Breaking News: ಡಿಸೆಂಬರ್ 8ಕ್ಕೆ ಭಾರತ್ ಬಂದ್! ರೈತ ಒಕ್ಕೂಟಗಳ ಘೋಷಣೆ

|

Updated on: Dec 05, 2020 | 11:16 AM

ಪಂಜಾಬ್ ರೈತರು ಡಿಸೆಂಬರ್ 8ರಂದು ಭಾರತ್ ಬಂದ್ ಘೋಷಿಸಿದ್ದಾರೆ.

Breaking News: ಡಿಸೆಂಬರ್ 8ಕ್ಕೆ ಭಾರತ್ ಬಂದ್! ರೈತ ಒಕ್ಕೂಟಗಳ ಘೋಷಣೆ
ಪ್ರತಿಭಟನಾಕಾರರನ್ನು ತಡೆಯಲು ನೆರೆದ ಪೊಲೀಸ್ ಪಡೆ
Follow us on

ದೆಹಲಿ: ಪಂಜಾಬ್ ರೈತರು ಡಿಸೆಂಬರ್ 8ರಂದು ಭಾರತ್ ಬಂದ್​ಗೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಒಮ್ಮತ ಮೂಡದ ಕಾರಣ ದೆಹಲಿ ಚಲೋ ಬಂದ್ ಸ್ವರೂಪ ಪಡೆಯಲಿದೆ. ದೆಹಲಿಯ ಎಲ್ಲ ಟೋಲ್ ಬೂತ್​ ಮತ್ತು ರಸ್ತೆಗಳನ್ನು ಬಂದ್ ಮಾಡಲಿದ್ದೇವೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ 9 ದಿನಗಳಿಂದ ಪಂಜಾಬ್​ನ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕೇಂದ್ರದ ಜೊತೆ ಹಲವು ಸುತ್ತಿನ ಸಭೆ ನಡೆಸಿದ ನಂತರವೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬಂದ್​ಗೆ ಕರೆ ಕೊಡಲಾಗಿದೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.

ಪ್ರಧಾನಿ ಪ್ರತಿಕೃತಿ ದಹನ, ಪ್ರಶಸ್ತಿ ವಾಪಸ್

ಡಿಸೆಂಬರ್ 5 ರಂದು ಪ್ರಧಾನಿ, ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿಯನ್ನು ದಹಿಸಲು ರೈತರು ನಿರ್ಧರಿಸಿದ್ದಾರೆ.  ಡಿಸೆಂಬರ್ 7 ರಂದು ಹಲವು ಕ್ರೀಡಾಪಟುಗಳು ಪ್ರಶಸ್ತಿ ವಾಪಸ್ ಮಾಡಲಿದ್ದಾರೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.

Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

Published On - 5:40 pm, Fri, 4 December 20