರೈತರ ವಿರುದ್ಧ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಿಡಿಕಾರಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ರಾಜಕಾರಣಿಯ ಮನೆಯ ಆವರಣ ಪ್ರವೇಶಿಸುವುದನ್ನೆಲ್ಲ ಮಾಡುವ ಹಾಗಿಲ್ಲ ಎಂದು ಹೇಳಿದ್ದಾರೆ.

ದೆಹಲಿ ಚಳಿಗೆ ಚಳುವಳಿಕಾರರು ಗಡಗಡ! ಆಹಾರ ರವಾನಿಸಿದ್ದು ಸಾಕು; ಬೆಚ್ಚಗಿನ ಉಡುಪು, ಇನ್ನಷ್ಟು ಜನರನ್ನು ಕಳಿಸಿ ಅನ್ನುತ್ತಿದ್ದಾರೆ!

Published On - 12:21 pm, Sat, 2 January 21