TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide

ಸಾಧು ಶ್ರೀನಾಥ್​

|

Updated on:May 19, 2020 | 5:34 PM

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ. ಇದಕ್ಕೆ ಹೊಣೆ […]

TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ.

ಇದಕ್ಕೆ ಹೊಣೆ ಯಾರು?: ಹೆಂಡತಿ ಟಿಕ್​ಟಾಕ್ ಮಾಡುತ್ತಿದುದ್ದನ್ನು ನೋಡಿದ ಗಂಡ ಟಿಕ್​ಟಾಕ್ ವಿಡಿಯೋ ಮಾಡ ಬೇಡ ಎಂದು ಬೈದಿದ್ದಾನೆ. ಅದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾಗದೆ, ಮಗ ಕೂಡ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದಲ್ಲಿ ಈಗ ವಿಷಾದ ರಾಗವೇ ಕೇಳಿಬರುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಅಕ್ಕಪಕ್ಕದ ಜನ ಮಾತನಾಡಿಕೊಳ್ಳುವಂತಾಗಿದೆ.  ವಿಜಯವಾಡ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada