ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿಯಿಂದ ಆಕೆಯ ಲಿವ್-ಇನ್ ಸಂಗಾತಿಯ ಹತ್ಯೆ

ಗರ್ಭಿಣಿ ಪತ್ನಿ ತನ್ನಿಂದ ದೂರವಾಗಿದ್ದರೂ, ಆಕೆಯನ್ನು ಹಿಂಬಾಲಿಸುವುದನ್ನು ಪತಿ ಬಿಟ್ಟಿರಲಿಲ್ಲ, ಹಾಗೆಯೇ ಆಕೆಯ ಲಿವ್-ಇನ್ ಸಂಗಾತಿ ಜತೆ ಮಾರ್ಕೆಟ್​ನಲ್ಲಿ ನಡೆದು ಹೋಗುತ್ತಿರುವಾಗ ಪತಿ ಆಕೆಯ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುಜರಾತ್​ನ ಜಾಮ್​ನಗರದಲ್ಲಿ ನಡೆದಿದೆ. ಸೋನಾಲ್​ಬೆನ್ ಎಂಬುವವರು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಮೇಲೆ ಪತಿ ಪದೇ ಪದೇ ಹಲ್ಲೆ ನಡೆಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಹೀಗಾಗಿಯೇ ಪತಿ ದಿಲೀಪ್​ನಿಂದ ದೂರವಾಗಿರುವುದಾಗಿ ತಿಳಿಸಿದ್ದಾರೆ.

ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿಯಿಂದ ಆಕೆಯ ಲಿವ್-ಇನ್ ಸಂಗಾತಿಯ ಹತ್ಯೆ
ಕ್ರೈಂ

Updated on: Dec 12, 2025 | 7:25 AM

ಜಾಮ್​ನಗರ, ಡಿಸೆಂಬರ್ 12: ಯಾವುದೋ ಕಾರಣಕ್ಕೆ ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿ ತನ್ನ ಹೆಂಡತಿಯ ಲಿವ್-ಇನ್ ಸಂಗಾತಿಯಲ್ಲಿ ಇರಿದು ಕೊಲೆ(Murder) ಮಾಡಿರುವ ಘಟನೆ ಗುಜರಾತ್​ನ ಜಾಮ್​ನಗರದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕೊಲೆಯಾದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ, ಆತನ ಪತ್ನಿ ಹಾಗೂ ಆಕೆಯ ಸಂಗಾತಿಯ ನಡುವಿನ ದೀರ್ಘಕಾಲದ ಸಂಘರ್ಷವೇ ಕಾರಣ ಎಂದು ಹೇಳಲಾಗುತ್ತಿದೆ.

ಸೋನಾಲ್​ಬೆನ್ ಎಂಬುವವರು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಮೇಲೆ ಪತಿ ಪದೇ ಪದೇ ಹಲ್ಲೆ ನಡೆಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಹೀಗಾಗಿಯೇ ಪತಿ ದಿಲೀಪ್​ನಿಂದ ದೂರವಾಗಿರುವುದಾಗಿ ತಿಳಿಸಿದ್ದಾರೆ. ಪತಿಯನ್ನು ಬೇರ್ಪಟ್ಟು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ತಾನು ಗರ್ಭಿಣಿಯಾದಾಗಿನಿಂದ ಪತಿ ದಿಲೀಪ್ ಈ ಮಗು ತನ್ನದಲ್ಲ ಎಂದು ಹೇಳುತ್ತಲೇ ಇರುತ್ತಿದ್ದರು. ಇದರಿಂದಾಗಿ ಅವರಿಂದ ಬೇರ್ಪಟ್ಟು ಜಿತೇಂದ್ರ ಚಾವ್ಡಾ ಜತೆ ವಾಸಿಸುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ.

ಸೋನಾಲ್​ಬೆನ್ ತನ್ನ ಸಂಗಾತಿ ಜತೆ ನಡೆದುಕೊಂಡು ಹೋಗುತ್ತಿರುವಾಗ ದಿಲೀಪ್ ಅವರನ್ನು ತಡೆದು ಜಗಳವಾಡಿದ್ದಾನೆ. ಚಾಕು ತೆಗೆದು ನಾಲ್ಕೈದು ಬಾರಿ ಜಿತೇಂದ್ರಗೆ ಇರಿದಿದ್ದಾರೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆಂದು ಆಕೆ ತಿಳಿಸಿದ್ದಾರೆ. ಕೂಡಲೇ ಜಿತೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದ.
ದಾಳಿಯನ್ನು ನೋಡಿದ ನಂತರ ಆಘಾತಕ್ಕೊಳಗಾದ ಸೋನಾಲ್ಬೆನ್, ದಿಲೀಪ್ ಜೊತೆಗಿದ್ದ ಮತ್ತೊಬ್ಬ ಅಪರಿಚಿತ ವ್ಯಕ್ತಿ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.

ಮತ್ತಷ್ಟು ಓದಿ: ಸ್ವಿಟ್ಜರ್​ಲೆಂಡ್​ನಲ್ಲಿ ಮಾಡೆಲ್​ ಕ್ರಿಸ್ಟಿನಾ ಬರ್ಬರ ಹತ್ಯೆ ಕೇಸ್, ಆಕೆಯ ದೇಹದಿಂದ ಗರ್ಭಕೋಶ ಹೊರ ತೆಗೆದಿದ್ದ ಪತಿ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಾಮ್‌ನಗರದ ಜಿಜಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ