ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಸಿಲಿಂಡರ್ ಸ್ಫೋಟ(Cylinder Blast) ಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಡುಗೆಮನೆಯಲ್ಲಿದ್ದ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಹಿಳೆ ಹೆದರುತ್ತಾ ಕೂಗಿಕೊಂಡು ಅಡುಗೆ ಮನೆಯಿಂದ ಹೊರಗೆ ಓಡಿದ್ದಾರೆ. ವ್ಯಕ್ತಿಯೊಬ್ಬರು ಅಡುಗೆ ಮನೆಯ ಬಳಿ ಬಂದು ಆಗಿರುವ ಅವಾಂತರವನ್ನು ನೋಡಿ ವಾಪಸ್ ಹೋಗಿರುವುದನ್ನು ಕಾಣಬಹುದು.
ಮಹಿಳೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ, ಆದರೆ ಅಡುಗೆ ಮನೆಯು ಸಂಪೂರ್ಣವಾಗಿ ಛಿದ್ರಗೊಂಡಿದೆ. ತುಂಬಿದ ಸಿಲಿಂಡರ್ ಅದಾಗಿರಲಿಲ್ಲ ಎಂಬುದು ತಿಳಿದುಬಂದಿದೆ, ಒಂದೊಮ್ಮೆ ಸಿಲಿಂಡರ್ ತುಂಬಿದ್ದರೆ ಸ್ಫೋಟದ ತೀವ್ರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇತ್ತು ಮತ್ತು ಮಹಿಳೆ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು.
ಜೂನ್ 6 ರಂದು ಘಟನೆ ನಡೆದಿದೆ, ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುವಾಗ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದಿರಬೇಕು. ಇಂತಹ ಘಟನೆಗಳನ್ನು ತಪ್ಪಿಸಲು ಸಿಲಿಂಡರ್ ಅನ್ನು ತೆರೆದ ಪ್ರದೇಶದಲ್ಲಿ ಇಡಬೇಕು.
ಗ್ಯಾಸ್ ಸ್ಫೋಟಕ್ಕೆ ಪ್ರಮುಖ ಕಾರಣ ಎಂದರೆ ಅದು ಗ್ಯಾಸ್ ಲೀಕೇಜ್. ಕೇವಲ 14 ಕೆಜಿ ಸಿಲಿಂಡರ್ ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲೀಕ್ ಆಗುವ ಗ್ಯಾಸ್ ಮಾಡುವ ಹಾನಿ ಅಪಾರ ಪ್ರಮಾಣದಲ್ಲಿರುತ್ತದೆ. ಕೇವಲ ಮನೆಯವರ ಪ್ರಾಣ ತೆಗೆಯುವುದು ಮಾತ್ರವಲ್ಲದೆ ಮನೆಯ ಗೋಡೆ, ಚಾವಣಿ ಎಲ್ಲವೂ ಸಹ ಗ್ಯಾಸ್ ಸಿಲಿಂಡರ್ ಸ್ಫೋಟದ ರಭಸಕ್ಕೆ ಹಾರಿ ಹೋಗುವ ಸಾಧ್ಯತೆ ಇರುತ್ತದೆ.
LPG cylinder explodes in the kitchen #wtf pic.twitter.com/XoaWFvabpj
— Klip Entertainment (@klip_ent) June 8, 2024
ಪ್ರಮುಖವಾಗಿ ಬಹುತೇಕ ಮನೆಗಳಲ್ಲಿ ಗ್ಯಾಸ್ ಲೀಕೆಜ್ ಗೆ ಕಾರಣ ಎಂದರೆ ಅದು ಗ್ಯಾಸ್ ಪೈಪ್. ಸಿಲಿಂಡರ್ ಭಾಗದಿಂದ ಸ್ಟೌ ಭಾಗಕ್ಕೆ ಕನೆಕ್ಟ್ ಆಗಿರುವ ರಬ್ಬರ್ ಪೈಪ್ ಎಂದು ಹೇಳಬಹುದು. ಇದನ್ನು ಎರಡು ಭಾಗದಲ್ಲಿ ಸರಿಯಾಗಿ ಫಿಟ್ ಮಾಡದಿದ್ದರೆ ಅಥವಾ ಕೆಲವೊಂದು ಕಡೆ ಒಡೆದು ಹೋಗಿದ್ದರೆ ಅದರಿಂದ ಗ್ಯಾಸ್ ಲೀಕೆಜ್ ಆಗುವ ಸಾಧ್ಯತೆ ಇರುತ್ತದೆ. ಇದು ಮೊದಲನೇ ಕಾರಣ.
ಮತ್ತಷ್ಟು ಓದಿ: ಮುಂಬೈ: ಸಿಲಿಂಡರ್ ಸ್ಫೋಟ, 10 ಮಂದಿಗೆ ಗಂಭೀರ ಗಾಯ
ಕೆಲವೊಮ್ಮೆ ಇದು ನಿಮಗೆ ಗೊತ್ತಿಲ್ಲದೇ ಆಗುತ್ತದೆ ಎಂದು ಹೇಳಬಹುದು. ಇನ್ನೊಂದು ಪ್ರಮುಖ ಕಾರಣ ಎಂದರೆ ಅದು ನಿಮಗೆ ಗೊತ್ತಾಗಿ ಸಹ ನಿಮ್ಮ ನಿರ್ಲಕ್ಷದಿಂದ ಉಂಟಾಗುವ ಸಮಸ್ಯೆ. ನೀವು ಒಲೆಯ ಮೇಲೆ ಯಾವುದಾದರೂ ಆಹಾರ ಪದಾರ್ಥವನ್ನು ಕುದಿಯಲು ಇಟ್ಟು ನಿಮ್ಮ ಪಾಡಿಗೆ ನೀವು ಸೋಫಾ ಮುಂದೆ ಟಿವಿ ನೋಡುತ್ತಾ ಕುಳಿತರೆ ಆಹಾರ ಉಕ್ಕಿ ಬಂದು ಅದು ಪೈಪ್ ಮೇಲೆ ಚೆಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ