ಕೊರೊನಾ ಭೀತಿ: ಭಾರತ ಕಳಿಸಿದ್ದ ಮಾತ್ರೆಯನ್ನ 1 ವಾರ ಸೇವಿಸಿದ್ದಾರಂತೆ ಟ್ರಂಪ್!
ದೆಹಲಿ: ಅಮೆರಿಕ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ದೇಶ. ಹೀಗಾಗಿ ಸಹಜವಾಗಿಯೇ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸೋಂಕಿನ ಆತಂಕ ಹೆಚ್ಚಿದೆ. ಅಲ್ಲದೆ ಟ್ರಂಪ್ ವೈಯಕ್ತಿಕ ಸಿಬ್ಬಂದಿಗೆ ಕೊರೊನಾ ಇರುವುದೂ ದೃಢಪಟ್ಟಿತ್ತು. ಅಲ್ಲಿಂದ ಟ್ರಂಪ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಸುಮಾರು ಒಂದು ವಾರ ಭಾರತದ ಹೈಡ್ರಾಕ್ಸಿಕ್ಲೋರಿಕ್ವಿನ್ ಮಾತ್ರೆ ಸೇವಿಸಿದ್ದಾರಂತೆ! HCQ ಮಾತ್ರೆ ಸುರಕ್ಷಿತವಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ರೂ ಈ ಮಾತ್ರೆ ಸೇವಿಸಿದರೆ ಕೊರೊನಾದಿಂದ ತಪ್ಪಿಸಿಕೊಳ್ಳಬಹುದು […]
ದೆಹಲಿ: ಅಮೆರಿಕ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ದೇಶ. ಹೀಗಾಗಿ ಸಹಜವಾಗಿಯೇ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸೋಂಕಿನ ಆತಂಕ ಹೆಚ್ಚಿದೆ. ಅಲ್ಲದೆ ಟ್ರಂಪ್ ವೈಯಕ್ತಿಕ ಸಿಬ್ಬಂದಿಗೆ ಕೊರೊನಾ ಇರುವುದೂ ದೃಢಪಟ್ಟಿತ್ತು. ಅಲ್ಲಿಂದ ಟ್ರಂಪ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಸುಮಾರು ಒಂದು ವಾರ ಭಾರತದ ಹೈಡ್ರಾಕ್ಸಿಕ್ಲೋರಿಕ್ವಿನ್ ಮಾತ್ರೆ ಸೇವಿಸಿದ್ದಾರಂತೆ! HCQ ಮಾತ್ರೆ ಸುರಕ್ಷಿತವಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ರೂ ಈ ಮಾತ್ರೆ ಸೇವಿಸಿದರೆ ಕೊರೊನಾದಿಂದ ತಪ್ಪಿಸಿಕೊಳ್ಳಬಹುದು ಎಂದು ಟ್ರಂಪ್ ಭಾರತದ HCQ ಮಾತ್ರೆಗೆ ಮೊರೆ ಹೋಗಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರೆ ಸೇವಿಸಿದ ಬಗ್ಗೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ವರದಿಯಾಗಿದೆ.
Published On - 12:22 pm, Tue, 19 May 20