ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬಿಪರ್ಜಾಯ್(Biparjoy) ಚಂಡಮಾರುತವು ಕರಾವಳಿಯತ್ತ ವೇಗವಾಗಿ ಚಲಿಸುತ್ತಿದೆ. ಇದರ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡು ಬರುತ್ತಿದೆ. ಕೇರಳ, ಕರ್ನಾಟಕ ಮತ್ತು ಗೋವಾ ಮೂಲಕ ಹಾದು ಹೋದ ನಂತರ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಚಂಡಮಾರುತದ ಪ್ರಭಾವ ಕಂಡುಬರುತ್ತಿದೆ. ಚಂಡಮಾರುತ ಬಿಪರ್ಜಾಯ್ ಜೂನ್ 15 ರ ಸಂಜೆ ಸೌರಾಷ್ಟ್ರ ಮತ್ತು ಕಚ್ ತೀರಗಳನ್ನು ದಾಟುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಬಿಪರ್ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದೆ.
-ವಿದ್ಯುತ್ ಮತ್ತು ಅನಿಲ ಪೂರೈಕೆಯನ್ನು ಆಫ್ ಮಾಡಿ.
-ಹೆಚ್ಚಿನ ಭದ್ರತೆಗಾಗಿ, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ.
-ಚಂಡಮಾರುತವು ಪ್ರಭಾವ ಬೀರುವ ಮೊದಲು ಅಪಾಯಕಾರಿ ಪ್ರದೇಶಗಳಲ್ಲಿನ ನಿವಾಸಿಗಳು ಸಾಧ್ಯವಾದಷ್ಟು ಬೇಗ ಅಲ್ಲಿಂದ ಸ್ಥಳಾಂತರಗೊಳ್ಳುವುದು
– ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಅನ್ನು ಕೇಳಲು ಶಿಫಾರಸು ಮಾಡಲಾಗಿದೆ.
-ಕುದಿಸಿದ ಅಥವಾ ಕ್ಲೋರಿನೇಟೆಡ್ ನೀರನ್ನು ಮಾತ್ರ ಸೇವಿಸುವುದು ಬಹಳ ಮುಖ್ಯ.
ಮತ್ತಷ್ಟು ಓದಿ: Biporjoy Cyclone: 58 ವರ್ಷಗಳಲ್ಲಿ ಜೂನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಅತಿದೊಡ್ಡ ಚಂಡಮಾರುತ ಬಿಪರ್‌ಜೋಯ್ ಗುಜರಾತ್ನತ್ತ
ಹೊರಾಂಗಣದಲ್ಲಿ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ
ಹಾನಿಗೊಳಗಾದ ಕಟ್ಟಡಗಳಿಗೆ ಪ್ರವೇಶಿಸದಂತೆ ಸೂಚಿಸಲಾಗಿದೆ.
ಚಂಡಮಾರುತದ ಸಮಯದಲ್ಲಿ ಇರುವ ಗಾಳಿಯ ವೇಗದಿಂದಾಗಿ ಸಾಮಾನ್ಯ ವಸ್ತುಗಳು ಸಹ ಹಾನಿಕಾರಕವಾಗಬಹುದು.
ಆದ್ದರಿಂದ, ಜನರು ಮುರಿದ ಮರದ ಕೊಂಬೆಗಳು, ವಿದ್ಯುತ್ ತಂತಿಗಳು ಅಥವಾ ಕೇಬಲ್‌ಗಳಂತಹ ಯಾವುದೇ ವಸ್ತುಗಳನ್ನು ಮುಟ್ಟುವುದನ್ನು ತಪ್ಪಿಸಬೇಕು.
ನೀರು ಸರಬರಾಜು, ಅನಿಲ ಮತ್ತು ವಿದ್ಯುತ್ ಪೈಪ್‌ಲೈನ್‌ಗಳಲ್ಲಿ ಸೋರಿಕೆಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಸರಿಪಡಿಸಲು ಹೆಚ್ಚು ಸಲಹೆ ನೀಡಲಾಗಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಚಂಡಮಾರುತದ ಬಗ್ಗೆ ಮಾಹಿತಿ ಪಡೆದರು.
ಈ ಚಂಡಮಾರುತದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. ಇದಲ್ಲದೆ, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಿಪತ್ತು ನಿರ್ವಹಣಾ ಸಚಿವರೊಂದಿಗೆ ಸಭೆ ನಡೆಸಿದರು.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಗುಜರಾತ್ ಕರಾವಳಿಯ ಕಡೆಗೆ ತಿರುಗುವ ಮೊದಲು ಚಂಡಮಾರುತದ ವೇಗ ಸ್ವಲ್ಪ ಕಡಿಮೆಯಾಗಿದೆ.
ಮೊದಲು ಇದರ ವೇಗ 90 knots (167 kmph), ಇದು 85 knots (ಸುಮಾರು 157 kmph) ಗೆ ಇಳಿದಿದೆ. ಬಿಪರ್ಜಾಯ್ ಚಂಡಮಾರುತದಿಂದಾಗಿ, ಇಲ್ಲಿಯವರೆಗೆ ಅನೇಕ ಜನರನ್ನು ಸ್ಥಳಾಂತರಿಸಲಾಗಿದೆ.
ಎಸ್‌ಡಿಆರ್‌ಎಫ್‌ನ ತಲಾ ಎರಡು ತಂಡಗಳನ್ನು ಕಚ್, ಜಾಮ್‌ನಗರ ಮತ್ತು ದ್ವಾರಕಾದಲ್ಲಿ, ಜುನಾಗಢ್, ಪೋರಬಂದರ್, ಗಿರ್ ಸೋಮನಾಥ್, ಮೊರ್ಬಿ, ಪಟಾನ್ ಮತ್ತು ಬನಸ್ಕಾಂತದಲ್ಲಿ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ.
ಜುನಾಗಢ ಜಿಲ್ಲೆಯಲ್ಲಿ 500, ಕಚ್‌ನಲ್ಲಿ 6786, ಜಾಮ್‌ನಗರದಲ್ಲಿ 1500, ಪೋರಬಂದರ್‌ನಲ್ಲಿ 546, ದ್ವಾರಕಾದಲ್ಲಿ 4820, ಗಿರ್ ಸೋಮನಾಥ್‌ನಲ್ಲಿ 408, ಮೋರ್ಬಿಯಲ್ಲಿ 2000 ಮತ್ತು ರಾಜ್ಕೋಟ್ನಲ್ಲಿ 4031 ಜನರನ್ನು ಸ್ಥಳಾಂತರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ