ಹೈದರಾಬಾದ್: ಅದಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತೀವ್ರತರ ಪರಿಣಾಮ ಬೀರುತ್ತಿರುವ ಅಂಫಾನ್ ಚಂಡಮಾರುತ ಇದೀಗ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ. ಸದ್ಯ ಲಘು ಚಂಡಮಾರುತವಾಗಿ ಉತ್ತರ ವಾಯವ್ಯ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದು, ಇದರ ಪ್ರಭಾವದಿಂದಾಗಿ ಉಭಯ ತೆಲುಗು ರಾಜ್ಯಗಳಲ್ಲಿ ಮೇಘಾವೃತ ವಾತಾವರಣ, ಸದ್ಯ ಒಡಿಶಾದ ಪಾರಾದೀಪಕ್ಕೆ 780 ಕಿ.ಮಿ ದೂರದಲ್ಲಿ ಲಘು ತೂಫಾನ್ ರೂಪದಲ್ಲಿ ಸಾಗುತ್ತಿದೆ.
ಮಂದಿನ 12 ಗಂಟೆಗಳಲ್ಲಿ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂದು ಹವಾಮಾನ ಇಲಾಖೆ ಎಲ್ಲೋ ಮೆಸ್ಸೆಜ್ ಬಿಡುಗಡೆ ಮಾಡಿದೆ. ಇದೇ 20 ರಂದು ಹತಿಯಾ ಐಲ್ಯಾಂಡ್ ಬಳಿ ತೀವ್ರ ತೂಫಾನ್ ಆಗಿ ಪರಿವರ್ತನೆಗೊಂಡು ತೀರವನ್ನು ದಾಟಲಿದೆ ಅಂಫಾನ್ ಸೈಕ್ಲೋನ್. ಇದರ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಸಮುದ್ರ ತೀರಗಳಲ್ಲಿ ಭಾರಿ ಬದಲಾವಣೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿನ ಬಂದರುಗಳಲ್ಲಿ ಅಧಿಕಾರಿಗಳು ಎರಡನೇ ನಂಬರಿನ ಎಚ್ಚರಿಕೆ ನೀಡಿದ್ದಾರೆ.
ಅಂಫಾನ್ ಚಂಡಮಾರುತದ ಪರಿಣಾಮ, ತಮಿಳುನಾಡಿನಲ್ಲಿಯೂ ಭಾರಿ ಬಿರುಗಾಳಿ ಮಳೆಗೆ ಮೀನುಗಾರರ ದೋಣಿಗಳು ಧ್ವಂಸಗೊಂಡಿವೆ. ರಾಮೇಶ್ವರಂ ಸಮುದ್ರ ಸೇರಿದಂತೆ ವಿವಿಧೆಡೆ ಅಂಫಾನ್ ಚಂಡಮಾರುತದಿಂದಾಗಿ ತೀವ್ರ ಬಿರುಗಾಳಿ, ಮಾರಕ ಅಲೆಗಳು ಎದ್ದಿವೆ. ಇದರಿಂದಾಗಿ ನೂರಕ್ಕೂ ಅಧಿಕ ಬೋಟ್ಗಳು ಛಿದ್ರಗೊಂಡಿವೆ. ತೀವ್ರ ಗಾಳಿಗೆ ಬೋಟುಗಳು ವಿವಿಧ ತೀರಗಳಿಗೆ ಕೊಚ್ಚಿಕೊಂಡು ಹೋಗಿವೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಹೈಲೆವಲ್ ಮೀಟಿಂಗ್: ಅಂಫಾನ್ ಚಂಡಮಾರುತ ಪರಿಸ್ಥಿತಿ ಅಧ್ಯಯನಕ್ಕಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹೈಲೆವಲ್ ಮೀಟಿಂಗ್ ನಡೆದಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗೃಹ ಖಾತೆ, ವಿಪತ್ತು ತುರ್ತು ನಿರ್ವಹಣೆ ಅಧಿಕಾರಿಗಳನ್ನೊಳಗೊಂಡ ಉನ್ನತ ಸಭೆ ನಡೆದಿದೆ.
‘ಅಂಫಾನ್’ ಚಂಡಮಾರುತಕ್ಕೆ ಮೀನುಗಾರ ಬಲಿ: ಆಂಧ್ರದ ವಿಜಯನಗರ ಜಿಲ್ಲೆಯ ಪತಿವಾಢ ಬರಿವಾಡ ಗ್ರಾಮದ ಮೀನುಗಾರ ಸಾವಿಗೀಡಾಗಿದ್ದಾನೆ. ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಪಲ್ಟಿಯಾದಾಗ ಆತ ಸಾವನ್ನಪ್ಪಿದ್ದಾನೆ.
Just realized a cyclone is hitting India’s east coast & BD #Amphan pic.twitter.com/hV5zeUd4Mu
— Basu (@Basuduttsinha) May 14, 2020
Published On - 5:56 pm, Mon, 18 May 20