ಸ್ವಿಟ್ಜರ್ಲೆಂಡ್ನಲ್ಲಿ ಮಾಡೆಲ್ ಕ್ರಿಸ್ಟಿನಾ ಬರ್ಬರ ಹತ್ಯೆ ಕೇಸ್, ಆಕೆಯ ದೇಹದಿಂದ ಗರ್ಭಕೋಶ ಹೊರ ತೆಗೆದಿದ್ದ ಪತಿ
ಕಳೆದ ವರ್ಷ ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಮಾಡೆಲ್ ಕೊಲೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯ ಮೇಲೆ ಹತ್ಯೆ ಆರೋಪ ಹೊರಿಸಲಾಗಿದೆ. ಪತಿ ಥಾಮಸ್ 2024ರಲ್ಲಿ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ಕತ್ತು ಹಿಸುಕಿ ಕೊಂದು, ದೇಹ ಕತ್ತರಿಸಿ ವಿಲೇವಾರಿ ಮಾಡಲು ಮುಂದಾಗಿದ್ದ. ಮಾಡೆಲ್‌ನ ದೇಹವನ್ನು ಜಿಗ್ಸಾ ಚಾಕು ಮತ್ತು ತೋಟಕ್ಕೆ ಬಳಕೆ ಮಾಡುವ ಗರಗಸದ ಮಾದರಿಯ ಅಸ್ತ್ರವನ್ನು ಬಳಸಿ ಆಕೆಯ ದೇಹವನ್ನು ಕತ್ತರಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ವಿಟ್ಜರ್ಲೆಂಡ್, ಡಿಸೆಂಬರ್ 11: ಸ್ವಿಟ್ಜರ್ಲೆಂಡ್ನಲ್ಲಿ 2024ರಲ್ಲಿ ನಡೆದ ಮಾಡೆಲ್ ಕ್ರಿಸ್ಟಿನಾ ಕೊಲೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯ ಮೇಲೆ ಹತ್ಯೆ ಆರೋಪ ಹೊರಿಸಲಾಗಿದೆ. ಪತಿ ಥಾಮಸ್ 2024ರಲ್ಲಿ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ಕತ್ತು ಹಿಸುಕಿ ಕೊಂದು, ದೇಹ ಕತ್ತರಿಸಿ ವಿಲೇವಾರಿ ಮಾಡಲು ಮುಂದಾಗಿದ್ದ. ಮಾಡೆಲ್‌ನ ದೇಹವನ್ನು ಜಿಗ್ಸಾ ಚಾಕು ಮತ್ತು ತೋಟಕ್ಕೆ ಬಳಕೆ ಮಾಡುವ ಗರಗಸದ ಮಾದರಿಯ ಆಯುಧಗಳ ಬಳಸಿ ಆಕೆಯ ದೇಹವನ್ನು ಕತ್ತರಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ ಆಕೆಯ ದೇಹದಿಂದ ಗರ್ಭಕೋಶವನ್ನು ಸಹ ಆತ ಹೊರತೆಗೆದಿದ್ದ, ಬಳಿಕ ದೇಹದ ಇತರೆ ಭಾಗಗಳನ್ನು ರಾಸಾಯನಿಕ ದ್ರಾವಣದಲ್ಲಿ ಕರಗಿಸಿದ್ದ. ಪತ್ನಿಯನ್ನು ಕೊಲ್ಲುವ ಮುನ್ನ ಆತ ಯೂಟ್ಯೂಬ್ನಲ್ಲಿ ವಿಡಿಯೋವನ್ನು ನೋಡಿದ್ದ. ಶವ ಪರೀಕ್ಷೆ ಸಮಯದಲ್ಲಿ ಥಾಮಸ್ ಆಕೆಯ ಸೊಂಟದ ಕೀಲುಗಳನ್ನು ಮುರಿದು, ದೇಹದೊಳಗಿನ ಇತರೆ ಅಂಗಾಂಶಗಳನ್ನು ಹೊರ ತೆಗೆದಿದ್ದಾನೆ, ಬಳಿಕ ಬೆನ್ನುಮೂಳೆಯನ್ನು ಕತ್ತರಿಸಿ, ಅಂತಿಮವಾಗಿ ಶಿರಚ್ಛೇದ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಥಾಮಸ್ 2017 ರಲ್ಲಿ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ವಿವಾಹವಾಗಿದ್ದರು. ಕ್ರಿಸ್ಟಿನಾ ಅವರ ದೇಹವನ್ನು ಅವರ ಲಾಂಡ್ರಿ ಕೋಣೆಯಲ್ಲಿ ಗರಗಸ, ಚಾಕು ಮತ್ತು ತೋಟದ ಕತ್ತರಿಗಳನ್ನು ಬಳಸಿ ಕ್ರಶ್ ಮಾಡಲಾಗಿತ್ತು. ಮಾಡೆಲ್‌ನ ಅವಶೇಷಗಳನ್ನು ಮೊದಲು ಪತ್ತೆ ಮಾಡಿದ್ದು ಕ್ರಿಸ್ಟಿನಾ ಅವರ ತಂದೆ, ಮನೆಯಲ್ಲಿ ಕಪ್ಪು ಚೀಲವೊಂದರಲ್ಲಿ ಹೊಂಬಣ್ಣದ ಕೂದಲನ್ನು ಮೊದಲು ಅವರು ನೋಡಿದ್ದರು.
ಮತ್ತಷ್ಟು ಓದಿ: ಅಮೆರಿಕದಿಂದ ಭಾರತಕ್ಕೆ ಬಂದು ಕೊಲೆ ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ ಎನ್ಆರ್ಐ
ಆರಂಭದಲ್ಲಿ ತನ್ನ ಪತ್ನಿ ಸತ್ತಿದ್ದಾಳೆಂದಷ್ಟೇ ಥಾಮಸ್ ಹೇಳಿಕೊಂಡಿದ್ದ, ಬಳಿಕ ಮಾರ್ಚ್ನಲ್ಲಿ ಆಕೆಯ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದಾಗ ತಾನು ಆತ್ಮರಕ್ಷಣೆಗಾಗಿ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ. ವಿಧಿ ವಿಜ್ಞಾನ ತಜ್ಞರಿಗೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಯೂ ಸಿಗಲಿಲ್ಲ. ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದನ್ನು ಕಂಡುಕೊಂಡರು.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆಕೆಯ ಪತಿಯನ್ನು ಬಂಧನದಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಸೆಲ್-ಲ್ಯಾಂಡ್‌ಶಾಫ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯು ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದೆ. ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಕ್ರಿಸ್ಟಿನೋ 2007 ರಲ್ಲಿ ಮಿಸ್ ಸ್ವಿಟ್ಜರ್‌ಲ್ಯಾಂಡ್‌ನ ಫೈನಲಿಸ್ಟ್ ಆಗಿದ್ದರು . 2013 ರ ಮಿಸ್ ಯೂನಿವರ್ಸ್‌ನಲ್ಲಿ ಕಾಣಿಸಿಕೊಳ್ಳುವ ಮೊದಲು ಡೊಮಿನಿಕ್ ರಿಂಡರ್‌ಕ್ನೆಕ್ಟ್ ಸೇರಿದಂತೆ ಹಲವಾರು ಮಾಡೆಲ್‌ಗಳಿಗೆ ಮಾರ್ಗದರ್ಶನ ನೀಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Thu, 11 December 25




